COVID-19 Resources for Mental Health Coaches... Learn More

0836-2773878

ಯುವಜನತೆಯನ್ನು ಭಕ್ತಿ ಮಾರ್ಗದತ್ತ ಪ್ರೇರೇಪಿಸಿ.

ಯುವಜನತೆಯನ್ನು ಭಕ್ತಿ ಮಾರ್ಗದತ್ತ ಪ್ರೇರೇಪಿಸಿ.

ಧಾರವಾಡ: ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಕಡಿಮೆಯಾಗುತ್ತಿರುವುದರಿಂದ ಇಂದಿನ ಪೀಳಿಗೆ ನಮ್ಮ ಸಂಪ್ರದಾಯದ ನಡೆ-ನುಡಿಗಳಿಂದ ವಿಮುಖರಾಗುತ್ತಿದ್ದಾರೆ. ಅವರನ್ನು ಭಕ್ತಿ ಮಾರ್ಗದಲ್ಲಿ ನಡೆಯುವಂತೆ ಮಾಡುವುದು ನಮ್ಮ ಜವಾಬ್ದಾರಿ ಎಂದು ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.ಇಲ್ಲಿಯ ದೇಸಾಯಿ ಗಲ್ಲಿಯ ವಿಠಲ ಮಂದಿರದಲ್ಲಿ ಆಷಾಢ ಏಕಾದಶಿ ನಿಮಿತ್ತ ಅಖಂಡ ಹರಿದಾಸ ಭಜನಾ ಮಹೋತ್ಸವ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮೊದಲಿನಿಂದ ಬಂದ ಮಠ ಮಂದಿರ ಕಾರ್ಯಕ್ರಮಗಳಲ್ಲಿ ನಮ್ಮ ಯುವ ಪೀಳಿಗೆ ತೊಡಗಿಸಿಕೊಂಡು ನಮ್ಮ ಸಂಪ್ರದಾಯವನ್ನು ಮುಂದುವರೆಸಲು ಪ್ರಯತ್ನ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಪಂ. ಕೆ.ಎಂ. ಕಲಮಂಗಿ ಆಚಾರ್ಯರು ಮಾತನಾಡಿ, ನಮ್ಮ ಆಚರಣೆಯಲ್ಲಿ ಬರುವ ಎಲ್ಲ ಏಕಾದಶಿಗಳಲ್ಲಿ ವಿಶೇಷವಾಗಿ ಆಷಾಢ ಏಕಾದಶಿಯ ಮಹತ್ವವನ್ನು ಧಾರ್ಮಿಕ ಹಿನ್ನೆಲೆಯಾದ ಮಹಾಭಾರತ ಹಾಗೂ ರಾಮಾಯಣ ಕಾಲದಲ್ಲಿ ಘಟನಾವಳಿಗಳ ಬಗ್ಗೆ ವಿವರಿಸಿದರು. ಮಂದಿರದ ಗೌರವಾಧ್ಯಕ್ಷ ಎಸ್.ಬಿ. ಗುತ್ತಲ ಮಾತನಾಡಿದರು. ಅಖಿಲ ಭಾರತ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಎನ್‌. ಆರ್. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀಧರ ಕುಲಕರ್ಣಿ ದಂಪತಿ, ಡಾ. ಎಚ್‌.ಎ. ದೇಸಾಯಿ, ರಾಧಾ ಎಸ್.ಬಿ. ದ್ವಾರಪಾಲಕ, ಇಂದುಮತಿ ರಾಘವೇಂದ್ರ, ಅನುರಾಧಾ ಕುಲಕರ್ಣಿ, ರಮೇಶ ಜಮಾದಾರ, ಸರೋಜಾ ರಾವ್, ಪಂ. ಬಂಡಾಚಾರ್ ಗಿಡದಹುಬ್ಬಳ್ಳಿ, ಅರ್ಚಕ ಎಚ್‌. ವಾದಿರಾಜಾಚಾರ್, ಡಾ. ಪ್ರಸನ್ನ ಗುಡಿ, ದಯಾನಂದ ಭಟ್, ಭಾರ್ಗವಿ ಕುಲಕರ್ಣಿ ಸೇರಿದಂತೆ ಇತರರು ಇದ್ದರು.

About Author:

Leave Your Comments

Your email address will not be published. Required fields are marked *