COVID-19 Resources for Mental Health Coaches... Learn More
“ಪ್ರತಿಭಾ ಪ್ರತಿಷ್ಠಾನದಿಂದ ಶಿಷ್ಯವೇತನ ವಿತರಣೆ ಗುರಿ ಸಾಧನೆಗೆ ಶಿಷ್ಯವೇತನ ಸದ್ಬಳಕೆಯಾಗಲಿ”
ಉನ್ನತ ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಪ್ರತಿಭಾ ಪ್ರತಿಷ್ಠಾನ ಮಾಡುತ್ತಿರುವ ಕಾರ್ಯ ಮಾದರಿಯಾಗಿದೆ ಎಂದು ಲೋಕಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಕೇಶವ ದೇಸಾಯಿ ಹೇಳಿದರು. ನಗರದ ವನವಾಸಿ ಶ್ರೀರಾಮ ಮಂದಿರದ ಸಭಾಭವನದಲ್ಲಿ ಪ್ರತಿಭಾ ಪ್ರತಿಷ್ಠಾನದಿಂದ ರವಿವಾರ ಆಯೋಜಿಸಿದ್ದ ಶಿಷ್ಯವೇತನ ವಿತರಣೆ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಈ ಶಿಷ್ಯ ವೇತನ ಸದುಪಯೋಗಪಡಿಸಿಕೊಳ್ಳುವ ಮೂಲಕ ಜೀವನದ ಗುರಿ ಮುಟ್ಟಬೇಕು ಎಂದರು. ಪ್ರತಿಭಾ ಪ್ರತಿಷ್ಠಾನವು ಅನೇಕ ಮಹನೀಯರ ಶ್ರಮದಿಂದ ಹುಟ್ಟಿಕೊಂಡಿದೆ. ಈ ಪ್ರತಿಷ್ಠಾನದಿಂದ ಸದಾ ಇಂತಹ ಕಾರ್ಯಗಳು ನಡೆಯುತ್ತಾ ಸಾಗಬೇಕು. ಮಕ್ಕಳ ವಿದ್ಯಾರ್ಜನೆಗೆ ಕೈಗೊಳ್ಳುವ ಇಂತಹ ಕಾರ್ಯಕ್ಕೆ ಸದಾ ಬೆಂಬಲ ಇದೆ. ಅದಕ್ಕಾಗಿ ಪ್ರತಿಭಾ ಪ್ರತಿಷ್ಠಾನಕ್ಕೆ 51 ಸಾವಿರ ರೂ. ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದರು. ಅತಿಥಿಯಾಗಿದ್ದ ಮನೋವೈದ್ಯ ಡಾ. ಆದಿತ್ಯ ಪಾಂಡುರಂಗಿ ಮಾತನಾಡಿ, ಎಷ್ಟೋ ಮಕ್ಕಳಿಗೆ ಓದುವ ಆಸಕ್ತಿ ಇರುತ್ತದೆ. ಆದರೆ, ಆರ್ಥಿಕವಾಗಿ ಅನುಕೂಲತೆ ಇರುವುದಿಲ್ಲ. ಇಂತಹ ಕಾರ್ಯದ ಮೂಲಕ ಎಷ್ಟೋ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಮುಂದೆ ಆ ವಿದ್ಯಾರ್ಥಿ ಕೂಡಾ ನೆನೆಯುವ ಕಾರ್ಯ ಮಾಡಬೇಕು ಎಂದು ತಿಳಿಸಿದರು. ಪ್ರೌಢಶಾಲೆಯವರೆಗೆ ವಿದ್ಯಾರ್ಥಿಯ ದಾರಿ ಚೆನ್ನಾಗಿಯೇ ಇರುತ್ತದೆ. ಆದರೆ, ಕಾಲೇಜು ಮೆಟ್ಟಿಲು ಹತ್ತಿದ ತಕ್ಷಣ ಆತನ ಗುರಿ, ದಾರಿ ಬೇರೆಯೇ ಆಗಿ ಹೋಗುತ್ತದೆ. ಸಮಾಜದ ಆಕರ್ಷಣೆ ಹಾಗೂ ದುಶ್ಚಟಗಳಿಗೆ ಒಳಗಾಗಿ ಬಲಿಯಾಗುವುದನ್ನು ನೋಡುತ್ತೇವೆ. ಇಂದಿನ ಮಕ್ಕಳಲ್ಲಿ ಮೊಬೈಲ್‌ಗಳ ಉಪಯೋಗಕ್ಕಿಂತ ದುರ್ಬಳಕೆಯೇ ದುರ್ಬಳಕೆಯೇ * ಹೆಚ್ಚಾಗುತ್ತಿರುವುದು : ಹೆಚ್ಚಾಗ ದುರ್ದೈದ ಸಂಗತಿ ಎಂದರು. ಕೇಶವ ದೇಸಾಯಿ, ಡಾ. ಆದಿತ್ಯ ಪಾಂಡುರಂಗಿ, ಪ್ರೊ. ಮೋಹನ ಸಿದ್ಧಾಂತಿ ಅವರನ್ನು ಸನ್ಮಾನಿಸಲಾಯಿತು. ಪಿಯುಸಿ ಹಾಗೂ ಎಸ್‌ಎಸ್ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ, ಶಿಷ್ಯ ವೇತನ ನೀಡಲಾಯಿತು. ಪಿ.ಜಿ. ನರಸಾಪೂರ ಅಧ್ಯಕ್ಷತೆ ವಹಿಸಿದ್ದರು. ರಾಜು ಪಾಟೀಲ ಕುಲಕರ್ಣಿ, ಪ್ರೊ. ಗೋಪಾಲ ಕಮಲಾಪೂರ, ಮಧುಕರ ಟಂಕಸಾಲಿ, ಎಸ್.ಎಮ್. ದೇಶಪಾಂಡೆ, ಎಸ್.ಆರ್. ಗರಗ ಮುಂತಾದವರು ಈ ಸಂದರ್ಭದಲ್ಲಿದ್ದರು. ಶ್ರೀಹರಿ ಅಂಬೇಕರ ಪ್ರಾರ್ಥಿಸಿದರು. ವೆಂಕಟೇಶ ದೇಸಾಯಿ ಸ್ವಾಗತಿಸಿದರು. ಅನಿಲ ಕಾಖಂಡಕಿ ನಿರೂಪಿಸಿದರು. ಮಧುಕರ ಧಾರವಾಡಕರ ವರದಿ ವಾಚಿಸಿದರು. ಅನಿಲ ಕೊಪ ವಂದಿಸಿದರು.