COVID-19 Resources for Mental Health Coaches... Learn More
“ಮಕ್ಕಳ ಮನಸ್ಥಿತಿ ಅರ್ಥೈಸಿಕೊಳ್ಳಬೇಕು”-ಡಾ. ಆದಿತ್ಯ ಪಾಂಡುರಂಗಿ
ಕಟಕೋಳ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ಕಾರಣ, ಒತ್ತಡ ನಿಭಾಯಿಸುವ ಕಲೆ ಕರಗತ ಮಾಡಿಕೊಳ್ಳಬೇಕಿದೆ ಎಂದು ಮನೋರೋಗ ತಜ್ಞ ಡಾ. ಆದಿತ್ಯ ಪಾಂಡುರಂಗಿ ಹೇಳಿದರು. ಸಮೀಪದ ಚಂದರಗಿಯ ಎಸ್.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಪ್ರೌಢಶಾಲೆಯಲ್ಲಿ ಶಿಕ್ಷಕರಿಗಾಗಿ ಈಚೆಗೆ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮ ವಿಷಯದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರಿಗೆ ಮಾನಸಿಕ ಸಮಸ್ಯೆಗಳಿರುತ್ತವೆ. ಮಕ್ಕಳ ವರ್ತನೆಯಲ್ಲಿ ಸಮಸ್ಯೆಗಳು ಕಂಡು ಬಂದಾಗ ತಕ್ಷಣ ಅದರ ಆಳಕ್ಕೆ ಇಳಿದು ಪರಿಹರಿಸಿಕೊಳ್ಳಬೇಕು. ಮನಸ್ಸಿನ ಒತ್ತಡ ನಿಭಾಯಿಸಲು ದುಶ್ಚಟಗಳ ದಾಸರಾಗುವುದು ಪರಿಹಾರವಲ್ಲ ಎಂದರು. ಕನ್ನಡ ಮಾಧ್ಯಮ ಪ್ರಾಚಾರ್ಯ ಎ.ಎನ್.ಮೋದಗಿ, ಶಿಕ್ಷಕ ಎಸ್.ಎ.ಹಿರೇಮಠ, ಸಿಬಿಎಸ್‌ಇ ಪ್ರಾಚಾರ್ಯ ಪಿ.ಕೆ.ಪಾಟೀಲ, ಕಾಲೇಜಿನ ಪ್ರಾಚಾರ್ಯ ಸತೀಶ ಪಾಟೀಲ ಇತರರಿದ್ದರು