COVID-19 Resources for Mental Health Coaches... Learn More

0836-2773878

“ಮೊಬೈಲ್ ಸಂಗ ಹಾಕೋಣ ಸ್ವಯಂ ನಿರ್ಬಂಧ”!

ಹಲೋ ಡಾಕ್ಟರ್
ಡಾ. ಆನಂದ ಪಾಂಡುರಂಗಿ ಖ್ಯಾತ ಮನೋವೈದ್ಯರು (0836) 2773878, drpandurangi@yahoo.com

ಮೊನ್ನೆ ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದೆ. ವಿಮಾನ ನಿಲ್ದಾಣದಲ್ಲಿ ಒಂದು ಗಂಟೆ ಮುಂಚೆಯೇ ಇದ್ದೆ. ಅಲ್ಲಿ ನನ್ನ ಪರಿಚಯದವರು, ಸಂಬಂಧಿಕರು ತುಂಬಾ ಜನ ಕಂಡರು, ತುಂಬಾ ಜನ ಫ್ರೆಂಡ್ಸ್ ಹಾಗೂ ಸಂಬಂಧಿಕರು ಸಿಕ್ಕಿದ್ದಾರೆ. ಉಭಯಕುಶಲೋಪರಿ ನಡೆಯುತ್ತದೆ. ಒಂದು ನಾಲ್ಕು ವಿಚಾರ ವಿನಿಮಯ, ಹೊಸ ಸಂಗತಿಗಳು ತಿಳಿಯಬಹುದು ಅಂದುಕೊಂಡಿದ್ದೆ. ಆದರೆ ಅಲ್ಲಿ ಆದದ್ದೇ ಬೇರೆ, ಕೆಲವರು ಚಾಟ್ ಮಾಡು ತ್ತಿದ್ದರೆ ಇನ್ನು ಹಲವರು ‘ರೀಲ್ಸ್ ನೋಡುವುದರಲ್ಲೋ, ಸೆಲ್ಲಿ ಕ್ಲಿಕ್ಕಿಸಿಕೊಳ್ಳುವುದರಲ್ಲೋ ನಿರತರಾಗಿದ್ದರು. ಅವರ ಜತೆಗಿದ್ದ ಚಿಕ್ಕ ಮಕ್ಕಳೂ ಮೊಬೈಲ್ ಹಿಡಿದುಕೊಂಡು ಓಡಾಡುತ್ತಿದ್ದರು. ಹೇಗಿತ್ತು ನಮ್ಮ ಬಾಲ್ಯ, ಇಂದು ಎಲ್ಲಿಗೆ ಬಂದು ನಿಂತಿದೆ ಎಂದು ಹೋಲಿಕೆ ಮಾಡಿಕೊಂಡು ನನ್ನ ಬಾಲ್ಯವೇ ಸ್ವರ್ಗ ಎಂದುಕೊಂಡು ಸಂತಸಪಟ್ಟೆ.
ಮೊಬೈಲ್ ಈಗ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬರೂ ಪ್ರತಿಯೊಂದು ವಿಷಯಕ್ಕೂ ಅದರ ಮೇಲೆ ಅವಲಂಬನೆ ಆಗುವಂತಾಗಿದೆ. ಇನ್ನು ಮೊಬೈಲ್ ಬಳಕೆಗೆ ವಯೋಮಿತಿಯೂ ಇಲ್ಲ. ದೊಡ್ಡವರಿಗಿಂತ ಚಿಕ್ಕಮಕ್ಕಳೇ ಹೆಚ್ಚು. ಇದರ ದಾಸರಾಗುತ್ತಿದ್ದಾರೆ. ಈ ವಿದ್ಯಮಾನ ಒಂದು ಮನೆಗೆ ಸೀಮಿತವಾಗಿಲ್ಲ. ಇದು ಹ‌ ಫರ್ ಕಿ ಕಹಾನಿ ಆಗಿದೆ.


