COVID-19 Resources for Mental Health Coaches... Learn More
“ರೋಗಿಗಳ ಪಾಲಿನ ಸಂಜೀವಿನಿ ಈ ವೈದ್ಯರು”
ನಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಆದಾಗ, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವಾಗ ನೋವು ಶಮನಗೊಳಿಸಿ, ಧೈರ್ಯ ತುಂಬಿ ಹೊಸ ಜೀವನಕ್ಕೆ ದಾರಿ ಮಾಡಿಕೊಟ್ಟ ನಮ್ಮ ನೆಚ್ಚಿನ ವೈದ್ಯರನ್ನು ಒಂದು ಕ್ಷಣ ನೆನಪಿಸಿಕೊಳ್ಳೋಣ. ಬಡವ ಬಲ್ಲಿದರೆಂಬ ಭೇದ ಭಾವವಿಲ್ಲದೇ, ಹಗಲು ರಾತ್ರಿ ಎನ್ನುವ ಹೊತ್ತುಗೊತ್ತಿನ ಪರಿವೆ ಇಲ್ಲದೇ ಸದಾ ನಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ನಿಸ್ವಾರ್ಥವಾಗಿ ಶ್ರಮಿಸುವ ವೈದ್ಯರಿಗೆ ಕೃತಜ್ಞತೆ ಸಮರ್ಪಿಸುವ ದಿನವೇ ರಾಷ್ಟ್ರೀಯ ವೈದ್ಯರ ದಿನ. ರೋಗಿಗಳ ಪಾಲಿನ ಸಂಜೀವಿನಿಯಾದ ವೈದ್ಯರಿಗೆ ನಮೋ ನಮಃ. ಮನುಷ್ಯ ಅಂದಮೇಲೆ ಆರೋಗ್ಯದಲ್ಲಿ ಏರುಪೇರು ಸಹಜ. ನಾನಾ ತರಹದ ಕಾಯಿಲೆಗಳಿಗೆ ಪರಿಹಾರ ಸೂಚಿಸುವ ಮೂಲಕ ವೈದ್ಯರು ನೆಮ್ಮದಿ ನೀಡುತ್ತಾರೆ. 10 ಯಾವುದೇ ಆಸ್ಪತ್ರೆಗೆ ಹೋಗಿ ನೋಡಿದರೂ ವೈದ್ಯರು ಪ್ರೀತಿಯಿಂದ ರೋಗಿಗಳ ಶುಶೂಷೆ ಮಾಡುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತದೆ. ಆಸ್ಪತ್ರೆಗಳಲ್ಲಿ ಕಾಣುವ ನೋವು, | ಡಾ. ಆದಿತ್ಯ ಪಾಂಡುರಂಗಿ (ಎಂಬಿಬಿಎಸ್, ಎಂಡಿ) ಸಹಾಯಕ ಪ್ರಾಧ್ಯಾಪಕರು, ಡಿಮ್ಹಾನ್ಸ್, ಧಾರವಾಡ ಗದ್ದಲಗಳ ಮಧ್ಯದಲ್ಲಿ, ಹಗಲು ರಾತ್ರಿ ಎನ್ನದೇ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಸಂಯಮ, ಪ್ರೀತಿ ಮತ್ತು ಮುಖದಲ್ಲಿ ನಗು ಇದೆಲ್ಲಾ ಹೇಗೆ ಸಾಧ್ಯ ಎಂದು ಅಚ್ಚರಿಯೂ ಆಗುತ್ತದೆ. ಇಂದಿನ ದಿನಗಳಲ್ಲಿ ವೈದ್ಯ ಮನೋಭಾವನೆಯ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಮಾತಿದೆ. ಕೆಲ ಪ್ರಕರಣಗಳಲ್ಲಿ ಅದು ನಿಜವಾದರೂ ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವ ಅನೇಕ ವೈದ್ಯರು ವೃತ್ತಿಧರ್ಮದಲ್ಲಿ ಉತ್ತಮ ನಡವಳಿಕೆಯನ್ನೇ ತೋರುತ್ತಾರೆ. ಎಲ್ಲ ಕ್ಷೇತ್ರಗಳಂತೆ ಇಲ್ಲೂ ವೈಪರೀತ್ಯಗಳಿವೆ ನಿಜ. ವೈದ್ಯಕೀಯ ಕ್ಷೇತ್ರ ವಾಣಿಜೀಕರಣಗೊಂಡಿದೆ ಎಂಬ ಆರೋಪದ ಮಧ್ಯೆಯೂ ಸೇವಾಕಾಂಕ್ಷೆಯುಳ್ಳ ವೈದ್ಯರು ನಮ್ಮ ಮಧ್ಯೆ ಅನೇಕರಿದ್ದಾರೆ. ದೇಶದ ವಿವಿಧೆಡೆ ವೈದ್ಯರ ಮೇಲೆ ಆಗುತ್ತಿರುವ ಹಲ್ಲೆಯಂಥ ಘಟನೆಗಳನ್ನು ನೋಡಿ ಮನಸ್ಸಿಗೆ ಬೇಸರವಾಗುತ್ತದೆ. ಯಾವುದೇ ವೈದ್ಯರು ತನ್ನ ಹತ್ತಿರ ಬಂದ ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ಕೊಡಬೇಕೆಂದು