COVID-19 Resources for Mental Health Coaches... Learn More
“ರಾಷ್ಟೋತನ ರಕ್ತ ಕೇಂದ್ರ ವತಿಯಿಂದ ಸಂಚಾರಿ ರಕ್ತ ಸಂಗ್ರಹ”
ಧಾರವಾಡ: ರಕ್ತದಾನ ಮಹಾದಾನ, ದಾನಿಗಳು ರಕ್ತ ದಾನ ಮಾಡುವ ಮೂಲಕ ಜೀವ ಉಳಿಸಲು ಮುಂದಾ ಗಬೇಕೆಂದು ಖ್ಯಾತ ಮನೋ ವೈದ್ಯ ಡಾ. ಆನಂದ ಪಾಡುರಂಗಿ ಕರೆ ನೀಡಿದರು. ಮಂಗಳವಾರ ನಗರದ ಕೆಸಿಡಿ ವೃತದಲ್ಲಿ ನಡೆದ ರಾಷ್ಟೋತ್ಥನ ರಕ್ತ ಕೇಂದ್ರ ವತಿಯಿಂದ ಸಂಚಾರಿ ರಕ್ತ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು . ಪ್ರತಿ ಮಂಗಳವಾರ ನಡೆಯುವ ಈ ಶಿಬಿರವು ಇದೆ ಸ್ಥಳದಲ್ಲಿ ನಡೆಯಲ್ಲಿದ್ದು ರಕ್ತದಾನ ಮಾಡಿ ಜೀವ ಉಳಿಸಿ ಎಂದರು.
ಇಂದಿನ ದಿನಮಾನಗಳ್ಳಿ ಜೀವನ ಕಳೆಯುವುದು ಒಂದು ದೊಡ್ಡ ಸಾದನೆ ಅಂದರೆ, ಆರೋಗ್ಯವಂತರಾಗಿ ಬಾಳು ವುದು ಮುಖ್ಯವಾಗಿದೆ. ಈಗಿನ ಆಹಾರ ಪದ್ದತ್ತಿಯು ಅದರಲ್ಲಿಯು ಯುವಕ / ಯುವತಿಯರ ಆಹಾರ ಕೇವಲ ಆದು ನಿಕ ಪದ್ಧತಿಯದಾಗಿದೆ.
ಇದರಿಂದಾಗಿ ಆರೋಗ್ಯದ ಮೇಲೆ ಅನೇಕ ಪರಿಣಾಮಗಳು ಉಂಟಾಗುತ್ತಿದ್ದು ಸಾಮಾನ್ಯವಾಗಿದೆ. ಇಂತಹ ಸಮಯದಲ್ಲಿ ಆರೋಗ್ಯ ಹಾಳಾಗುತ್ತಿರುವುದು. ಮತ್ತು ಇದರಿಂದ ಯುವಕರು ರಕ್ತದಾನ ಮಾಡಿದರು. ಅನೇಕ ಸಮಸ್ಯೆಗಳು ಆಗುತ್ತಿರುದು ಸಾಮಾನ್ಯ. ಹೀಗಾಗಿ ಆರೋಗ್ಯ ಒಳೆಯದಾದರ, ಯಾವ ಸಮಸ್ಯೆಯು ಬರಲಾರದು. ಸಮಸ್ಯೆ ಬಾರದ ಹಾಗೆ ನಾವು ಕಾಳಜಿ ವಹಿಸೊಣ ಮತ್ತು ಅನಾರೊಗ್ಯ ಪೀಡಿತರಿಗೆ ಬರಬಹುದಾದ ರಕ್ತದ ಸಮಸ್ಯೆಗೆ ನಾವೆಲ್ಲರು ರಕ್ತದಾನ ಮಾಡುವ ಮೂಲಕ ಒಂದು ಜೀವಕ್ಕೆ ರಕ್ಷಣೆ ನೀಡುವುದಲ್ಲದೆ, ರಕ್ತದಾನ ಮಾಡುವುದರಿಂದ ಯಾವುದೆ ಸಮಸ್ಯೆಗಳು ಬರಲಾರವು. ಎಂದು ಹೇಳಿದರು. ಈ ಸಮಯದಲ್ಲಿ ಅನೇಕ ಈ ಸಂಧರ್ಬದಲ್ಲಿ ಡಾ. ಎಮ್ ಕಾಳುಂಕೆ. ದತ್ತಮೂರ್ತಿ ಕುಲ್ಕರ್ಣಿ, ಸುದೇಂದ್ರ ದೇಸಪಾಂಡೆ, ವಿಜಯಾನಂದ ಶೆಟ್ಟಿ, ಸುರೇಶ ಬೇದರೆ, ಮೋಹನ ರಾಮದುರ್ಗ, ಸಿದ್ದು ಅಂಗಡಿ, ವಿನೋದ ಕುಮಾರ ಪಟ್ಟಾ, ಕೀರಣ ಗುಡ್ಡದ, ನರೇಂದ್ರ ಕುಲ್ಕರ್ಣಿ. ಸಂದಿಪ ಸಾಬಳೆ, ಭಾರತಿ ಕಲಾಲ, ಆನಂದ ದಾಸರ, ದ್ಯಾಮಣ್ಣ ಜೋಗಣನವರ, ಸಂಪೋಷ ಬೇಟಗೇರಿ, ಕುಮಾಖ ಪೂಜಾರ , ವೇಂಕಟೆಸ ಸಿಂಗಣ್ಣನವರ ಹಾಗು ಅನೇಕರು ಉಪಸ್ತಿತರಿದ್ದರು.