COVID-19 Resources for Mental Health Coaches... Learn More
“ನಿಯಂತ್ರಿಸದಿದ್ದರೆ ಸಿಟ್ಟು ಬೀಳುವುದು ಬಲವಾದ ಪೆಟ್ಟು.”
ನಿಯಂತ್ರಿಸದಿದ್ದರೆ ಸಿಟ್ಟು ಬೀಳುವುದು ಬಲವಾದ ಪೆಟ್ಟು.
‘ನನಗೇನೂ ಆಗಿಲ್ಲ. ಚೆನ್ನಾಗಿ ದುಡಿಯುತ್ತೇನೆ. ಕೈ ತುಂಬಾ ಗಳಿಕೆ ಇದೆ, ಹೊಟ್ಟೆ ಬಟ್ಟಿಗೂ ಕೊರತೆಯಿಲ್ಲ. ಬೇರೆ ಯಾವುದೇ ದೈಹಿಕ ಸಮಸ್ಯೆಗಳು ಇಲ್ಲ. ಆದರೆ ಸಿಟ್ಟು ಮಾತ್ರ ಬಹಳಷ್ಟು ಬರುತ್ತದೆ. ಸಿಟ್ಟು ಬಂತೆಂದರೆ ನಾನು ಸ್ಥಿಮಿತ ಕಳೆದುಕೊಳ್ಳುತ್ತೇನೆ. ನಾನೇನು ಮಾತಾಡುತ್ತೇನೆ? ಯಾರಿಗೆ ಮಾತಾಡುತ್ತೇನೆ? ಆದರ ಪರಿಣಾಮವೇನು? ನನಗಿರುವುದಿಲ್ಲ. ಇದೊಂದೇ ನನ್ನ ಸಮಸ್ಯೆ. ಅದಕ್ಕೆಂದೇ ನನ್ನ ಕುಟುಂಬದವರು ನಿಮ್ಮ ಬಳಿ ನನ್ನನ್ನು ಕಳಿಸಿದ್ದಾರೆ. ನಿಮ್ಮ ಬಳಿ ನಾನಾಗಿಯೇ ಬಂದಿಲ್ಲ, ಮನೆಯವರ ಒತ್ತಾಯಕ್ಕೆ ಆಗಲಿ ನೋಡೋಣ ಅಂತಾ ಬಂದಿರುವೆ’ – ಹೀಗೆ ಹೇಳಿದ್ದು ಮೊನ್ನೆ ಮೊನ್ನೆಯಷ್ಟೇ ಬಂದ ಮಧ್ಯವಯಸ್ಕ ವ್ಯಕ್ತಿ.
ಕೋಪ ಮಾಡುವ ಅನಾಹುತ ಅಪಾರ. ಒಂದು ಕ್ಷಣದ ಆ ಅವೇಶಭರಿತ ಮಾತುಗಳು ಅದೆಷ್ಟೋ ಮನೆ, ಮನಸ್ಸುಗಳನ್ನು ಒಡೆದಿವೆ, ಒಡೆಯುತ್ತಿವೆ. ಕೋಪದ ಪರಿಣಾಮದ ಅರಿವು ಅದರ ಪಾಶಕ್ಕೆ ಸಿಕ್ಕ ವ್ಯಕ್ತಿಗೆ ಇರುವುದಿಲ್ಲ. ಆದರೆ ಆತ ಕೋಪ ಇಳಿದ ನಂತರ ಪಡುವ ಪಶ್ಚಾತ್ತಾಪ ರೈಲು ಹೋದ ನಂತರ, ಟಿಕೆಟ್ ಪಡೆದಂತೆ ಅಷ್ಟೇ. ನನ್ನ ಬಳಿ ಬಂದ ಈ ವ್ಯಕ್ತಿಯ ಸ್ಥಿತಿಯೂ ಅದೇ. ಸಣ್ಣ ಸಣ್ಣ ಮಾತುಗಳಿಗೆ ಸಿಟ್ಟು, ಅಂದುಕೊಂಡದ್ದು ಆಗದಿದ್ದರೆ, ಅವರ ಯಾರೂ ಕಳದಿದ್ದರೆ, ಇಲ್ಲವೆ ಅವರು ಕೆಳದಿರುವುದಕ್ಕಿರುವ ಕಾರಣ ಕಳುವ ವ್ಯವಧಾನ ಕೂಡ ಆತನಲ್ಲಿಲ್ಲ. ಯಾವಾಗ ಮನೆ ಬಿಟ್ಟು ಹೊರಗೆ ಕೆಲಸಕ್ಕೆ ಹೋಗುತ್ತಾನೋ ಎಂದು ಮನೆ ಮಂದಿ ಕಾದು ಕುಳಿತುಕೊಳ್ಳುವ ಸ್ಥಿತಿ ಈತನ ಮನೆಯಲ್ಲಿ ಎದುರಾಗಿದೆ. ಇಲ್ಲವೇ ಏನಾದರೂ ವಿಷಯ ಹೇಳೋಣ ಎಂದರೂ ಹತ್ತು ಬಾರಿ ವಿಚಾರ ಮಾಡಿ ಪ್ರಸ್ತಾಪ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕ್ಷುಲ್ಲಕ ವಿಚಾರಗಳಿಗೆ ದಿಢೀರನೆ ಸಿಟ್ಟಿಗೇಳುವುದು ಈತನ ಸಾಮಾನ್ಯ ಲಕ್ಷಣ.
