COVID-19 Resources for Mental Health Coaches... Learn More
“ನಿರ್ಧಾರ ತೆಗೆದುಕೊಳ್ಳುವಾಗ ಮನಸ್ಸು ದುಡುಕದಿರಲಿ.”
ನಿರ್ಧಾರ ತೆಗೆದುಕೊಳ್ಳುವಾಗ ಮನಸ್ಸು ದುಡುಕದಿರಲಿ.
“ನನಗೀಗ ತಪ್ಪಿನ ಅರಿವಾಗಿದೆ. ಇನ್ನೆಂದೂ ಆತಪ್ಪು ಮರುಕಳಿಸಲು ಅವಕಾಶ ನೀಡುವುದಿಲ್ಲ. ನಾನೂ ಎಲ್ಲರಂತೆ ಬಾಳಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ನಲಿದಾಡಬೇಕು. ಲೈಫ್ ಎಂಜಾಯ್ ಮಾಡಬೇಕು….’ಇವು ಯಾವುದೋ ಒಂದು ಕ್ಷಣದಲ್ಲಿ ದುಡುಕಿ ಮಾಡಿದ ತಪ್ಪಿನಿಂದ ಮೂರುವರೆ ವರ್ಷ ಜೈಲುವಾಸ ಅನುಭವಿಸಿ ಬಿಡುಗಡೆ ಹೊಂದಿ ಬಂದ ವ್ಯಕ್ತಿಯ ಮಾತುಗಳು, ಆಗ ತಪ್ಪಿನ ಅರಿವಾಗಿದೆ. ಜೀವನದ ಮೌಲ್ಯ ಗೊತ್ತಾಗಿದೆ. ಮುಂದೇನು? ಎನ್ನುವ ಪ್ರಶ್ನೆ ಹೊತ್ತು ನನ್ನ ಬಳಿ ಆಪ್ತ ಸಮಾಲೋಚನೆಗೆ ಬಂದಿದ್ದ. ಮಾಡಿದ ತಪ್ಪಿನ ಬಗ್ಗೆ ವಿಷಾದವಿತ್ತು. ಜತೆಜತೆಗೆ ಉಜ್ವಲ ಭವಿಷ್ಯದ ಕನಸು ಕೂಡ ಇತ್ತು. ಆದರೆ ಇದಕ್ಕೆ ಉಪಾಯವೇನು ಎಂಬ ಗೊಂದಲವೂ ಇತ್ತು.ಆಗಿದ್ದಾದರೂ ಏನು?:
ಆತ 35-36 ವರ್ಷದ ಮಧ್ಯವಯಸ್ಕ ಹೋಟೆಲ್ ವೊಂದರಲ್ಲಿ ಚೀಫ್ ಸೇಫ್ ಆಗಿ ಕಾರನಿರ್ವಹಿಸುತ್ತಿದ್ದ. ಅದ್ಯಾವ ಕೆಟ್ಟ ಗಳಿಗೆಯೋ ಗೊತ್ತಿಲ್ಲ. ಒಂದು ಕೆಟ್ಟ ಕೆಲಸ ಮಾಡಿದ. ಪರಿಣಾಮ ಜೈಲುವಾಸ ಅನುಭವಿಸಬೇಕಾಯಿತು. ಮನೆಯಲ್ಲಿ ತಂದೆ ಹಾಗೂ ಮಲತಾಯಿ ಇದ್ದರು. ಜನ್ಮ ನೀಡಿದ ತಾಯಿ ತೀರಿಯಾಗಿತ್ತು. ಹೇಳುವವರು ಕೇಳುವವರು ಇರಲಿಲ್ಲ. ಇದಕ್ಕೆ ಆತನ ವಯಸ್ಸಿನ ಹುಚ್ಚಕೋಡಿ ಮನಕ್ಕೂ ಕಾರಣ. ಯಾವಾಗ ಜೈಲು ಸೇರಿದನೋ ಆಗ ಆತನಿಗೆ ಬದುಕಿನ ಬೆಲೆ ಗೊತ್ತಾಗಹತ್ತಿತು. ಇಂದಿಲ್ಲ. ನಾಳೆ ಬಿಡುಗಡೆ ಆಗುವ ಎಂಬ ಭರವಸೆಯೊಂದಿಗೆ ಜೀವನ ಸಾಗಿಸಿದ. ಜೈಲಿನಲ್ಲಿನ ದಿನಚು ಈತನಲ್ಲಿ ಶಿಸ್ತು ತುಂಬಿದ್ದವು. ಕ್ರಿಯಾಶೀಲ ಕೂಡ ಆಗಿದ್ದ. ಸಮಯಕ್ಕೆ ತಕ್ಕಂತೆ ಸರಿಯಾಗಿ ಕೆಲಸಗಳನ್ನು ಚಾಚೂ ತಪ್ಪದೇ ಮಾಡುತ್ತಿದ್ದ. ಜತೆಗೆ ಒಂದಿಷ್ಟು ಧ್ಯಾನ, ಯೋಗ ಮತ್ತು ಓದುವ ಹವ್ಯಾಸವೂ ಇತ್ತು. ಇದು ಇವನಿಗೆ ಗೊತ್ತಿಲ್ಲದೇ ವ್ಯಕ್ತಿತ್ವವನ್ನು ಬಲಿಷ್ಠಗೊಳಿಸಿತ್ತು. ಒಂದು ಹಂತದ ಸರಿ ದಾರಿಗೆ ತಂದು ನಿಲ್ಲಿಸಿತ್ತು. ಅದೇ ರೀತಿ ಕಾಲಕ್ರಮೇಣ ನರವಾದ ಅವಧಿ ಮುಗಿಯುತು,ಈಗಿರುವ ಸಮಸ್ಯೆ ಏನು?: ಹೊರಬಂದ ನಂತರ ಮುಂದೇನು? ಯಾವ ರೀತಿ ಬದುಕಿನ ಪಯಣ ಎಂಬ ಗೊಂದಲ ಈತನಲ್ಲಿ ಮನೆ ಮಾಡಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಜೀವನೋತ್ಸಾಹ ಇಮ್ಮಡಿಯಾಗಿತ್ತು. ಎಲ್ಲರಂತ ತಾನೂ ಮದುವೆಯಾಗಬೇಕು. ಮಡದಿ ಮಕ್ಕಳೊಡನೆ ಹಾಯಾಗಿರಬೇಕು. ಮನೆ ಕಟ್ಟಬೇಕು. ಕಾರು 2 ಖರೀದಿಸಬೇಕು ಇತ್ಯಾದಿ ಮಹಾತ್ವಾಕಾಂಕ್ಷೆ ಬಲವಾಗಿ ಬೇರೂರಿತ್ತು. ಆದರೆ ಹಲವು ಗೊಂದಲಕಾರಿ ಪ್ರಶ್ನೆಗಳು ಆತನಿಗೆ ಎದುರಾಗಿದ್ದವು. – ಯಾವುದು ನನ್ನ ಆದ್ಯತೆಯಾಗಬೇಕು? ಯಾವುದು ಮೊದಲು ಮಾಡಿದರೆ ಮುಂದೆ ಬಾಳು ಹಸನಾಗುತ್ತದೆ. ಹಂತ ಹಂತವಾಗಿ ಜೀವನ ಸುಧಾರಿಸುತ್ತದೆ ಎಂಬುದನ್ನು ಅರಿಯಲು ಸಲಹೆ ಕೋರಿ ನನ್ನ ಬಳಿ ಬಂದಿದ್ದ.ಪರಿಹಾರವೇನು?:
ಜೀವನದಲ್ಲಿ ಏಳು ಬೀಳು, ನೋವು ನಲಿವು ಸಹಜ ಮತ್ತು ಅನಿವಾರ್ಯ. ನಾಣ್ಯ ಟಾಸ್ ಮಾಡಿದಾಗ ಕಾಯಂ ಆಗಿ ಕಿಂಗ್ ಬೀಳುವುದಿಲ್ಲ. ಹಾಗೆಯೇ ಸೋಲು, ನೋವು ಯಾವುದೂ ಶಾಶ್ವತವಲ್ಲ. ಈ ಮಧ್ಯೆ ನಾವು ಮಾಡುವ ಕೆಲ ತಪ್ಪುಗಳು, ಎಡವಟ್ಟುಗಳು, ದುಡುಕಿನ ನಿರ್ಧಾರಗಳು, ನಿಗ್ರಹರಹಿತ ಜೀವನಶೈಲಿ, ದುಖದ ಕೂಪಕ್ಕೆ ತಿಳಿ ಬಿಡುತ್ತವೆ. ಒಂದು ಕಣದ ಅಮೇಶ ಅಥವಾ ಅಕೋಶದಿಂದಲೂ ಈ ತರಹದ ಸನ್ನಿವೇಶ ಸೃಷ್ಟಿಯಾಗಲು ಕಾರಣವಾಗುತ್ತದೆ. ಹಾಗಾಗದಂತೆ ಮುನ್ನೆಚ್ಚರಿಕೆ ವಹಿಸಿ ದಾಳುವುದೇ ಇದಕ್ಕಿರುವ ಪರಿಹಾರೋಪಾಯ, ಮತ್ತೊಬ್ಬರ ಜತೆಗೆ ಹೋಲಿಕೆ ಮಾಡಿಕೊಂಡು ಬದುಕಬಾರದು. ದಿಢೀರ್ ಶ್ರೀಮಂತನಾಗಬೇಕೆನ್ನುವ ಭರದಲ್ಲಿ ವಾಮರ್ಮಾಗದ ದುಡಿಮೆ ತಪ್ಪು. ಕಾಯಕ ಶ್ರದ್ಧೆ ಇರಬೇಕು. ಪ್ರಾಮಾಣಿಕತೆಯೂ ಅಗತ್ಯ, ಮೇಲಾಗಿ ಶುದ್ಧ ಮನಸ್ಸು ಬಹಳ ಮುಖ್ಯ. ಸ್ವಸ್ಥ ಮನಸ್ಸಿನಿಂದ ಸ್ವಸ್ಥ ಸಮಾಜ ನಿರ್ಮಾಣ ಆಗುತ್ತದೆ ಎಂಬುದನ್ನು ಆತನಿಗೆ ತಿಳಿ ಹೇಳಿದೆ. ಬದುಕಿನಲ್ಲಾದ ಕಹಿ ಘಟನೆಗಳನ್ನು ಮರೆತು ಬಿಡು, ಈಗ ಬದುಕಿನ ಪುಟದಲ್ಲಿ ಹೊಸ ಅಧ್ಯಾಯ ರಿ. ಇದಕ್ಕೆ ಹೊಸ ಮುನ್ನುಡಿ ಬರೆಯುವ ಜವಾಬ್ದಾರಿ ನಿನ್ನದೇ, ಸಲಹೆ ನನ್ನದು ಎಂದು ಹೇಳಿ ಕಳಿಸಿದೆ. ನನ್ನ ಸಲಹೆ ಆತನಲ್ಲಿ ಆತ್ಮ ವಿಶ್ವಾಸ ಅವು ಹುಟ್ಟಿಸಿತ್ತು. ಮೊದಲೇ ನೀನು ಇಷ್ಟು ವರ್ಷ ಕಷ್ಟ ಪಟ್ಟಿದ್ದೀ, ಒಳ್ಳೆಯ ಜೀವನ ನಡೆಸೋ ಆಸೆಯೂ ಇದೆ. ಆದರೆ ಅವಸರದಲ್ಲಿ ತಪ್ಪು ನೀವು ಮತ್ತು ದುಡುಕಿನ ನಿರ್ಧಾರ ತಗೆದುಕೊಂಡು ಹಿಂದಿನ ಜೀವನ ల ಮರುಕಳಿಸುವುದು ಬೇಡ, ಶೀಘ್ರ ಹಣದಿಂದ ಸುಖ ಸಿಗುವುದಿಲ್ಲ. ಎಂದು ತಿಳಿಹೇಳಿದೆ. ಅದಕ್ಕೆ ನಾವು ಹೇಳುವುದು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಮನಸು ನಿಧಾನವಾಗಿದ್ದರೆ ಒಳಿತು.