COVID-19 Resources for Mental Health Coaches... Learn More
“ಮಕ್ಕಳ ಭವಿಷ್ಯಕ್ಕೆ ಮುಳುವಾಗದಿರಲಿ ಪಾಲಕರ ನಡವಳಿಕೆ”
ಮಕ್ಕಳ ಭವಿಷ್ಯಕ್ಕೆ ಮುಳುವಾಗದಿರಲಿ ಪಾಲಕರ ನಡವಳಿಕೆ.
ಪ್ರತಿ ವ್ಯಕ್ತಿಗೆ ನಡವಳಿಕೆ ಅಥವಾ ವರ್ತನೆ ಮುಖ್ಯ. ವಿಶೇಷವಾಗಿ ಪಾಲಕರ ನಡವಳಿಕೆ ಮಕ್ಕಳ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ನಗುನಗುತಾ ಸಹಬಾಳ್ವೆಯಿಂದ ಕೂಡಿದ್ದರೆ, ಆನಂದಸಾಗರ, ಇಲ್ಲದಿದ್ದರೆ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಅದು ಹೇಗೆ? ಒಂದು ಉದಾಹರಣೆ ಇಲ್ಲಿದೆ.
ಆತ ಸುಂದರ ಯುವಕ, ಅಂದಾಜು 21 ರಿಂದ 22 ವಯಸ್ಸು. ಇಂಜಿನಿಯರಿಂಗ್ ಓದುತ್ತಿದ್ದಾನೆ. ಆತನ ತಂದೆ ತಾಯಿ ಇಬ್ಬರೂ ಉದ್ಯೋಗಸ್ಥರು. ಬೆಳಗ್ಗೆ ಹೋದರೆ ಸಂಜೆ ಮೇಲೆಯೇ ಮನೆಗೆ ಬರುವುದು. ಆರ್ಥಿಕ ಸ್ಥಿತಿ ಚೆನ್ನಾಗಿಯೇ ಇದ. ಯಾವುದೇ ಸೌಲಭ್ಯಗಳಿಗೆ ಕೊರತೆ ಇಲ್ಲ. ಈತ ಏಕೈಕ ಸುಪುತ್ರ. ಆದರೆ ಅದೇನು ಕಾರಣವೋ ಗೊತ್ತಿಲ್ಲ. ದಿನ ಬೆಳಗಾದರೆ ಗಂಡ ಹೆಂಡತಿ ಜಗಳ, ಒದರಾಟ, ಚೀರಾಟ ತಪ್ಪುವುದಿಲ್ಲ. ಮನೆಯ ನೆಮ್ಮದಿ ಮರೀಚಿಕೆಯಾಗಿದೆ. ಕ್ಷುಲ್ಲಕ ವಿಚಾರಗಳಿಗೂ ಜಗಳ ಶುರುವೇ, ಅದು ಮಗನ ಎದುರೇ, ಈ ವಿದ್ಯಮಾನ ಮಗನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿದ. ಎಲ್ಲ ಸ್ನೇಹಿತರಂತೆ ತಾನೂ ಪಾಲಕರ ಜತೆ ಹರಟುತ್ತಾ ಸಮಯ ಕಳೆಯಬೇಕು. ನಕ್ಕು ನಲಿಯಬೇಕು ಎನ್ನುವ ಆಸೆ ಸಹಜವಾಗಿ ಇವನಲ್ಲೂ ಇತ್ತು, ಆದರೆ ಅದಕ್ಕೆ ಈತನ ಪಾಲಕರ ನಿತ್ಯ ಜಗಳ ತಣ್ಣೀರೆರಚಿದೆ. ಅಷ್ಟೇ ಏಕೆ ಈತನಿಗೆ ಜೀವನದ ಬಗ್ಗೆಯೇ ಜುಗುಪ್ಪೆ ಮೂಡಿಸಿದೆ.
ಅಡ್ಡದಾರಿ ಹಿಡಿದ; ಮನೆಯಲ್ಲಿನ ವಾತಾವರಣ ಯುವಕನನ್ನು ಮಾನಸಿಕವಾಗಿ ಜರ್ಝರಿತಗೊಳಿಸಿತ್ತು. ಮೊದಲೇ ಹುಚ್ಚಕೋಡಿ ಮನಸ್ಸಿನ ವಯಸ್ಸು, ಸೋಷಿಯಲ್ ಮೀಡಿಯಾ ಟಿವಿ, ನೆಟ್ ಅಂತಾ ಏನೆಲ್ಲಾ ಆಕರ್ಷಣೆಗಳ ಅಬ್ಬರ ಈ ಮಧ್ಯೆ ಮಾದಕಲೋಕದ ಕಬಂಧಬಾಹು ಎಲ್ಲೆಡೆ ಇದೆ. ಈಗ ಆದದ್ದೂ ಅದೇ. ಈ ಯುವಕನ ಕಣ್ಣಿಗೆ ಬಿದ್ದಿದ್ದು ನಶೆಯ ಲೋಕ. ಮಾದಕ ದ್ರವ್ಯಗಳ ಸೇವನೆ ಈತನ ನಿತ್ಯದ ರೂಢಿಯಾಯಿತು. ಆರಂಭದಲ್ಲಿ ತುಸು ಕಷ್ಟ ಎನಿಸಿದರೂ ಬರುತ್ತಾ ಬರುತ್ತಾ ಬಿಟ್ಟಿರಲಾರದಷ್ಟು ಅದರ ದಾಸನಾದ. ಅಪ್ಪ-ಅಮ್ಮ ಕೆಲಸಕ್ಕೆ ಹೋಗುವುದೊಂದೇ ತಡ, ಈತನ ಮಾದಕಲೋಕದ ಬಾಗಿಲು ತೆರೆಯುತ್ತಿತ್ತು. ಪಾಲಕರು ಕೊಡುವ ಪಾಕೆಟ್ ಮನಿ ಜತೆ ಮನೆಯಲ್ಲಿರುತ್ತಿದ್ದ ದುಡ್ಡು ಎಲ್ಲವೂ ಡ್ರಗ್ಸ್ ಪಾಲು. ಹಣ ಸಲೀಸಾಗಿ ಮತ್ತು ಸಾಕಷ್ಟು ಸಿಗುತ್ತಿದ್ದ ಕಾರಣ ಮಾದಕದ್ರವ್ಯಗಳ ಖರೀದಿಗೆ ಯಾವ ಕೊರತೆ * ಇರಲಿಲ್ಲ. ಪಾಲಕರೂ ಮಗನ ಚಲವಲನಗಳ ಗೋಜಿಗೆ ಹೋಗುತ್ತಿರಲಿಲ್ಲ. ಒಂದು ಅವರಿಗೆ – ಪುರಸೊತ್ತಿನ ಕೊರತೆ, ಇನ್ನೊಂದು ಅವರಿಬ್ಬರ ಜಗಳ ಬಗೆಹರಿದರೆ ಸಾಕು ಎನ್ನುವಂತಾಗಿತ್ತು ಅವರ ಸ್ಥಿತಿ.