ಏನಿದು ಕೋಪ?: ಕೋಪ ಒಂದು ಭಾವನಾತ್ಮಕ ವಿಚಾರ. ಪ್ರತಿ ಮನುಷ್ಯನಿಗೂ ಒಂದಲ್ಲ ಒಂದು ಸಂದರ್ಭಗಳಲ್ಲಿ ಹಲವು ಕಾರಣಗಳಿಗೆ ಕೋಪ ಬರುತ್ತದೆ. ಕೋಪವು ಒಬ್ಬ ವ್ಯಕ್ತಿಯು ಆತಂಕದಲ್ಲಿ ಅಥವಾ ಒತ್ತಡದಲ್ಲಿದ್ದಾಗ ಉಂಟಾಗುವ ಭಾವನೆಯಾಗಿದೆ. ಕೋಪದಿಂದ ಉಂಟಾಗುವ ನಷ್ಟಗಳು ಹಲವಾರು. ಇದರಿಂದ ನೀವು ನಿಮ್ಮ ಸುಂದರ ಬಾಂಧವ್ಯಗಳನ್ನು ಕಳೆದುಕೊಳ್ಳಬಹುದು. ಅತಿಯಾದ ಪ ನಿಮ್ಮ ಆರೋಗ್ಯವನ್ನು ಕೂಡ ತಿಂದುಹಾಕುತ್ತದೆ. ಕೋಪದಿಂದ ದೇಹಕ್ಕೆ ಹಲವು ದುಷ್ಪರಿಣಾಮಗಳು ಇವೆ. ಕೋಪ ಬರುವುದು ಪ್ರತಿ ಮನುಷ್ಯನಿಗೂ ನೈಸರ್ಗಿಕವಾದ ಪ್ರಕ್ರಿಯೆಯಾಗಿದೆ. ಅದು ಬಂದಾಗ ದೇಹದ ಒಳಗೆ ಇಟ್ಟುಕೊಂಡು ಕೊರಗುವುದಕ್ಕಿಂತ ಅದನ್ನು ದೇಹದಿಂದ ಹೊರಕ್ಕೆ ಹಾಕುವುದು ಒಳ್ಳೆಯದು ಎಂಬ ಮಾತೇನೋ ನಿಜ, ಆದರೆ ಕೋಪವೇ ಬರದಂತೆ ಅಭ್ಯಾಸ ಮಾಡಿಕೊಳ್ಳುವುದು ಇನ್ನೂ ಉತ್ತಮ.
