COVID-19 Resources for Mental Health Coaches... Learn More

0836-2773878

ಪ್ರತಿಭಾ ಪುರಸ್ಕಾರ ಹಾಗೂ 75 ವರ್ಷ ಪೂರೈಸಿದ ಹಿರಿಯರಿಗೆ ಸನ್ಮಾನ.

ಧಾರವಾಡ: ಮಕ್ಕಳಲ್ಲಿ ವಿಶಿಷ್ಟ ಪ್ರತಿಭೆ ಇರುತ್ತದೆ, ಅದನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು, ಅಗಮಾತ್ರ ಅವರು ಆಸಕ್ತಿಯಿಂದ ಕಲಿತು ಮುನ್ನಡೆಯುತ್ತಾರೆ. ಇಲ್ಲವಾದರೆ ಅವರಿಗೆ ಕಲಿಕೆ ಮತ್ತು ಶಿಕ್ಷಣ ಒತ್ತಡವಾದಂತಾಗುತ್ತದೆ ಎಂದು ಮೇಯರ್ ವೀಣಾ ಬರದ್ವಾಡ ಹೇಳಿದರು.

ಇಲ್ಲಿಯ ರವೀಂದ್ರ ನಗರದ ದೇವಾಂಗ ವಿದ್ಯಾರ್ಥಿ ನಿಲಯ ಹಾಗೂ ಎನ್.ಆರ್. ಹುಲಮನಿ ಸಭಾಭವನದಲ್ಲಿ ದೇವಾಂಗ ಸಮಾಜದ ವತಿಯಿಂದ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವು ಮಕ್ಕಳ ಕಲಿಕೆಗೆ ಪ್ರೋತ್ಸಾಹದಾಯಕವಾಗಿರಬೇಕೆ ಹೊರತು ಹೊರೆಯಾಗಬಾರದು ಎಂದು ಸಲಹೆ ನೀಡಿದರು. ಅತಿಥಿಯಾಗಿದ್ದ ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಮಾತನಾಡಿ, ಇತ್ತೀಚಿಗೆ ಾಲಕರು ತಮ್ಮ ಮಕ್ಕಳು ಪಡೆಯುವ ಅಂಕಗಳ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇದಕ್ಕಿಂತ ತಮ್ಮ ಮಕ್ಕಳು ಹೇಗೆ ಕಲಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎನ್ನುವುದರ ಕಡೆ ಗಮನ ಹರಿಸಬೇಕು ಎಂದು ಹೇಳಿದರು.

ದೇವಾಂಗ ಸಮಾಜದ ಅಧ್ಯಕ್ಷ ವಿನೋದ ಹುಲಮನಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, 75 ವಸಂತಗಳನ್ನು ಪೂರೈಸಿದ ವಿಶ್ವನಾಥ ಹುಲ್ಲೂರ, ಎಸ್.ಕೆ. ಕುಂದರಗಿ, ಬಸವರಾಜ ಗಿಡ್ನಂದಿ,ಶಾಂತಾದೇವಿ ಗಾಡದ, ಯಶೋದಾ ಗಿಡ್ಕಂದಿ ಅವರನ್ನು ು ಮಕ್ಕಳು ಹೇಗೆ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಕಾರ್ಯದರ್ಶಿ ಎನ್ನುವುದರ ಕಡೆ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಜನಾ ಕೆರೂರ, ಕಮಲಾ ಕುಡ್ಲನ್ನವರ್, ಕಿಶನ್ ಉಳ್ಳಿ, ಅಪರ್ಣಾ ಶೇಗಡಿ, ಧನ್ಯ ಅಥಣಿ ಹಾಗೂ ಭಕೇಶ್ ಹೆಬ್ಬಳ್ಳಿ ಅವರಿಗೆ ಪ್ರೋತ್ಸಾಹಧನ ನೀಡಲಾಯಿತು. ಮಹಿಳಾ ಮಂಡಳದ ವತಿಯಿಂದ ರಂಗೋಲಿ, ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಜರುಗಿದವು. ವಿಜೇತರಿಗೆ ಬಹುಮಾನ ನೀಡಲಾಯಿತು

ಸಮಾಜದ ಕಾರ್ಯದರ್ಶಿ ಚೋಳಿನ್. ಶಕ್ತಿ ಪ್ರಧಾನ ಜ್ಞಾನೇಶ್ವರ ಮಹಿಳಾ ಮಂಡಳದ ಅಧ್ಯಕ್ಷೆ ಮಂಜುಳಾ ಗೆ ಬೋರಣ್ಣವರ್ ಉಪಸ್ಥಿತರಿದ್ದರು. ಡಾ. ಗುರುರಾಜ್ ಗಾಡದ ವು. ಸ್ವಾಗತಿಸಿದರು. ವಂದಿಸಿದರು.

About Author:

Leave Your Comments

Your email address will not be published. Required fields are marked *