ಓದಿನ ಮೇಲೆ ಪರಿಣಾಮ: ಮಾದಕಲೋಕದ ನಶೆ ಆ ಯುವಕನನ್ನು ವಾಸ್ತವ ಜೀವನದಿಂದ ಬಲು ಆದರೆ ಕ್ರಮೇಣ ಭವಿಷ್ಯದ ಚಿಂತೆ ಹಾಗೂ ಸಕಾಲಕ್ಕೆ ಸಿಕ್ಕ ಒಳ್ಳೆಯ ಸ್ನೇಹಿತರ ಫಲವಾಗಿ ಆತನಿಗೆ ಡ್ರಗ್ಸ್ ಸಹವಾಸ ಸಾಕೆನಿಸಿತ್ತು. ಇದರಿಂದ ಓದು ಹಾಳು, ಹೊರಪ್ರಪಂಚದ ನಂಟು ಕಳೆದುಕೊಳ್ಳಬೇಕು, ಯಾರ ಜತೆ ಬೆರೆಯುವಂತಿಲ್ಲ. ಹೀಗೆ ಹಲವು ಸಮಸ್ಯೆಗಳ ಸುಳಿಯಲ್ಲಿ ಅತ ಸಿಕ್ಕು ಕೊನೆಗೆ ಆಪ್ತ ಸಮಾಲೋಚನೆ, ಚಿಕಿತ್ಸೆಗಾಗಿ ನನ್ನ ಬಳಿ ಬಂದ. ಮನೆಯ ವಾತಾವರಣ ಹಿನ್ನಲೆ ಎಲ್ಲ ವಿಚಾರಿಸಿದ ನಂತರ ಆತನಿಗೆ ಜೀವನದ ಕಟು ಸತ್ಯ ವಿವರಿಸಿದೆ. టుంబ ವ್ಯವಸ್ಥೆ, ಮಕ್ಕಳ ಹಾಗೂ ಪಾಲಕರ ಜವಾಬ್ದಾರಿ, ಕರ್ತವ್ಯಗಳೇನು? ನಡವಳಿಕೆ ಹೇಗಿರಬೇಕು ಎಂಬುದನ್ನು ವಿವರಿಸಿದೆ. ಆಗ ಆತನಿಗೆ ತನ್ನ ತಪ್ಪಿನ ಅರಿವಾಯಿತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ಯುವಕನ ಈ ಸ್ಥಿತಿಗೆ ಮೂಲ ಕಾರಣ ಪಾಲಕರ ವರ್ತನೆ ಎಂಬುದು. ಪರಿಹಾರವೇನು?: ಈ ತರಹದ ಸನ್ನಿವೇಶಗಳು ಎದುರಾಗಬಾರದು – ಅಂದರೆ ಎಲ್ಲ ಪಾಲಕರು ತಮ್ಮ ತಮ್ಮ ಭಿನ್ನಾಭಿಪ್ರಾಯ ಏನೇ ಇದ್ದರೂ ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕು. ವಿಶೇಷವಾಗಿ ಮಕ್ಕಳೆದುರು ಕೂಗಾಟ, ಚೀರಾಟ, ವೈದಾಟ ಮಾಡಲೇಬಾರದು. ಇದರಿಂದ ಮನಸ್ತಾಪದ ಜತೆಗೆ ಮಕ್ಕಳಿಗೆ ಪ್ರೀತಿಯ ಕೊರತೆ ಕಾಡಲಾರಂಭಿಸುತ್ತದೆ. ಪ್ರೀತಿ ಅರಸುವ ನೆಪದಲ್ಲಿ ಅವರು ಮಾದಕದ್ರವ್ಯಗಳ ಸೇವನೆಯಂತಹ ದುಶ್ಚಟಗಳಿಗೆ ಮೊರೆ ಹೋಗುತ್ತಾರೆ. ಅದರಿಂದ ಇಡೀ ಜೀವನವೇ ಹಾಳಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡದೆ ಮಕ್ಕಳಲ್ಲಿ ಜೀವನೋತ್ಸಾಹ ತುಂಬಬೇಕು. ಸಾಧನೆಯ ಛಲ ಬಿತ್ತಬೇಕು.