ಧಾರವಾಡ: ಜನರು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅದರಲ್ಲೂ ಯುವಪೀಳಿಗೆ ಮೊಬೈಲ್ ದುರ್ಬಳಕೆಯಿಂದ ತಪ್ಪಿ ಆತಂಕ, ಒತ್ತಡ ಹಾಗೂ ಖಿನ್ನತೆಗೆ ಒಳಗಾಗುತ್ತಿದೆ. ಯುವಕರು ಸರಿಯಾದ ದಾರಿಯನ್ನು ಆರಿಸಿಕೊಂಡು ನಡೆಯಬೇಕು ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಹಾಲ್‌ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ರೋಟರಿ ಕ್ಲಬ್ ಆಫ್ ಬೇಲೂರ ಮತ್ತು ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಎಂದರೆ ಕೇವಲ ದೈಹಿಕ ಆರೋಗ್ಯ ಅಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಯೋಗಕ್ಷೇಮದಿಂದ ಇರುವುದು ಆರೋಗ್ಯ ಎಂದರು.
ಕವಿವಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಸಂಗೀತಾ ಮಾನೆ ಅಧ್ಯಕ್ಷತೆ ವಹಿಸಿದ್ದರು. ರೋಟರಿ
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಮಾನಸಿಕ ಆರೋಗ್ಯ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಅವರನ್ನು ಸನ್ಮಾನಿಸಲಾಯಿತು. ಡಾ. ಜಾಗೃತಿ ಕಾರ್ಯಕ್ರಮದಲ್ಲಿ ಸಂಗೀತಾ ಮಾನೆ, ಡಾ. ಗೌರಿ ತಾವರಗೇರಿ, ಪಿ.ಸಿ. ಗೋಡಿ, ರಂಜಿತಾ ಜಾಧವ, ಡಾ. ರೇಣುಕಾ ಅಸಗಿ ಇತರರಿದ್ದರು.
ಕ್ಲಬ್‌ನ ಸಹಾಯಕ ಗವರ್ನರ್ ರೋಟೆರಿಯನ್ ಡಾ. ಅಪರಾಧಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಿ.ಎಸ್. ಗೌರಿ ತಾವರಗೇರಿ, ರೋಟರಿ ಕ್ಲಬ್ ಆಫ್ ಬೇಲೂರ ವೇಣುಮಾಧವ, ಮನೋವಿಜ್ಞಾನ ವಿಭಾಗದ ಕಾರ್ಯದರ್ಶಿ ರೋಟೆರಿಯನ್‌ಪಿ.ಸಿ. ಗೋಡಿ ಮತ್ತು ಮುಖ್ಯಸ್ಥ ಡಾ. ಎಸ್.ವಿ. ಕಾಂಬ್ಳೆ, ಡಾ. ಶೌಕತ್ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್‌ನ ಕಾರ್ಯದರ್ಶಿ ಅಜೀಕ್, ಇತರರಿದ್ದರು. ರೋಟೆರಿಯನ್ ಸುಮನ್ ರೋಟೆರಿಯನ್ ರಂಜಿತಾ ಜಾಧವ, ಸಮಾಜಕಾರ್ಯ ಹೆಬ್ಬಿಕರ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ
ವಿಭಾಗದ ಪ್ರಾಧ್ಯಾಪಕಿ ಡಾ. ರೇಣುಕಾ ಅಸಗಿ, ವೀರೇಶ ವಂದಿಸಿದರು.