COVID-19 Resources for Mental Health Coaches... Learn More

0836-2773878

ಮರೆವು ವರವೂ ಹೌದು ಶಾಪವೂ ಹೌದು.

ಮರೆವು ವರವೂ ಹೌದು ಶಾಪವೂ ಹೌದು!

ಜೀವನ ಸುಖ ದುಃಖಗಳ ಸಂಗಮ. ಕಷ್ಟ ನಷ್ಟ ನೋವು ನಲಿವು ಸಹಜ. ಇವು ಮನಸ್ಸನ್ನು ಘಾಸಿಗೊಳಿಸಿರುತ್ತವೆ. ಇದರ ಪರಿಣಾಮವಾಗಿ ನೊಂದ ವ್ಯಕ್ತಿ ಜೀವನಪರ್ಯಂತ ಆ ಕಹಿ ನೆನಪುಗಳಿಂದ ಕೊರಗುತ್ತಿರುತ್ತಾನೆ. ಇದು ಮನೋವ್ಯಾಧಿಗೆ ಕಾರಣವಾಗುತ್ತದೆ. ಇಂಥವರಿಗೆ ಮರೆವು ಎನ್ನುವುದು ವರದಾನವೇ ಹೌದು, ಕಹಿ ಘಟನೆಗಳ ನೆನಪುಗಳನ್ನು ಮರೆಯುವುದರಿಂದ ಪ್ರಸ್ತುತ ಬದುಕು ಸಲೀಸಾಗಿ ಸಾಗುತ್ತದೆ, ಅದೇ ಆ ಘಟನೆಗಳು ಹಾಗೆ ನೆನಪಿನಲ್ಲಿದ್ದರೆ, ಆಗಾಗ್ಗೆ ಮರುಕಳಿಸಿ ಘಾಸಿಗೊಳಿಸುವಂತಿದ್ದರೆ ಏನು ಪ್ರಯೋಜನ? ಈ ದುಷ್ಪರಿಣಾಮ ಅಗಬಾರದು ಎನ್ನುವ ದೃಷ್ಟಿಕೋನದಿಂದ ನೋಡಿದಾಗ ಮರೆವು ಒಂದು ರೂಪದಲ್ಲಿ ವರದಾನವೇ ಸರಿ. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮರೆವು ಕೆಲವೊಮ್ಮೆ ಶಾಪವಾಗಬಹುದು, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮರೆವಿನ ಕಾಯಿಲೆ ಬಲು ದೊಡ್ಡ ಕಂಟಕ, ಓದಿದ್ದು ನೆನಪಿರದೇ ಹೋದರೆ ಸವಾಲುಗಳನ್ನು ಎದುರಿಸುವುದು ಹೇಗೆ? ಕೆಲವು ಜನರ ಜೀವನದಲ್ಲಿ ಬಾಲ್ಯ ಅಥವಾ ಯವ್ವನದಲ್ಲಿ ಕೆಲ ದುರ್ಘಟನೆಗಳು, ನೋವಿನ ಪ್ರಕರಣಗಳು ಸಂಭವಿಸಿರುತ್ತವೆ. ಇವು ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತವೆ. ಆಗಾಗ ಮರುಕಳಿಸುವ ಮೂಲಕ ಮಾನಸಿಕ ನೆಮ್ಮದಿ ಹಾಳುಗೆಡವುತ್ತವೆ.ಆದರೆ ಇಂತಹ ಘಟನೆಗಳನ್ನು ಮರೆಯಬೇಕು. ಆದರೆ ಸಂತಸ, ಪ್ರೇರಣೆ ನೀಡುವ ವಿಷಯಗಳನ್ನು ಮರೆಯಬಾರದು, ಆದರೆ ಅದು ಇಂದಿನ ದಿನಮಾನಗಳಲ್ಲಿ ಸಾಧ್ಯವಾಗುತ್ತಿಲ್ಲ.

ಮೊನ್ನೆ ನನ್ನ ಬಳಿ ಒಬ್ಬ ಮಧ್ಯವಯಸ್ಕ ಗೃಹಿಣಿ ಬಂದಿದ್ದರು. ಗತಿಸಿಹೋದ ದಿನಗಳಲ್ಲಿ ನಡೆದ ಅಹಿತಕರ ಘಟನೆಗಳನ್ನು ಮರೆಯಲಾಗದೇ ಅವರು ಪರಿತಪಿಸುತ್ತಿದ್ದರು. ಇದರಿಂದ ಪ್ರಸ್ತುತ ಜೀವನದ ಮೇಲೆ ಪರಿಣಾಮ ಬೀರುವಂತಾಗಿತ್ತು. ಅದಕ್ಕೆ ನಾನು ಅವರಿಗೆ ಹೇಳಿದ್ದು ಇಷ್ಟೇ ಮರೆಯಲೇಬೇಕಾದ ಸಂಗತಿಗಳನ್ನು ಮರೆಯಬೇಕು. ಇನ್ನು ಒಂದಿಷ್ಟು ಮರೆಯಲಾರದ ಸಂಗತಿಗಳನ್ನು ಮರೆಯದಂತೆ ನೋಡಿಕೊಳ್ಳಬೇಕು, ಆಗಿ ಹೋದ ಘಟನೆಗಳನ್ನು

ನೆನೆಸಿಕೊಂಡರೆ ಈಗಿನ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ಖಿನ್ನತೆಗೂ ಮಾರ್ಗವಾಗುತ್ತದೆ. ನಡೆದ ಘಟನೆ ಏನೋ ಕೆಟ್ಟ ಗಳಿಗೆ ಅಂದು ಮರೆಯುವುದಿದೆಯಲ್ಲ, ಅದಕ್ಕಿಂತ ದೊಡ್ಡ ಮತ್ತು ಸೂಕ್ತ ಪರಿಹಾರ ಬೇರೊಂದಿಲ್ಲ. ಜಗತ್ತು ವಿಶಾಲವಿದೆ. ಸಾಧನೆಗೆ ಹಲವು ಮಾರ್ಗಗಳಿವೆ. ಕಹಿ ಘಟನೆಯನ್ನು ಮರೆತು ಕ್ಷಮಾದಾನದ ಮನೋಭಾವನೆ ಬೆಳೆಸಿಕೊಳ್ಳುವದು ಸೂಕ್ತ. ಮರೆಯುವುದು ಸುಖಕ್ಕೆ ದಾರಿ, ಸಂಬಂಧಗಳಿಗೆ ಕೊಂಡಿಯೂ ಹೌದು.

ಅದೊಂದು ಕಾಲವಿತ್ತು, ಮರೆವು ಎಂದರೆ ವಯಸ್ಸಾದವರಿಗೆ ಬರುವ ಕಾಯಿಲೆ ಎಂದು, ಅದರೆ ಈಗ ಎಲ್ಲರಲ್ಲೂ ಈ ಕಾಯಿಲೆ ಕೆ, ಕಂಡುಬರುತ್ತಿದೆ. ವಯಸ್ಸಾದ ಬಳಿಕ ಒಂದೊಂದೇ ವಿಷಯದ ಬಗ್ಗೆ – ಜ್ಞಾಪಕ ಶಕ್ತಿ ಕುಂದುತ್ತ ಬರುವುದಕ್ಕೆ ಅಲಮ‌’ ಎನ್ನುತ್ತೇವೆ. ಮರೆವಿನ ಕಾಯಿಲೆಗೆ ಇಂಥದ್ದೇ ಚಿಕಿತ್ಸೆ ಇರುವುದಿಲ್ಲ, ಎಲ್ಲ ರೀತಿಯ ಮರೆವನ್ನು ಮಾನಸಿಕ ಕಾಯಿಲೆ ಎಂದು ಹೇಳಲಾಗದಿದ್ದರೂ ತಳ್ಳಿ ಹಾಕುವಂತಿಲ್ಲ. ಆದರೆ ಖಿನ್ನತೆಯಿಂದ ಈ ಕಾಯಿಲೆ ಬರುವುದು ಮಾತ್ರ ಖಚಿತ, ಆಘಾತಕಾರಿ ಘಟನೆಗಳನ್ನು ಮರೆಯದಿದ್ದರೆ ಅಪಾಯ ಖಚಿತ. ಇಂತಹ ಘಟನೆಗಳನ್ನು ಮರೆಯಲು ಧ್ಯಾನ, ಓದುವ ಹವ್ಯಾಸ, ಯೋಗ, ಪ್ರಾಣಾಯಾಮ ಮೊದಲಾದ – ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಉತ್ತಮ ಆಹಾರ ಶೈಲಿ – ರೂಢಿಸಿಕೊಳ್ಳಬೇಕು. ದೈಹಿಕ ಶ್ರಮವೂ ಮರೆವಿನ ಕಾಯಿಲೆಯಿಂದ ಮುಕ್ತಿಗೆ ಪೂರಕ, ಆಪ್ತರು, ಕುಟುಂಬ ಸದಸ್ಯರೊಡನೆ ಸಮಯ ಕಳೆಯುವುದು ಕೂಡ ಪರಿಹಾರದ ಒಂದು ಭಾಗವೇ.

ಈ ಮೊದಲು ಸುಮಾರು 60 ವರ್ಷ ದಾಟಿದ ಬಳಿಕ ಮರೆವಿನ ಕಾಯಿಲೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಕೆಟ್ಟ ಜೀವನಶೈಲಿಯಿಂದಾಗಿ 40-50 ವರ್ಷ ವಯಸ್ಸಿನವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಒತ್ತಡದ ಜೀವನ ಶೈಲಿಯಿಂದ ಮತ್ತು ಪೌಷ್ಟಿಕ ಆಹಾರದ ಕೊರತೆಯಿಂದ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಮರೆವಿನ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. 2014 ರಲ್ಲಿ 55 ವರ್ಷಕ್ಕಿಂತ ಮೇಲ್ಪಟ್ಟ 5 ಮಿಲಿಯನ್ ವಯಸ್ಕರಿಗೆ ಮರೆಗುಳಿತನ ಇದೆ ಎಂದು ಅಂದಾಜಿಸಲಾಗಿದೆ.

ಅದು ವ್ಯಕ್ತಿಯ ಆಲೋಚನೆ, ನಡವಳಿಕೆ ಮತ್ತು ಸ್ಮರಣಿಯ ಮೇಲೆ ಪರಿಣಾಮ ಬೀರುತ್ತದೆ. ದುರದೃಷ್ಟವಶಾತ್, ಈ ರೋಗವು ಕಾಲಾನಂತರದಲ್ಲಿ ಉಲ್ಬಣಗೊಳ್ಳುತ್ತದೆ ಮತ್ತು ಸ್ಮರಣೆಯನ್ನು ನಾಶಪಡಿಸುತ್ತದೆ. ಇದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾದ್ದರಿಂದವೈದ್ಯರನ್ನು ಕಾಣುವುದರಿಂದ ಚಿಕಿತ್ಸೆ ಮೂಲಕ ಬಗೆಹರಿಸಿಕೊಳ್ಳಬಹುದು. ಆದರೆ ಮರೆವನ್ನು ಸಂಪೂರ್ಣವಾಗಿ ಗುಣಪಡಿಸಲು ಆಗದು. ಆಪ್ತಸಮಾಲೋಚಕರನ್ನು ಭೇಟಿ ಮಾಡಿದಲ್ಲಿ, ಮಾನಸಿಕ ಒತ್ತಡವನ್ನು ನಿಯಂತ್ರಿಸಿಕೊಳ್ಳುವ ಬಗ್ಗೆ ಸಲಹ ಪಡೆಯಬಹುದು.

About Author:

Leave Your Comments

Your email address will not be published. Required fields are marked *