COVID-19 Resources for Mental Health Coaches... Learn More

0836-2773878

ಮಕ್ಕಳ ಸಾಹಿತ್ಯದಿಂದ ವ್ಯಕ್ತಿತ್ವ ವಿಕಸನ

ಧಾರವಾಡ: ‘ಜಗತ್ತಿನ ಮೊದಲ ಸಾಹಿತ್ಯವೇ ಮಕ್ಕಳ ಸಾಹಿತ್ಯ. ತಾಯಿಯ ಲಾಲಿಯಿಂದ ಆರಂಭವಾಗಿ ದೊಡ್ಡ ಸಾಹಿತ್ಯವಾಗಿ ಬೆಳೆದಿದೆ’ ಎಂದು ಡಾ.ಎಂ. ಎಂ.ಕಲಬುರ್ಗಿ ಟ್ರಸ್ಟ್ ಅಧ್ಯಕ್ಷ ವೀರಣ್ಣ ರಾಜೂರ ತಿಳಿಸಿದರು. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮುಂಡರಗಿ ಕಲಾ ಶಿಕ್ಷಣ ಮತ್ತು ಸಂಸ್ಕೃತಿ ಪ್ರತಿಷ್ಠಾನ ಹಾಗೂ ಚಿಲಿಪಿಲಿ ಸಂಸ್ಥೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಶಿಕ್ಷಕಿ ಕಲಾವತಿ ಸೊಲಗಿ ಸ್ಮರಣೆಯಲ್ಲಿ 2022ರ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮಕ್ಕಳ ಸಾಹಿತಿ ಮತ್ತೂರು ಸುಬ್ಬಣ್ಣ ಹಾಗೂ ಧಾರವಾಡ ಆಕಾಶವಾಣಿ ಮುಖ್ಯಸ್ಥ ಬಸು ಬೇವಿನಗಿಡದ ಅವರಿಗೆ . ಕಲಾವತಿ ಸೊಲಗಿ ಇವರ ಸ್ಮರಣೆಯಲ್ಲಿ code not og go ado ಧಾರವಾಡದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಮಕ್ಕಳ ಸಾಹಿತಿ ಮತ್ತೂರು ಸುಬ್ಬಣ್ಣ ಹಾಗೂ ಧಾರವಾಡ ಆಕಾಶವಾಣಿ ಮುಖ್ಯಸ್ಥ ಬಸು ಬೇವಿನಗಿಡದ ಅವರಿಗೆ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಮಾಲತಿ ಪಟ್ಟಣಶೆಟ್ಟಿ, ಡಾ. ಆನಂದ ಪಾಂಡುರಂಗಿ, ನಿಂಗು ಸೊಲಗಿ, ನಿಂಗಣ್ಣ ಕುಂಠಿ, ಶಶಿಧರ ತೋಡ್ಕರ, ಮಲ್ಲಿಕಾರ್ಜುನ ಚಿಕ್ಕಮಠ, ಕೆ.ಎಚ್.ನಾಯಕ, ಪಿ. ಮಾರುತಿ, ಆನಂದ ಪಾಟೀಲ, ಶರಣಬಸವ ಚೋಳಿನ, ಪ್ರಕಾಶ ಬಾಳಿಕಾಯಿ, ರಾಮು ಮೂಲಗಿ ಇದ್ದರು.

About Author:

Leave Your Comments

Your email address will not be published. Required fields are marked *