COVID-19 Resources for Mental Health Coaches... Learn More

0836-2773878

ಭಯಕ್ಕೆ ಗುಡ್ ಬೈ, ಯಶಸ್ಸಿಗೆ ಜೈ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಟಿಪ್ಸ್.

ಪರೀಕ್ಷೆ ಕುರಿತು ಅನಗತ್ಯ ಆತಂಕ ಬೇಡ. ನಿಮ್ಮ ಯತ್ನ, ನೀವು ನಡೆಸಿದ ಸಿದ್ಧತೆ ಎಂದಿಗೂ ನಿಮ್ಮ ಕೈ ಬಿಡಲಾರದು. ಆತ್ಮವಿಶ್ವಾಸ ಇರಲಿ. ಅದುವೇ ನಿಮ್ಮ ಯಶಸ್ಸಿನ ಕೀಲಿ ಕೈ. ವರ್ಷವಿಡೀ ಓದಿದ ಪಠ್ಯಕ್ರಮವನ್ನು ಸರಿಯಾಗಿ ಮನನ ಮಾಡಿಕೊಳ್ಳಿ. ಪ್ರಮುಖ ಅಂಶಗಳ ಪಟ್ಟಿ ಮಾಡಿ. ಕಠಿಣ ಪ್ರಶ್ನೆಪತ್ರಿಕೆ ಬರುತ್ತದೆ ಎನ್ನುವ ನಕಾರಾತ್ಮಕ ಆಲೋಚನೆ ಬೇಡ. ಏನೇ ಕೊಟ್ಟರೂ ನಾ ಬರೆಯಬಲ್ಲೆ ಎನ್ನುವ ಛಾತಿ ಇರಲಿ. ಈ ಮಧ್ಯೆ ಓದಿದ್ದು ಮರೆತರೆ ಹೇಗೆ ಎನ್ನುವ ಭಯವೂ ಬೇಡ.

ಸಹಪಾಠಿಗಳೊಂದಿಗೆ ಹೋಲಿಕೆ ಬೇಡ, ಉತ್ತಮ ಅಂಕ ಪಡೆಯಲು ಪ್ರಾಮಾಣಿಕ ಯತ್ನವಿರಲಿ. ಪರೀಕ್ಷೆ ಕೊಠಡಿಯಲ್ಲಿ ಅಕ್ಕಪಕ್ಕದವರು ಸಪ್ಲಿಮೆಂಟ್ ಹಚ್ಚಿ ಬರೆಯುತ್ತಿದ್ದಾರೆ. ನನಗೆ ಅದು ಸಾಧ್ಯವಾಗಿಲ್ಲ ಎನ್ನುವ ಕೊರಗು ಬೇಡ. ಅದು ಮಾನದಂಡವಲ್ಲ. ಇಲ್ಲಿ ಪ್ರಮಾಣಕ್ಕಿಂತ ಪರಿಣಾಮ ಮುಖ್ಯ ಎಂಬುದು ಗೊತ್ತಿರಲಿ.

ಇನ್ನು ಪಾಲಕರೂ ಆಷ್ಟೇ ಮಕ್ಕಳ ಮೇಲೆ ಇನ್ನಿಲ್ಲದ ಒತ್ತಡ ಹಾಕಬೇಡಿ. ನಿರೀಕ್ಷೆಯ ಭಾರ ಹೊರಿಸಬೇಡಿ. ಇನ್ನಾರದ್ದೋ ಫಲಿತಾಂಶ ತೋರಿಸಿ ನೋಡು ನೀನು ಹಾಗಾಗಬೇಕು, ಅವನಷ್ಟು ಇಲ್ಲ ಅವನಿಗಿಂತ ಹೆಚ್ಚು ಅಂಕ ಪಡೆಯಲೇಬೇಕು. ಇದು ನನ್ನ ಪ್ರತಿಷ್ಠೆಯ ಪ್ರಶ್ನೆ ಎಂದು ಮಕ್ಕಳಿಗೆ ಟಾರ್ಗೆಟ್ ನೀಡಬೇಡಿ. ಹೋಗಿ ಬನ್ನಿ ಎಲ್ಲವೂ ಸುಲಭವಾಗಿ, ಸರಳವಾಗಿ ಸಾಗುತ್ತದೆ ಎನ್ನುವ ಧೈರ್ಯದ ಮಾತನಾಡಿ ಪ್ರೋತ್ಸಾಹಿಸಿ.

About Author:

Leave Your Comments

Your email address will not be published. Required fields are marked *