COVID-19 Resources for Mental Health Coaches... Learn More
“ಯೋಧರ ಬಲಿದಾನದ ಸ್ಮರಣೆ ಬದ್ಧತೆಯ ಹೊಣೆ”
ಹಿಮನೆತ್ತಿಯಲ್ಲಿ ಬಿಸಿರಕ್ತಚೆಲ್ಲಿ /ದಿಗ್ವಿಜಯದ ಧೀರ/ ಶತನಮನ ವೀರಯೋಧ/ ತಾಯೊಡಲ ಕರೆಗೆ ಆ ರಣದ ಮೊರೆಗೆ/ ಗಡಿಯತ್ತ ಭೀಮನಡಿಗೆ… ಕವಿ ದಿವಾಕರ ಹೆಗಡೆ ಅವರು ಬರೆದ ಈ ಸಾಲುಗಳನ್ನು ಆಕಾಶವಾಣಿ ಉದ್ವೇಷಕಿ ಮಾಯಾ ಚಿಕ್ಕೇರೂರು ಅವರು ಹಾಡುತ್ತಿದ್ದಂತೆ ನನ್ನ ಮೈ ಮನ ರೋಮಾಂಚನಗೊಂಡಿತು. ಒಂದು ಅವ್ಯಕ್ತ ದೇಶಪ್ರೇಮದ ಭಾವ ಜಾಗೃತವಾಯಿತು.
ಈ ಸಾಲುಗಳು ನಮಗಾಗಿ ನಮ್ಮ ದೇಶಕ್ಕಾಗಿ ಹುತಾತ್ಮರಾದ ವೀರಯೋಧರ ಸ್ಮರಣೆಗೆ ಮೀಸಲು. ನಾವಿಂದು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದರೆ ಆ ಯೋಧರಿಂದಲೇ. ಅವರ ತ್ಯಾಗ, ಬಲಿದಾನ ಪದಗಳಿಗೆ ನಿಲುಕದ್ದು. ನಮ್ಮ ಕರ್ತವ್ಯವೇನಿದ್ದರೂ ಅವರನ್ನು ನಿತ್ಯ ಸ್ಮರಿಸಬೇಕಾದುದು. ಮೊನ್ನೆಯಷ್ಟೇ ನಾವೆಲ್ಲರೂ ಕಾರ್ಗಿಲ್ ವಿಜಯ ದಿವಸ್ ಆಚರಿಸಿದೆವು. ವೀರಯೋಧರ ಸೇವೆಯನ್ನು ಸ್ಮರಿಸಿದೆವು. ಅವರ ಶೌರ್ಯವನ್ನು ಕೊಂಡಾಡಿದೆವು. ಅವರಿಗೆ ಗೌರವ ಅರ್ಪಿಸಿದೆವು. ಅದೊಂದು ಭಾವನಾತ್ಮಕ ಕ್ಷಣ. ವೀರಯೋಧರ ಅತ್ಯಮೂಲ್ಯ ತ್ಯಾಗವನ್ನು ಒಂದೊಮ್ಮೆ ನೆನೆದರೆ ಕಣ್ಣಂಚಿನಲ್ಲಿ ನೀರು ಜಿನುಗದಿರದು. ನನಗೆ ಅದದ್ದೂ ಅದೇ. ಹುತಾತ್ಮ ಯೋಧರ ಕುಟುಂಬ ಸದಸ್ಯರ ಚಿತ್ರಣ ಕಣ್ಣೆದುರಿಗೆ ಬಂದಿತು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸ್ಮರಣೆಯ ಸಮಯದಲ್ಲಿ ಒಂದು ಗಂಭೀರವಾದ ಮೌನ ಆವರಿಸುತ್ತದೆ. ನಮ್ಮ ದೇಶದ ರಕ್ಷಣೆಗೆ ತಮ್ಮ ಪ್ರಾಣ ಪಣಕ್ಕಿಟ್ಟ ವೀರ ಸೈನಿಕರು ಅರ್ಪಿಸಿದ ಅಂತಿಮ ತ್ಯಾಗಕ್ಕೆ ಗೌರವ. ಇದು ಇಡೀ ರಾಷ್ಟ್ರವು ಒಟ್ಟಾಗಿ ಸೇರುವ ಸಮಯ. ದೇಶಭಕ್ತಿಯ ಭಾವನೆಗಳಿಂದ ತುಂಬಿದ ನಾಗರಿಕರು ಸಹ ತಮ್ಮ ಗೌರವವನ್ನು ಸಲ್ಲಿಸಲು ಮತ್ತು ಯುದ್ಧದ ವೀರರನ್ನು ಸ್ಮರಿಸಲು ಇರುವ ಸದವಕಾಶ. ಇದೆಲ್ಲಾ ಸರಿ, ಆದರೆ ಇದರ ಜತೆಜತೆಗೆ ಪ್ರತಿಯೊಬ್ಬ ಭಾರತೀಯ ಮಾಡಬೇಕಿರುವುದು ದೇಶದ ಸಮಗ್ರತೆ ಮತ್ತು ಐಕ್ಯತೆ ವಿಚಾರ ಬಂದಾಗ ಒಗ್ಗಟ್ಟಿನಿಂದ ನಿಲ್ಲುವುದು. ನನ್ನ ದೇಶ, ನನ್ನ ಭಾರತಾಂಬೆ, ನಮ್ಮ ಭೂಮಿ ಎಂಬ ಬಲವಾದ ಭಾವನೆ ನಮ್ಮಲ್ಲಿ ಬೇರೂರಿದ್ದೇ ಆದರೆ ಪಾಕಿಸ್ತಾನವಷ್ಟೇ ಅಲ್ಲ, ಇಡೀ ವಿಶ್ವದ ಎಲ್ಲ ರಾಷ್ಟ್ರಗಳು ಒಂದಾಗಿ ಮುಗಿಬಿದ್ದರೂ ನಾವವರನ್ನು ಹಿಮ್ಮೆಟ್ಟಿಸಬಹುದು. ಅಷ್ಟೊಂದು ಶಕ್ತಿ, ಸಾಮರ್ಥ್ಯ ನಮ್ಮಲ್ಲಿದೆ. ಆ ತಾಯಿ ಭಾರತಮಾತೆ ನಮಗೆ ಆ ಶಕ್ತಿ ಕರುಣಿಸಿದ್ದಾಳೆ. ಅದನ್ನು ಜಾಗೃತಗೊಳಿಸುವ ಕೆಲಸವಾಗಬೇಕಿದೆ. ನಮ್ಮ ವೀರಸೈನಿಕರ ಸರಿಸಾಟಿಯಿಲ್ಲದ ಶೌರ್ಯವನ್ನು ಇತಿಹಾಸದಲ್ಲಿ ಕೆತ್ತಿದ ದಿನದಂದು ನಾವೊಂದು ಪ್ರತಿಜ್ಞೆ ಮಾಡುವ ಅಗತ್ಯವಿದೆ. ಅದೇನೆಂದರೆ ದೇಶದ ಹಲೋ ಡಾಕ್ಟರ್ ಡಾ. ಆನಂದ ಪಾಂಡುರಂಗಿ ಖ್ಯಾತ ಮನೋವೈದ್ಯರು :(0836) 2773878, drpandurangi@yahoo.com ಬಗ್ಗೆ ಬದ್ಧತೆ. ರಾಷ್ಟ್ರೀಯತೆ ವಿಚಾರ ಬಂದಾಗ ಪ್ರತಿಯೊಬ್ಬ ಪ್ರಜೆಯೂ ಬದ್ಧತೆ ಪ್ರದರ್ಶಿಸುವ ತುರ್ತು ಅಗತ್ಯ ಇಂದಿನದಾಗಿದೆ. ರಾಷ್ಟ್ರಕ್ಕಾಗಿ ಅಚಲವಾದ ನಿಷ್ಠೆ ನಮ್ಮದಾಗಬೇಕಿದೆ. ನಮ್ಮಲ್ಲಿನ ಆಂತರಿಕ ಭಿನ್ನಾಭಿಪ್ರಾಯ, ಕಲಹಗಳು ಶತ್ರುರಾಷ್ಟ್ರಗಳಿಗೆ ವರದಾನವಾಗಬಾರದು. ‘ಧೂಳಿನಲ್ಲಿ ಮಲಗಿದ್ದರೂ ಧೈರ್ಯಶಾಲಿಗಳು ಎಂದಿಗೂ ಸಾಯುವುದಿಲ್ಲ: ಅವರ ಧೈರ್ಯವು ಸಾವಿರ ಜೀವಂತ ಪುರುಷರಲ್ಲಿ ಹೋರಾಟದ ಕಿಚ್ಚನ್ನು ಜಾಗೃತಗೊಳಿಸುತ್ತದೆ’ ಎಂದು ಮಿನೋಟ್ ಜಡ್ಗನ್ ಸ್ಯಾವೇಜ್ ಹೇಳಿದಂತೆ ಗಾಳಿ ಚಲಿಸುವುದರಿಂದ ನಮ್ಮ ಧ್ವಜ ಹಾರುವುದಿಲ್ಲ; ಅದನ್ನು ರಕ್ಷಿಸಲು ಮಡಿದ ಪ್ರತಿಯೊಬ್ಬ ಸೈನಿಕನ ಕೊನೆಯ ಉಸಿರಿನೊಂದಿಗೆ ಅದು ಹಾರುತ್ತದೆ. ಇದು ನಮ್ಮ ಸೈನಿಕರ ಉಸಿರಿನ ತಾಕತ್ತು. ಮೇಜರ್ ರಾಮ ರಘಬ ರಾಣೆ, ನಾಯಕ್ ಜಾದುನಾಥ್ ಸಿಂಗ್, ಕಂಪನಿಯ ಹವಾಲ್ದಾರ್ ಮೇಜರ್ ಪೀರು ಸಿಂಗ್ ಶೆಖಾವತ್, ಕ್ಯಾಪ್ಟನ್ ಗುರ್ಬಚನ್ ಸಿಂಗ್ ಸಲಾರಿಯಾ, ಲೆಫ್ಟಿನೆಂಟ್ ಕರ್ನಲ್ ಧನ್ ಸಿಂಗ್ ಥಾಪಾ ಮಗರ್, ಸುಬೇದಾರ್ ಜೋಗಿಂದರ್ ಸಿಂಗ್ ಸಹನಾನ್, ಮೇಜರ್ ಶೈತಾನ್ ಸಿಂಗ್ ಭಾಟಿ, ಕಂಪನಿ ಕ್ವಾರ್ಟರ್ ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್ ತಾರಾಪೋರ್, ಲ್ಯಾನ್ಸ್ ನಾಯಕ್ ಅಲ್ಬರ್ಟ್ ಎಕ್ಕಾ ಹೀಗೆ ವೀರಯೋಧರ ದೊಡ್ಡ ಪಟ್ಟಿಯೇ ನಮ್ಮಲ್ಲಿದೆ. ಇವರೆಲ್ಲ ಭಾರತಾಂಬೆಯ ಹೆಮ್ಮೆಯ ಮಕ್ಕಳು. ಕಾರ್ಗಿಲ್‌ನ ಗಿರಿಶ್ರೇಣಿಯ ಮೇಲೆ ಕಾಕದೃಷ್ಟಿಯಿಂದ ತನ್ನ ಪಾಪದ ಕಾಲಿಟ್ಟ ಪಾಪಿಸ್ತಾನವನ್ನು ಹಿಮ್ಮೆಟ್ಟಿಸಿದ ಭಾರತೀಯ ಸೇನೆಯನ್ನು ಸ್ಮರಿಸುವುದರ ಜತೆಗೆ ಬಲಪಡಿಸುವ ಕೆಲಸವಾಗಬೇಕಿದೆ. ಅದಕ್ಕೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಒಬ್ಬರನ್ನಾದರೂ ದೇಶಸೇವೆಯ ಸದುದ್ದೇಶದಿಂದ ಸೇನೆಗೆ ಸೇರಿಸಿದರೆ ಇದು ಕೂಡ ಒಂದು ರೀತಿಯ ಮಾತೃಸೇವೆ ಆಗುವುದು. ಎಲ್ಲರೂ ಇಂಜನಿಯರ್. ಡಾಕ್ಟರ್, ಆಫಿಸರ್ ಅಗುವುದಾದರೆ ದೇಶ ರಕ್ಷಣೆಯ ಹೊಣೆ ಹೊರುವವರು ಯಾರು? ತಾಯಿಯ ಸೇವೆಗೆ ಇಷ್ಟೂ ಮಾಡದಿದ್ದರೆ ಹೇಗೆ? ಈ ನಿಟ್ಟಿನಲ್ಲಿ ಚಿಂತನೆ ನಡೆಯಲಿ.