COVID-19 Resources for Mental Health Coaches... Learn More
ಮಕ್ಕಳ ಪ್ರತಿಭೆ ಗುರುತಿಸಿ ಬೆಂಬಲಿಸಿ : ಡಾ.ಪಾಂಡುರಂಗಿ
ಹುಬ್ಬಳ್ಳಿ: ಮಕ್ಕಳನ್ನು ಬೆಳೆಸುವಾಗ ಮುಕ್ತ ವಾತಾವರಣದಲ್ಲಿ ಅವರ ಮನಸ್ಸನ್ನು ಅರಿತುಕೊಂಡು ಬೆಳೆಸಬೇಕು. ಆದ್ದರಿಂದ ಪಾಲಕರು ಮಕ್ಕಳಿಗೆ ಒತ್ತಡವನ್ನು ಹಾಕದೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಬೆಂಬಲಿಸಬೇಕೆಂದು ಖ್ಯಾತ ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ ಹೇಳಿದರು. ಗೋಕುಲ ರಸ್ತೆಯ ಜೈಂಟ್ಸ್ ಆಂಗ್ಲ ಮಾಧ್ಯಮ ಸಿಬಿಎಸ್‌ಇ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇನ್ನೋರ್ವ ಅತಿಥಿ ನಿವೃತ್ತ ವಾಣಿಜ್ಯ ತೆರಿಗೆ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಮಕ್ಕಳು ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡು ಎತ್ತರಕ್ಕೆ ಬೆಳೆಯುವಂತೆ ಹೇಳಿದರು. ಸಂಸ್ಥೆಯ ಅಧ್ಯಕ್ಷ ಪರಶುರಾಮ ಊಟವಾಲೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯನಿರ್ವಾಹಕ ಅಧ್ಯಕ್ಷರಾದ ಎನ್.ಆರ್.ರವಿ, ಮಾಜಿ ಅಧ್ಯಕ್ಷರುಗಳಾದ ಸಿಎ ಎಮ್.ಕೆ.ಬಾಬಾಜಿ, ಜಿ.ಎಸ್.ನಾಯ್ಕ, ಪ್ರವೀಣ ಪಟೇಲ, ಡಾ॥ ಎಸ್.ಆರ್.ಹನಮರಡ್ಡಿ ಕಾರ್ಯದರ್ಶಿಗಳಾದ ವಿಜಯಕುಲಕರ್ಣಿ ಸದಸ್ಯರುಗಳಾದ ಅಶೋಕ ವಕ್ಕುಂದ, ಪ್ರವೀಣ ಮುತಾಲಿಕ, ಪ್ರವೀಣ ನಾಗರಕಟ್ಟೆ, ವಿಜಯ ಪಟೇಲ್ ಮತ್ತು ಮಾಜಿ ಅಧ್ಯಕ್ಷರುಗಳಾದ ಸಿಎ ಎಮ್. ಕೆ.ಬಾಬಾಜಿ, ಜಿ.ಎಸ್.ನಾಯ್ಕ, ಪ್ರವೀಣ ಪಟೇಲ, ಡಾ॥ ಎಸ್.ಆರ್.ಹನಮರಡ್ಡಿ ಆಡಳಿತಾಧಿಕಾರಿಣಿಯಾದ ಉಮಾ ಸಿ. ಪಾಟೀಲ್, ಮುಖ್ಯೋಪಾಧ್ಯಾಯ ಬಸವರಾಜ ಚಟ್ಟಿ ಸೇರಿದಂತೆ ಎಲ್ಲ ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಇದ್ದರು, ನಂತರ ನಂತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮುದ ನೀಡಿದವು.