COVID-19 Resources for Mental Health Coaches... Learn More

0836-2773878

“ಮಕ್ಕಳ ಮನಸ್ಸಿನಲ್ಲಿ ಏನಿದೆ ಕೇಳಿ ತಿಳಿಯುವ ಜೊತೆಗೆ ಉತ್ತಮ ಹವ್ಯಾಸಕ್ಕೆ ನಿಮ್ಮಿಂದ ಪೂರಕ ವಾತಾವರಣ ಬೆಳೆಸುವ ತಂದೆ ತಾಯಿಗಳಾಗಿ ನಿಮ್ಮ ಜವಾಬ್ದಾರಿ ನಿರ್ವಹಿಸಿರಿ|ತಜ್ಞ ಡಾ.ಆನಂದ ಪಾಂಡುರಂಗಿ”

ಮುನವಳ್ಳಿ: ಬದಲಾದ ಸನ್ನಿವೇಶದಲ್ಲಿ ಪ್ರಭಾವ ಎಲ್ಲೆ ಮೀರಿದೆ. ಅದರ ಸದುಪಯೋಗವಾಗಬೇಕು. ಮಕ್ಕಳಿಗೆ ಮೋಬೈಲ್ ತೋರಿಸಿ ಊಟ ಮಾಡಿಸುವ ಬದಲು ಅವರಷ್ಟಕ್ಕೆ ಅವರೇ ಊಟ ಮಾಡಲು ಅವಕಾಶ ಕೊಡಿ. ಮಕ್ಕಳ ಮನಸ್ಸಿನಲ್ಲಿ ಏನಿದೆ ಕೇಳಿ ತಿಳಿಯುವ ಜೊತೆಗೆ ಉತ್ತಮ ಹವ್ಯಾಸಕ್ಕೆ ನಿಮ್ಮಿಂದ ಪೂರಕ ವಾತಾವರಣ ಬೆಳೆಸುವ ತಂದೆ ತಾಯಿಗಳಾಗಿ ನಿಮ್ಮ ಜವಾಬ್ದಾರಿ ನಿರ್ವಹಿಸಿರಿ ಎಂದು ಖ್ಯಾತ ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ ತಿಳಿಸಿದರ.

ಅವರು ಪಟ್ಟಣದ ಶ್ರೀ ಗಜಾನನ ವಿದ್ಯಾವರ್ಧಕ ಮತ್ತು ಜನಕಲ್ಯಾಣ ಟ್ರಸ್ಟ್‌ (ರಿ)ನ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಮಹಾವಿದ್ಯಾಲಯಗಳ ಪಾಲಕರ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

