COVID-19 Resources for Mental Health Coaches... Learn More

0836-2773878

“ರಾಷ್ಟ್ರೋತ್ಥಾನ ವಿದ್ಯಾಲಯ, ಮುಮ್ಮಿಗಟ್ಟಿಯಲ್ಲಿ ಡಾ. ಆನಂದ ಪಾಂಡುರಂಗಿಯ ಪ್ರೇರಣಾದಾಯಕ ಸಂದೇಶ “


ಧಾರವಾಡ ರಾಷೋತ್ಥಾನ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಮಾರಂಭವನ್ನು ಡಾ. ಆನಂದ ಪಾಂಡುರಂಗಿ ಉದ್ಘಾಟಿಸಿದರು. ರಾಘವೇಂದ್ರ ಅಂಬೇಕರ, ಕುಮಾರಸ್ವಾಮಿ ಕುಲಕರ್ಣಿ, ಮಹಾಂತೇಶ ಮಠಪತಿ, ಪದ್ಮಾವತಿ ಜೈನರ, ಇದ್ದರು. ಮಕ್ಕಳಿಗೆ ಮಾನವೀಯ ಮೌಲ್ಯ ಕಲಿಸಲಿ ಇಂದಿನ ದಿನಗಳಲ್ಲಿ ಪಾಲಕರು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸುವುದು ಅಗತ್ಯವಾಗಿದೆ. ಮೌಲ್ಯಗಳನ್ನು ಕಲಿಯಲು ಸೂಕ್ತ ಶಾಲೆಗಳು ಪಾಲಕರ ಆಯ್ಕೆಯಾಗಬೇಕು ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.ಇಲ್ಲಿನ ಮುಮ್ಮಿಗಟ್ಟಿಯ ರಾಷೋತ್ಥಾನ ವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಉತ್ಥಾನ ಭಾರತ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಮನೆಯಲ್ಲಿ ಪುಸ್ತಕಗಳ ಸಂಗ್ರಹ ಮಾಡಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ವಿದ್ಯಾಕೇಂದ್ರದ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ಹಾಗೂ ರಾಷ್ಟ್ರ ಪರಿಷತ್‌ಗೆ 60 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಇದ್ದೇವೆ. ಈ ವರ್ಷ ಪಂಚ ಪರಿವರ್ತನೆ ಶೀರ್ಷಿಕೆಯಲ್ಲಿ ತನ್ನ ಕಾರ್ಯ ಯೋಜನೆಗಳನ್ನು ಮತ್ತಷ್ಟು ಉತ್ಸಾಹದಿಂದ ಮಾಡುತ್ತಿದೆ ಎಂದರು. 1ರಿಂದ 5ನೇ ತರಗತಿ ವಿಭಾಗದಲ್ಲಿ ಆರಾಧ್ಯ ಪೂಜಾರ, 6 ರಿಂದ 10ನೇ ತರಗತಿಯಲ್ಲಿ ಗುರುಪ್ರಸಾದ ಸವಣೂರು ಅವರಿಗೆ ಆದರ್ಶ ವಿದ್ಯಾರ್ಥಿಗಳು ಎಂದು ಆಯ್ಕೆ ಮಾಡಿ ಬಹುಮಾನ ನೀಡಲಾಯಿತು. ಆಡಳಿತಾಧಿಕಾರಿ ಕುಮಾರಸ್ವಾಮಿ ಕುಲಕರ್ಣಿ, ಮುಖ್ಯಾಧ್ಯಾಪಕ ಮಹಾಂತೇಶ ಮಠಪತಿ, ಸಹ ಮುಖ್ಯಾಧ್ಯಾಪಕಿ ಪದ್ಮಾವತಿ ಜೈನರ, ಶಿಕ್ಷಕ ಎನ್. ಎಂ. ಜಂತಲಿ, ರೇಖಾ ಅಂಬೇಕರ, ಪಾರ್ವತಿ ದಂಡಿನ ಇತರರು ಇದ್ದರು. ರೇಖಾ ಯಲಿಗಾರ ಸ್ವಾಗತಿಸಿದರು. ಮಂಜುಳಾ ಹಂಪಣ್ಣವರ ನಿರೂಪಿಸಿದರು. ಪೂರ್ಣಿಮಾ ದೊಡ್ಡಮನಿ ವಂದಿಸಿದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು

About Author:

Leave Your Comments

Your email address will not be published. Required fields are marked *