ಈ ಆತಂಕಕಾರಿ ಬೆಳವಣಿಗೆಯನ್ನು ಗಮನಿಸಿಯೇ ಹೈ ಕೋರ್ಟ್ ಮೊಬೈಲ್ ಬಳಕೆಗೆ ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ಬಳಕೆಗೆ ವಯೋಮಿತಿ ನಿಗದಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮೌಖಿಕ ಸಲಹೆ ನೀಡಿದೆ.
ಇದು ಆರೋಗ್ಯಕರ ಬೆಳವಣಿಗೆ, ಹೌದು, ಸಾಮಾಜಿಕ ಜಾಲತಾಣಗಳ ಬಳಕೆ ಮಕ್ಕಳಿಗೆ ಅಷ್ಟು ಸೂಕ್ತವಲ್ಲ. ಅದರಲ್ಲಿ ಬರುವ ಎಲ್ಲವೂ ಸತ್ಯವಲ್ಲ ಮತ್ತು ಯಾವುದನ್ನು ಬಳಸಬೇಕು, ಯಾವುದನ್ನು ಬಳಸಬಾರದು ಅಥವಾ ನೋಡಬಾರದು ಎನ್ನುವ ಪರಿಜ್ಞಾನ ಚಿಕ್ಕ ಮಕ್ಕಳಿಗೆ ಇರುವುದಿಲ್ಲ. ತಿಳಿದೋ ತಿಳಿಯದೋ ಒಂದೊಮ್ಮೆ ಅದರ ವಿಷವರ್ತುಲದಲ್ಲಿ ಬಂಧಿಯಾಗಿ ಬಿಡುತ್ತಾರೆ. ಊಟ, ಊಪಾಹಾರದ ಪರಿವೂ ಅವರಿಗಿರುವುದಿಲ್ಲ. ದಿನಕ್ಕೊದರಂತೆ ಹೊಸ ಹೊಸ ಗೇಮ್ಸ್, ಚಾಲೆಂಜ್ ಮಾಡುವ ಟಾಸ್ಕ್‌ಗಳು ಮಕ್ಕಳನ್ನು ಅವುಗಳ ದಾಸರನ್ನಾಗಿಸುತ್ತಿವೆ. ಇನ್ನು ವರ್ಕಿಂಗ್ ಪಾಲಕರೂ ಅಷ್ಟೇ. ಮನೆಯಲ್ಲಿ ಆಳುಗಳ ಜವಾಬ್ದಾರಿ ಮೇಲೆ ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಆಳುಗಳಿಗೆ ಮನೆಗೆಲಸ ಇರುತ್ತದೆ. ಅವರಿಗೆ ಮಕ್ಕಳು ಬೆನ್ನು ಹತ್ತದಿದ್ದರೆ ಸಾಕು. ಅದಕ್ಕೆ ಅವರು ತಮ್ಮದಾಗಲೀ ಇಲ್ಲವೇ ಮನೆಯಲ್ಲಿರುವ ಇನ್ನೊಂದು ಮೊಬೈಲ್ ಕೊಟ್ಟು ಕಾರ್ಯಪವೃತ್ತರಾಗುತ್ತಾರೆ. ಮನೆಯಲ್ಲಿನ ಹಿರಿಯರು ಮೊಮ್ಮಗಳು ಅಥವಾ ಮೊಮ್ಮಗನೋ ಸದಾ ಮೊಬೈಲ್‌ ಹಿಡಿದುಕೊಂಡು ಅದರಲ್ಲೇ ಮಗ್ನನಾಗಿರುವುದನ್ನು ನೋಡಿ ಬೈದು ಬುದ್ಧಿ ಹೇಳಲು ಹೋಗುತ್ತಾರೆ. ಪರಿಣಾಮ ಮಕ್ಕಳ ದೃಷ್ಟಿಯಲ್ಲಿ ಹಾಗೂ ಅವರ ಪಾಲಕರ ದೃಷ್ಟಿಯಲ್ಲಿ ವಿಲನ್ ಆಗಿ ಕಾಣಿಸುತ್ತಾರೆ. ಇದರಿಂದ ಮನೆಯ ವಾತಾವರಣವೂ ಹಾಳಾಗುತ್ತದೆ.
. ಅದೆಷ್ಟೋ ಮಕ್ಕಳಿಗೆ ತಮ್ಮ ಕೈಗೆ ಮೊಬೈಲ್ ಕೊಟ್ಟರೆ ಊಟ, ಉಪಾಹಾರ, ಇಲ್ಲದಿದ್ದರೆ ಬಿದ್ದು ಉರುಳಾಡುವುದು, ಕಿರಿಚಾಡುವುದು ಮಾಡುತ್ತವೆ. ಕೊನೆಗೆ ಸುಮ್ಮನಾದರೆ ಸಾಕು ಎಂದುಕೊಂಡು ಅವರ ಕೈಗೆ ಮೊಬೈಲ್ ಕೊಟ್ಟು ಹಾಳಾಗಿ ಹೋಗು ಎಂದು ಗೊಣಗುತ್ತಾ ನಾವೂ ಸುಮ್ಮನಾಗಿ ಬಿಡುತ್ತೇವೆ. ಇದು ತಾತ್ಕಾಲಿಕ ಪರಿಹಾರ ಎನ್ನುವುದಕ್ಕಿಂತ ಒಂದರ್ಥದಲ್ಲಿ ನಾವೇ ಸೋತು ಅವರನ್ನು ಬೆಂಬಲಿಸಿದಂತಾಗುತ್ತದೆ. ಅದರ ಬದಲು ಅದರ ಪರಿಣಾಮಗಳ ಬಗ್ಗೆ ಮಾರ್ಮಿಕವಾಗಿ ತಿಳಿ ಹೇಳಲು ಮುಂದಾಗಬೇಕು, ಅವರ ಚಲನವಲನದ ಮೇಲೆ ನಿಗಾ ಇಡಬೇಕು. ನಾವು ಹೇಳುವ ಕಿವಿಮಾತು ಅವರಿಗೆ ನಿರ್ಬಂಧ ಹಾಕಿದಂತಾಗಬಾರದು. ಅದಕ್ಕೆ ಕಥೆ ಹೇಳುವ ರೂಢಿ ಇರಬೇಕು. ಹೊಸ ಹೊಸ ಸ್ಥಳಗಳ ಮಾಹಿತಿ ನೀಡಬೇಕು. ಕೌಟುಂಬಿಕ ಸಂಬಂಧಗಳ ಪರಿಚಯ ಮಾಡಿಕೊಡಬೇಕು. ಮನೆಯಲ್ಲಿ ಆಳುಗಳ ಮೇಲೆಯೇ ಎಲ್ಲ ಹೊರೆ ಹೊರೆಸಿ ಕೈ ತೊಳೆದುಕೊಳ್ಳಬಾರದು. ದೊಡ್ಡವರಾಗಲೀ ಸಣ್ಣವರಾಗಲೀ ಅಗತ್ಯವಿದ್ದಷ್ಟು ಮಾತ್ರ ಮೊಬೈಲ್ ಬಳಸಿದರೆ ಸೂಕ್ತ. ಈ ವಿಷಯದಲ್ಲಿ ಸ್ವಯಂ ನಿರ್ಬಂಧ ಅಗತ್ಯ.

About Author:

Leave Your Comments

Your email address will not be published. Required fields are marked *