“ನಾವು ಬಾಂಧವ್ಯಗಳಿಗೆ ಆದ್ಯತೆ ನೀಡಬೇಕು. ನಮ್ಮ ಬಾಲ್ಯದ ದಿನಗಳು ಹೇಗಿದ್ದವು. ಇಂದಿನ ಯಾಂತ್ರಿಕ ಬದುಕಿನಲ್ಲಿ ನಾವು ಹೇಗೆ ಸಾಗುತ್ತಿದ್ದೇವೆ ಎಂಬುದರ ಕುರಿತು ನಾವು ಹಿಂದಿನ ದಿನಗಳ ಮೆಲಕು ಹಾಕಬೇಕಾಗಿದೆ. ನಿಮ್ಮ ಮಕ್ಕಳ ನಡವಳಿಕೆಯಲ್ಲಿ ಸ್ವಲ್ಪವೇ ಸ್ವಲ್ಪ ಬದಲಾವಣೆ ಕಂಡು ಬಂದರೆ ಎದೆಗುಂದಬೇಡಿ ಅವರ ಮನವೊಲಿಸಿ ಅವರ ಮನಸ್ಸಿನಲ್ಲಿ ಏನಿದೆ ಕೇಳಿ ತಿಳಿದು ಅದಕ್ಕೆ ಪರಿಹಾರ ನೀಡಿರಿ”ಎಂದು ಪಾಲಕರಿಗೆ ತಿಳಿಸಿದರು.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮುನವಳ್ಳಿ ಭಂಡಾರಹಳ್ಳಿ ಸೋಮಶೇಖರಮಠದ ಮುರುಘಂದ್ರ ಮಹಾಸ್ವಾಮಿಗಳು ಹಾಗೂ ನಿತ್ಯಾನಂದ ಸಂಗ ಆಶ್ರಮದ ಮುಕ್ತಾನಂದ ಮಹಾಸ್ವಾಮಿಗಳು ವಹಿಸಿದ್ದರು.ಗಜಾನನ ವಿದ್ಯಾವರ್ಧಕ ಮತ್ತು ಜನಕಲ್ಯಾನ ಟ್ರಸ್ಟ್ ನ ಕಾರ್ಯದರ್ಶಿಗಳಾದ ಸುಬ್ರಾಯ ಭಂಡಾರಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ದಂಡಾಧಿಕಾರಿಗಳಾದ ಮಲ್ಲಿಕಾರ್ಜುನ ಹೆಗನ್ನವರ, ಬಾಗಲಕೋಟಿ ವಾಣಿಜ್ಯ ತೆರಿಗೆ(ಜಾರಿ) ಸಹಾಯಕ ಆಯುಕ್ತರಾದ ವಾಯ್ ಎಸ್ ಸಿಂಗನ್ನವರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ, ಶಿಂದೋಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಿ.ಡಿ.ಟೋಪೋಜಿ, ತಾಲೂಕ ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿಗಳಾದ ಶ್ರೀವಾದ ಸಬನೀಸ್, ವಂಚಾಯತ್ ರಾಜ್ ಇಂಜನೀಯರಿಂಗ್ ಉಪವಿಭಾಗ ಸವದತ್ತಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಎಚ್.ಕದರಾಪುರಕರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಭೂಷಿತ ಹಿರಿಯ ಛಾಯಾಗ್ರಾಹಕರಾದ ಪಿ.ಕೆ.ಬಡಿಗೇರ, ಪಂಚಾಯತ್ ರಾಜ್ ಇಂಜನೀಯರಿಂಗ್ ಉಪವಿಭಾಗದ ಸಹಾಯಕ ಅಭಿಯಂತರಾದ ಎಸ್.ಕೆ.ಚವ್ಹಾಣ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪ್ರಥಮ ದರ್ಜೆ ಸಹಾಯಕರಾದ ಪ್ರಶಾಂತ ಮೋಟಿಕರ, ಉಗರಗೋಳ ಶಿವಪ್ಪಯ್ಯ ಶಿವಯೋಗಿಗಳ ಮಠದ ಮುಖ್ಯಸ್ಥರಾದ ಶಿವಪ್ಪಯ್ಯ ಶಿವಯೋಗಿಗಳ ಮಠದ ಕಲ್ಲಪ್ಪ ಬೋರಕನ್ನವರ ಸೇರಿದಂತೆ ಮುಖ್ಯ ಅತಿಥಿಗಳು ಉಪಸ್ಥಿತರಿದ್ದರು.

ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡುತ್ತ “ಮಕ್ಕಳನ್ನು ಪರಿಸರದಲ್ಲಿ ಆಡಲು ಬಿಡಿ.ಅವರು ಆಡುತ್ತ ಕಲಿಯುವಂತಾಗಲಿ. ಮಕ್ಕಳಿಗೆ ಮೋಬೈಲ್ ತೋರಿಸುತ್ತ ಊಟ ಮಾಡಿಸುವ ಬದಲು ಅವರಷ್ಟಕ್ಕೆ ಅವರು ಊಟ ಮಾಡುವುದನ್ನು ರೂಢಿಸಿರಿ.ಮಕ್ಕಳ ಆಸಕ್ತಿ ಅರಿತು ಅವರ ಶಿಕ್ಷಣ ರೂಪಿಸಿ”ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಮಾತನಾಡುತ್ತ “ಮಕ್ಕಳ ಶಿಕ್ಷಣದಲ್ಲಿ ಪಾಲಕರ ಭಾವನಾತ್ಮಕ ಬೆಂಬಲ ಮಹತ್ವದ್ದು. ನಿಮ್ಮ ಮಕ್ಕಳು ಏನಾಗಬೇಕು ಎಂಬುದನ್ನು ಅವರ ಆಸಕ್ತಿ ಅಭಿರುಚಿ ಗಮನಿಸಿ ನಿರ್ಧರಿಸಿ ಆ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ನೀಡಿರಿ”ಎಂದು ಕಿವಿಮಾತು ಹೇಳಿದರು

About Author:

Leave Your Comments

Your email address will not be published. Required fields are marked *