COVID-19 Resources for Mental Health Coaches... Learn More

0836-2773878

ರಾಜ್ಯಮಟ್ಟದ ಮನೋವೈದ್ಯರ ಸಮ್ಮೇಳನ ಎಸ್‌ಡಿಎಂನಲ್ಲಿ 31ರಿಂದ ಆರಂಭ

ಭಾರತೀಯ ಮನೋವೈದ್ಯರ ಸಂಘದ ಕರ್ನಾಟಕ ಶಾಖೆ ವತಿಯಿಂದ ಧಾರವಾಡದ ಸತ್ತೂರಿನ ಎಸ್‌ಡಿಎಂ ಕಾಲೇಜ್ ಮತ್ತು ಆಸ್ಪತ್ರೆ ಆವರಣದಲ್ಲಿ ಆ.31ರಿಂದ ಸೆ. 2ರವರೆಗೆ ’28ನೇ ವಾರ್ಷಿಕ ರಾಜ್ಯ ಮಟ್ಟದ ಮನೋವೈದ್ಯರ ಸಮ್ಮೇಳನ’ ಜರುಗಲಿದೆ ಎಂದು ರಾಜ್ಯಾಧ್ಯಕ್ಷ ಡಾ. ಅಭಯ ಮಟ್ಕರ್ ಹೇಳಿದರು. ಬುಧವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ‘డిజిటలో ಯುಗ ಹಾಗೂ ಮನೋರೋಗಶಾಸ್ತ್ರ’ ವಿಷಯದ ಮೇಲೆ ಚರ್ಚೆ, ಸಂವಾದ, ಗೋಷ್ಠಿಗಳು ನಡೆಯಲಿವೆ. ಒಟ್ಟು 80 ಪ್ರಬಂಧಗಳ ಮಂಡನೆಯಾಗಲಿವೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ಮಹಾರಾಷ್ಟ್ರದಿಂದ ಸುಮಾರು 800 ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಭಾರತೀಯ ಮನೋವೈದ್ಯರ ಸಂಘದ ಅಧ್ಯಕ್ಷ ಡಾ. ಅಜಿತ್ ಭಿಡೆ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಎಸ್‌ಡಿಎಂ ಆವರಣದ ಕಲಾಕ್ಷೇತ್ರ ಹಾಗೂ ಈಶಾವಾಸ್ಯಂ ಸಭಾಂಗಣದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಎಂದು ಹೇಳಿದರು. ಡಾ. ಸೋಮಶೇಖರ ಬಿಜ್ಜಳ ಮಾತನಾಡಿ, ಜಗತ್ತು ಇಂದು ಅಂತರ್ಜಾಲ, ಕಂಪ್ಯೂಟರ್, ಸ್ಮಾರ್ಟ್‌ ಫೋನ್‌ಗಳಲ್ಲಿ ಕಳೆದು ಹೋಗಿದೆ. ಇವುಗಳು ಪರಸ್ಪರ ಸಂವಾದ ಕಡಿಮೆ ಮಾಡಿವೆ. ಡಿಜಿಟಲ್ ಯುಗ ನಮ್ಮ ಜೀವನವನ್ನು ಎಷ್ಟು ಡಾ. ಆದಿತ್ಯ ಪಾಂಡುರಂಗಿಗೆ ಡಾ. ಜಯರಾಮ್ ಅವಾರ್ಡ್ ಧಾರವಾಡ: ಮನೋವೈದ್ಯ ಡಾ. ಆದಿತ್ಯ ಪಾಂಡುರಂಗಿ ಅವರು ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಶಾಖೆ ನೀಡುವ 2017- 18ನೇ ಸಾಲಿನ ಪ್ರತಿಷ್ಠಿತ ಡಾ. ಎಸ್.ಎಸ್.ಜಯರಾಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮನೋವಿಜ್ಞಾನಕ್ಕೆ ಸಂಬಂಧಿಸಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ಅವರ ಲೇಖನಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆ. 31ರಂದು ನಗರದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಜರುಗುವ ರಾಜ್ಯ ಮನೋವಿಜ್ಞಾನಿಗಳ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಆದಿತ್ಯ ಅವರ ಪತ್ನಿ ಡಾ. ಸ್ವಪ್ಪಾ ಹಾಗೂ ತಂದೆ ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅವರು ಈ ಮೊದಲು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸರಳಗೊಳಿಸಿದೆಯೋ ಅಷ್ಟೇ ಜಟಿಲವಾದ ಸಮಸ್ಯೆಗಳನ್ನು ಸೃಷ್ಟಿಸಿದೆ. ಈ ಎಲ್ಲ ಅಂಶಗಳು ಮನುಷ್ಯನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿವೆ. ಈ ಕುರಿತು ಚರ್ಚೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ. ಮಹೇಶ ದೇಸಾಯಿ, ಡಾ. ಶಿವಾನಂದ ಹಿರೇಮಠ ಮತ್ತಿತರರು ಇದ್ದರು.

About Author:

Leave Your Comments

Your email address will not be published. Required fields are marked *