ಯಾಕೆ ಹೀಗಾಗುತ್ತದೆ?: ನಾವು ಅಂದುಕೊಂಡಂತೆ ಆಗದಿದ್ದಾಗ, ಜತೆಗಿರುವವರು ಸ್ಪಂದಿಸದಿದ್ದಾಗ, ಎಲ್ಲವೂ ನಾನು ಹೇಳಿದ ಹಾಗೆಯೇ ನಡೆಯಬೇಕು ಎಂದು ಅಂದುಕೊಳ್ಳುವುದರಿಂದ, ಹೇಳಿದ್ದನ್ನು ಯಾರಾದರೂ ಆಗಲ್ಲ ಎಂದು ಉತ್ತರಿಸಿದಾಗ ಮನಸ್ಸು ಕೆರಳುತ್ತದೆ. ಇನ್ನು ಕೆಲವೊಮ್ಮೆ ಮನಸ್ಸಿಗೆ ಘಾಸಿಯಾ ದಾಗ, ಆ ಮೇಃಖ ಅಥವಾ ಭಾವನ ಹೊರಹಾಕಬೇಕು ಎನಿಸಿದಾಗ ಬರುತ್ತದೆ. ಹಾಗೆಂದು ಎಲ್ಲರೂ ಕೋಪಗೊಳ್ಳಲು ಒಂದೇ ಕಾರಣ ವಿರುವುದಿಲ್ಲ. ಕಾರಣಗಳು ಭಿನ್ನವಾಗಿರಬಹುದು, ಕೆಲವರಿಗೆ ಕೌಟುಂಬಿಕ ಸಮಸ್ಯೆ, ಹಣಕಾಸಿನ ಸಮಸ್ಯೆ, ಕೆಲಸ ಅಥವಾ ಪ್ರಣಯ ಸಂಬಂಧೀ ಒತ್ತಡದಿಂದ ಬರಬಹುದು. ಸದಾ ಕಿರಿಕಿರಿ ಯಿಂದ ಕೂಡಿರುವುದು, ಹತಾಶೆಯ ಭಾವನೆ, ಸದಾ ನಕಾರಾತ್ಮಕ ಭಾವನೆಯಿಂದ ತುಂಬಿರುವುದು, ಮಧುಮೆ, ಅಧಿಕ ರಕ್ತದೊತ್ತಡ, ಹೃದಯ ಬಡಿತ ಮತ್ತು ಮೈಯಲ್ಲಿ ಜುಮ್ಮೆನಿಸುವ ಸಂವೇದನೆಗಳು ಇತ್ಯಾದಿ ಕೋಪದ ಪ್ರಮುಖ ಲಕ್ಷಣಗಳಾಗಿವೆ.
ಪರಿಹಾರವೇನು?: ಅತಿಯಾಗಿ ಕೋಪಕ್ಕೊಳಗಾಗುವ ವ್ಯಕ್ತಿಗೆ ಅದರ ಪರಿಣಾಮದ ಅರಿವು ಇರಬೇಕು. ಕುಟುಂಬ ಸದಸ್ಯರೊಡನೆ ಸುಮಧುರ ಸಂಬಂಧ ಕಳೆದುಕೊಳ್ಳುವುದರ ಬಗ್ಗೆ ಎಚ್ಚರಿಕೆ ಇರಬೇಕು. ಆ ಒಂದು ಕ್ಷಣ ತಪ್ಪಿಸುವ ಬಗ್ಗೆ ಸಮಾಧಾನದಿಂದ ಯೋಚಿಸಬೇಕು. ಸಿಟ್ಟು ಬರಲಿದೆ ಎಂದೆನಿಸಿದಾಗ ಆ ಕ್ಷಣದಲ್ಲಿ ಚಿತ್ರ ಬದಲಾಯಿಸಬೇಕು. ತನಗಿಷ್ಟವಾದ ಸಂಗೀತ ಅಥವಾ ಹವ್ಯಾಸಗಳತ್ತ ಲಕ್ಷ್ಯ ಹರಿಸಬೇಕು. ಮಾತ ನಾಡುವ ಮೊದಲು ಯೋಚಿಸಿ ಮಾತನಾಡುವುದು, ಕೋಪ ಬಂದಾಗ ಧ್ಯಾನದ ಮೊರೆಹೋಗುವುದು, ದಿನನಿತ್ಯ ವ್ಯಾಯಾಮ ಮಾಡುವುದು, ಮಾನಸಿಕ ತಜ್ಞರನ್ನು ಭೇಟಿ ಮಾಡುವುದು, ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳು ವುದು, ಸಮಸ್ಯೆಗೆ ಪರಿಹಾರ ಹುಡುಕಲು ಯೋಚಿಸುವುದು ಪ್ರಮುಖ ಪರಿಹಾರೋಪಾಯಗಳಾಗಿವೆ.