COVID-19 Resources for Mental Health Coaches... Learn More

0836-2773878

“ರೋಗಮುಕ್ತಿಗೆ ರಾಗೋಪಚಾರ: ಡಾ. ಆನಂದ ಪಾಂಡುರಂಗಿಯವರಿಂದ ಸಂಗೀತದ ಮಾಂತ್ರಿಕತೆ ಬಿಚ್ಚಿಟ್ಟ ಉಪನ್ಯಾಸ”


ಧಾರವಾಡ,ಜ.22: ಸಂಗೀತ ಕೇಳುವುದರಿಂದ ಮತ್ತು ಅದರ ಇಂಪಿನಿಂದ ರೋಗಿಗಳು ಗುಣಮುಖರಾಗಿದ್ದನ್ನು ಕಾಣಬಹುದ ಎಂದುಧಾರವಾಡಕರ್ನಾಟಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ. ಎಚ್.ಎ. ಕಟ್ಟಿ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಉತ್ತರಾದಿಮಠದತ್ತಿಕಾರ್ಯಕ್ರಮದ ಪೂರ್ವಭಾವಿಯಾಗಿ ಮಹಿಳಾ ಮತ್ತು ಭಜನಾ ಮಂಡಳಿಗಳಿಗಾಗಿ ಆಯೋಜಿಸಿದ್ದ ಶ್ರೀಹರಿದಾಸರು ರಚಿಸಿದ ವಿನಾಯಕನ ಹಾಡುಗಳ ಸ್ಪರ್ಧೆಯನ್ನುಖಂಜೀರಾ ನುಡಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಂಗೀತಕ್ಕೆ ಒಂದು ಸತ್ ಪರಂಪರೆಇದೆ.ಸಂಗೀತ ಆಲಿಸುವುದರಿಂದಆರೋಗ್ಯ ಸುಧಾರಣೆ ಮತ್ತು ಮನಸ್ಸು ಹಗುರವಾಗುತ್ತದೆ. ಆನಂದವಾಗುತ್ತದೆ. ಜೀವನ ಪಾವನ ಮಾಡಿಕೊಳ್ಳಬೇಕೆಂದರೆ ಸಂಗೀತ ಹಾಡಬೇಕುಇಲ್ಲವೆ ಶಾಂತಚಿತ್ತರಾಗಿ ಕೇಳಬೇಕು. ಬೇರೆ ಬೇರೆ ರಾಗಗಳಿಗೆ ಬೇರೆ ಬೇರೆ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ.ಮನದ ಶಾಂತಿಗಾಗಿ, ಸಕಲ ಆರೋಗ್ಯ ಭಾಗ್ಯಕ್ಕಾಗಿ ನಾವೆಲ್ಲರೂ ಸಂಗೀತವನ್ನು ಆರಾಧಿಸೋಣ.ಮಹಿಳೆಯರಿಗಾಗಿ ಇಂತಹಅಪರೂಪದಕಾರ್ಯಕ್ರಮ ಆಯೋಜನೆ ಮಾಡಿರುವ ಸಂಘದಕಾರ್ಯವು ಶ್ಲಾಘನೀಯವಾದುದುಎಂದ ಅವರುಡಾ. ರಾಜಕುಮಾರಅವರೊಂದಿಗಿನ ಭಾವನಾತ್ಮಕ, ಭಕ್ತಿಗೀತೆ ಹಾಡುಗಾರಿಕೆಕುರಿತು ಸ್ಮರಿಸಿಕೊಂಡರು.ಕು.ಜಯತಿಗುತ್ತಲ ಪ್ರಾರ್ಥಿಸಿದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶೇಷರಾಜಗುತ್ತಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಂಕರ ಕುಂಬಿ ನಿರ್ವಹಿಸಿದರು. ಸತೀಶತುರಮರಿ ಗೌರವಿಸಿದರು. ಮಾಯಾಚಿಕ್ಕೇರೂರಕಾರ್ಯಕ್ರಮ ಸಂಯೋಜಿಸಿದರು. ಧಾರವಾಡಆಕಾಶವಾಣಿ ಮತ್ತು ದೂರವಾಣಿಕಲಾವಿದಡಾ. ಅನೀಲ ಮೇತ್ರಿ ಹಾಗೂ ಹಿರಿಯ ಸಂಗೀತ ಕಲಾವಿದ ವಾದಿರಾಜ ನಿಂಬರಗಿ ಸ್ಪರ್ಧೆಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಸ್ಪರ್ಧೆಯಲ್ಲಿ 25 ಕ್ಕೂ ಹೆಚ್ಚು ಮಹಿಳಾ ಹಾಗೂ ಭಜನಾ ಮಂಡಳಗಳು ಭಾಗವಹಿಸಿದ್ದು ವಿಶೇಷವಾಗಿತ್ತು

About Author:

Leave Your Comments

Your email address will not be published. Required fields are marked *