ಪ್ರಯತ್ನಿಸುತ್ತಾರೆ. ತನ್ನ ಹತ್ತಿರ ಬಂದ ಜನರಿಗೆ ತೊಂದರೆ ಅಥವಾ ನೋವಾಗಲಿ ಎಂದು ಯಾರೂ ಅಂದುಕೊಳ್ಳುವುದಿಲ್ಲ. ಪ್ರಜ್ಞಾವಂತ ಸಾಮಾಜವಾಗಿ ನಾವೆಲ್ಲರೂ ನಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು. ಜತೆಗೆ ವೈದ್ಯರೂ ಆತ್ಮವಿಮರ್ಶೆ ಮಾಡಿಕೊಂಡು ತಮ್ಮ ನಂಬಿಕೆ ಇರಲಿ ನಿಮ್ಮ ವೈದ್ಯರ ಮೇಲೆ ಪೂರ್ಣ ಭರವಸೆ ಇಡಿ. ನಿಮ್ಮ ಎಲ್ಲ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ಕ್ಷಣಾರ್ಧದಲ್ಲಿ ಕಾಯಿಲೆ ವಾಸಿಯಾಗಬೇಕು ಎಂದು ವೈದ್ಯರ ಮೇಲೆ ಅನಗತ್ಯ ಒತ್ತಡ ಹಾಕಬೇಡಿ. ಅನಗತ್ಯವಾಗಿ ಅಂತರ್ಜಾಲದ ಮಾಹಿತಿಯನ್ನು ವೈದ್ಯರ ಬಳಿ ತಿಳಿಸಿ ತಮ್ಮ ಅಲ್ಪ ಜ್ಞಾನದಿಂದ ವೈದ್ಯರ ದಾರಿ ತಪ್ಪಿಸಬೇಡಿ. ರೋಗದ ಮಹತ್ವದ ಪಾಲು ರೋಗಿ ವೈದ್ಯರ ಮೇಲಿಟ್ಟಿರುವ ನಂಬಿಕೆಯ ತಳಹದಿಯಲ್ಲೇ ಗುಣವಾಗುತ್ತದೆ ಎಂದು ಇತ್ತೀಚಿನ ಸಂಶೋಧನೆಯ ವರದಿಯೊಂದು ಹೇಳುತ್ತದೆ. ನಮ್ರತೆ ಇರಲಿ ವಸ್ತುಸ್ಥಿತಿ ಏನೇ ಇರಲಿ. ಕಷ್ಟಗಳಿಂದ ಮುಕ್ತಿ ಕೊಟ್ಟು ನಮ್ಮ ಬದುಕನ್ನು ಸಹ್ಯವಾಗಿ ಮಾಡಿರುವ ವೈದ್ಯರಿಗೆ ನಮ್ರವಾಗಿ ನಮಿಸೋಣ. ಹೃದಯವಂತ ವೈದ್ಯರ ಸಂಖ್ಯೆ ಹೆಚ್ಚಾಗಲಿ, ಹೃದಯವಂತ ವ್ಯಕ್ತಿಗಳನ್ನು ರೂಪಿಸುವ ಸಮಾಜದ ಶಕ್ತಿ ಹೆಚ್ಚಲಿ ಹೆಚ್ಚಲಿ ಎಂದು ಹಾರೈಸೋಣ. ವೈದ್ಯಕೀಯ ವೃತ್ತಿ ಧರ್ಮ ಪಾಲಿಸಿದಲ್ಲಿ ಸುಂದರ, ಸದೃಢ ಸಮಾಜ ನಿರ್ಮಿಸಬಹುದು. ಬದಲಾದ ಸನ್ನಿವೇಶದಲ್ಲಿ ವೈದ್ಯ ಮತ್ತು ರೋಗಿಗಳ ನಡುವಿನ ಸಂಬಂಧ ದಾರಿ ತಪ್ಪಿದೆ. ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ದಿನಗಳಲ್ಲಿ ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತಿವೆ. ಅದೇ ರೀತಿ ಹಲವು ರೋಗಿಗಳೂ ವೈದ್ಯರನ್ನು ಸಂಪೂರ್ಣ ವಿಶ್ವಾಸದಿಂದ ನೋಡುವ ಸ್ಥಿತಿಯಲ್ಲಿಲ್ಲ. ಒಬ್ಬ ವೈದ್ಯರು ಸೂಚಿಸಿದ ಪದ್ದತಿ ಅನುಸರಿಸದೇ ಎಡವಟ್ಟು ಮಾಡಿಕೊಂಡಿರುವ ಉದಾಹರಣೆಗಳಿವೆ. ಯಾರದ್ದೋ ಮಾತು ಕೇಳಿ, ಬೇಗ ಗುಣಮುಖನಾಗಲಿಲ್ಲ ಎಂದು ವೈದ್ಯರನ್ನು ದೂರುವುದು ಎಷ್ಟು ಸರಿ ? ವೈದ್ಯರು ಹಾಗೂ ರೋಗಿಗಳ ನಡುವಿನ ಸಂಬಂಧ ಬೆಲೆ ಕಟ್ಟಲಾಗದ್ದು. ಈ ಪವಿತ್ರ ಬಂಧವನ್ನು ಪೋಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವೈದ್ಯರೂ ಮನುಷ್ಯರು. ಅವರಿಗೂ ವೈಯಕ್ತಿಕ ಜೀವನ ಇರುತ್ತದೆ. ಅವರ ಭಾವನೆಗಳಿಗೂ ಸ್ಪಂದಿಸಬೇಕಾದುದು ಸಮಾಜದ ಕರ್ತವ್ಯ. ಹೀಗಾದರೆ, ವೈದ್ಯರು- ರೋಗಿಗಳ ನಡುವೆ ಸುಮಧುರ ಬಾಂಧವ್ಯ ಬೆಳೆಯುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ.