COVID-19 Resources for Mental Health Coaches... Learn More
“ಮನೋವ್ಯಾಕುಲತೆಗೆ ಸಕಾಲಿಕ ಚಿಕಿತ್ಸೆ ಅಗತ್ಯ”
ಜಗತ್ತು ಮುಂದುವರಿದಿದ್ದು ವಿಜ್ಞಾನ, ತಂತ್ರಜ್ಞಾನ ಉತ್ತುಂಗದಲ್ಲಿದೆ. ಅದೇ ರೀತಿ ಮನೋವ್ಯಾಕುಲತೆ ವಾಸಿಯಾಗಬಲ್ಲ ಕಾಯಿಲೆಯಾಗಿದ್ದು, ಸೂಕ್ತ ಹಾಗೂ ಸಕಾಲಿಕ ಚಿಕಿತ್ಸೆ ಅಗತ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರಮೋದ ಗಾಯಿ ಹೇಳಿದರು. ನಗರದ ಮಿಚಿಗನ್ ಕಾಂಪೌಂಡ್ ನಲ್ಲಿರುವ ಶ್ರೀ ಸೈಕ್ಯಾಟ್ರಿಕ್ ಕೇಂದ್ರದಲ್ಲಿ ವಿಶ್ವ ಮನೋವ್ಯಾಕುಲತೆ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು. ಮನೋರೋಗಗಳ ಬಗ್ಗೆ ಜನರಲ್ಲಿ ತಪ್ಪು ತಿಳಿವಳಿಕೆ ಇದೆ. ಅದರಿಂದಾಗಿ ಮೌಡ್ಯಗಳ ಮೊರೆ ಹೋಗುತ್ತಾರೆ. ಅದರ ಬದಲಾಗಿ ರೋಗಿಯ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದ ತಕ್ಷಣ ಮನೋರೋಗ ವೈದ್ಯರ ಬಳಿ WALD SOZOPE ಧಾರವಾಡದ ಶ್ರೀ ಸೈಕ್ಯಾಟ್ರಿಕ್ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಪ್ರಮೋದ ಗಾಯಿ ‘ವಿಶ್ವ ಮನೋವಿಕಲತೆ’ ಕಿರುಹೊತ್ತಗೆ ಬಿಡುಗಡೆಗೊಳಿದರು. ಡಾ. ಆನಂದ ಪಾಂಡುರಂಗಿ, ಡಾ. ಆದಿತ್ಯ ಪಾಂಡುರಂಗಿ, ಡಾ. ಸ್ವಪ್ಪಾ ಪಾಂಡುರಂಗಿ, ಇತರರಿದ್ದರು. ಕರೆದುಕೊಂಡು ಹೋಗಬೇಕು ಎಂದರು. ಹಿಂದೆಮನೋರೋಗಎದುರಾದಾಗ ಜನ ಗುಡಿ, ಮಸೀದಿ, ಚರ್ಚ್‌ಗಳಿಗೆ ಹೋಗುತ್ತಿದ್ದರು. ಯಾರಿಗೂ ಗೊತ್ತಾಗದ ಹಾಗೆ ಚಿಕಿತ್ಸೆ ವಾಸಿಯಾಗಬೇಕು ಎನ್ನುತ್ತಿದ್ದರು. ಬದಲಾದ ಸನ್ನಿವೇಶದಲ್ಲಿ ಮನೋರೋಗಕ್ಕೂ ಚಿಕಿತ್ಸೆ ಇದ್ದು, ಎಲ್ಲವನ್ನೂ ಗುಣಪಡಿಸಬಹುದಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ. ಆನಂದ ಪಾಂಡುರಂಗಿ ಮಾತನಾಡಿ, ಮನೋರೋಗಗಳ ನಿರ್ಲಕ್ಷ್ಯ ಸಲ್ಲದು. ಜೊತೆಗೆ ಮನೋರೋಗಿಗಳ ಬಗ್ಗೆ ಕೀಳರಿಮೆ ಹೊಂದಬಾರದು. ಮನೋರೋಗ ಕಾಯಿಲೆಯಾಗಿದ್ದು, ವಾಸಿಯಾಗಬಲ್ಲ ಹಿಂಜರಿಕೆ ಇಲ್ಲದೇ ವೈದ್ಯರ ಬಳಿ ಹೋಗಬೇಕು. # ವಿಜಯವಾಣಿ ಚಿತ್ರ ಮನಬಿಚ್ಚಿ ಸಮಸ್ಯೆ ವಿವರಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು. ಡಾ. ಆದಿತ್ಯ ಪಾಂಡುರಂಗಿ ಮಾತನಾಡಿ, ಭಾರತದಲ್ಲಿ ಮನೋವ್ಯಾಕುಲತೆ ರೋಗ ಕ್ಕೊಳಗಾದ ಶೇ. 4ರಿಂದ 5ರಷ್ಟಿದ್ದು ಜನರಿದ್ದಾರೆ. ಮನೆ ಮಂದಿ ಅವರೊಂದಿಗೆ ಇದ್ದು ನ್ಯೂನತೆಗಳನ್ನು ಗಮನಿಸಿ ವೈದ್ಯರ ಸಲಹೆ ಪಡೆದು ಔಷಧೋಪಚಾರ ಮಾಡಿಸಬೇಕು. ಅವರ ಆಸಕ್ತಿಗಳನ್ನು ಅರಿತು ಸದಾ ಕ್ರಿಯಾಶೀಲರನ್ನಾಗಿಸಲು ಯತ್ನಿಸಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ವಿಶ್ವ ಮನೋವಿಕಲತೆ ಕುರಿತಾದ ಕಿರುಹೊತ್ತಗೆಯನ್ನು ಬಿಡುಗಡೆ ಗೊಳಿಸಲಾಯಿತು. ಅನುಪಮಾ ಪಾಂಡುರಂಗಿ. ಡಾ. ಸ್ವಪ್ಪಾ ಪಾಂಡುರಂಗಿ, ದತ್ತಾತ್ರೇಯ ರಾಯ್ಕರ್, ಕಿರಣ, ಪ್ರೊ. ನ್ಯಾಮಗೌಡ, ವಿಶ್ವನಾಥ ದೀಕ್ಷಿತ, ನಾಗೇಶ ಮೊಕಾರಿ, ಗಿರೀಶ ದೇಶಪಾಂಡೆ ಇತರರಿದ್ದರು