COVID-19 Resources for Mental Health Coaches... Learn More

0836-2773878

“ನಿಖರ ಗುರಿ ನಿರ್ದಿಷ್ಟ ಮಾರ್ಗ ಯಶಸ್ಸಿಗೆ ಮಾನದಂಡ”

ಗುಣಕ್ಕೆ ಮತ್ಸರ ಇರಬಾರದು. ಪ್ರತಿ ವ್ಯಕ್ತಿಯ ಸದ್ಗುಣಗಳ ಬಗ್ಗೆ, ವಿಶೇಷತೆಗಳ ಬಗ್ಗೆ ಗೌರವ ಮತ್ತು ಅಭಿಮಾನವಿರಬೇಕು. ಸುಖಾ ಸುಮ್ಮನೆ ಅಭಿಮಾನ, ಮೆಚ್ಚುಗೆ, ವ್ಯಕ್ತಿ ಪೂಜೆ ಸರ್ವಥಾ ತಪ್ಪು. ಪ್ರತಿಯೊಬ್ಬನಲ್ಲಿಯೂ ಲೋಪ, ದೋಷಗಳು ಇದ್ದೇ ಇರುತ್ತವೆ. ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಸುಮ್ಮನೆ ನಮಗೆ ಇಷ್ಟ ಎಂದುಕೊಂಡು ಎಲ್ಲದಕ್ಕೂ ಮೆಚ್ಚುಗೆ ವ್ಯಕ್ತಪಡಿಸುವುದು ಸರಿಯಲ್ಲ. ಪ್ರತಿ ವ್ಯಕ್ತಿಗೂ ಇತಿಮಿತಿಗಳಿರುತ್ತವೆ. ಎಲ್ಲರೂ ಎಲ್ಲವನ್ನೂ ಪಡೆಯಲು ಆಗುವುದಿಲ್ಲ. ಎಲ್ಲರೂ ಎಲ್ಲರಂತೆ ಆಗಲೂ ಸಾಧ್ಯವಿಲ್ಲ. ಈ ವಾಸ್ತವ ಅರಿತು ಜೀವನ ಸಾಗಿಸಬೇಕು. ನಮ್ಮ ನಡೆ ನುಡಿ ನಮಗೆ ಆದರ್ಶವಾಗಬೇಕು.

ಆದರೆ ಅದರಲ್ಲಿ ಸಮಷ್ಟಿಹಿತವಿರಬೇಕು. ಸ್ವಸ್ಥ ಸಮಾಜದ ಚಿಂತನೆ ಇರಬೇಕು. ಆದರೆ ಬದಲಾದ ಸನ್ನಿವೇಶದಲ್ಲಿ ಇಂದು ಹುಚ್ಚು ಅಭಿಮಾನವನ್ನು ನಾವು ಅನೇಕರಲ್ಲಿ ಕಾಣುತ್ತಿದ್ದೇವೆ. ಹೌದು, ಇಂದಿನ ಯುವಪೀಳಿಗೆಯ ಅಭಿರುಚಿ, ಆಯ್ಕೆ ಬದಲಾಗಿದೆ. ಈ ಹಿಂದಿದ್ದ ಮೌಲ್ಯಗಳು ಮರೆಯಾಗಿವೆ. ದುಡ್ಡು, ಆಸ್ತಿ, ಅಂತಸ್ತು, ಭೋಗ ಸಂಸ್ಕೃತಿ ಸರಿ ಎನಿಸಲಾರಂಭಿಸಿದೆ. ಪಾಶ್ಚಾತ್ಯರ ಅನುಕರಣೆ ನಿರಂತರವಾಗಿ ಸಾಗುತ್ತಿದೆ. ಗುರು ಹಿರಿಯರು ಎನ್ನುವ ಗೌರವ ಕ್ಷೀಣಿಸಿದೆ. ಇಡೀ ವಿಶ್ವದಲ್ಲೇ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರವಾಗಿದ್ದ ನಮ್ಮ ಸಂಪ್ರದಾಯ, ಆಚಾರ ವಿಚಾರಗಳು ನಮ್ಮ ಯುವಕರಿಂದಲೇ ಕಡೆಗಣನೆ ಆಗುತ್ತಿವೆ. ಪರಿಣಾಮ ನಮ್ಮ ಸಂಸ್ಕೃತಿ, ಸಂಸ್ಕಾರಕ್ಕೆ ಧಕ್ಕೆ ಆಗುತ್ತಿದೆ. ಸಿನಿಮಾ ನಟರ ಜೀವನಶೈಲಿ ನೋಡಿ ನಾನೂ ಅವರಂತೆ ಆಗಬೇಕು ಎನ್ನುವ ಹುಚ್ಚು ಯುವಕರನ್ನು ದಾರಿ ತಪ್ಪಿಸಿದೆ. ಇಂತಹ ಭ್ರಮೆಗಳಿಂದಲೇ ಹೆತ್ತವರಿಂದ, ಸ್ನೇಹಿತರಿಂದ ದೂರವಾಗಿ ಸಮಾಜಘಾತುಕ ಶಕ್ತಿಗಳಾಗಿ ಹೊರಹೊಮ್ಮುತ್ತಿದ್ದಾರೆ. ಕಷ್ಟ ಪಟ್ಟು ದುಡಿಮೆ ಮಾಡದೇ ದಿಢೀರ್ ಶ್ರೀಮಂತರಾಗಬೇಕೆನ್ನುವ ಹಂಬಲಹಾಗೂ ಡಾನ್‌ ಆಗಬೇಕೆನ್ನುವ ಗುರಿ ಇವರನ್ನು ದಾರಿ ತಪ್ಪಿಸಿದೆ. ಇಂತಹ ಪಿತ್ತ ನೆತ್ತಿಗೇರಿದಾಗ ಯಾರ ಕಿವಿಮಾತೂ ಸರಿ ಎನಿಸುವುದಿಲ್ಲ. ತಾವು ಅನುಸರಿಸಿದ ಈ ಮಾರ್ಗ ಕ್ರಮೇಣ ಕಾರ್ಯಸಾಧುವಲ್ಲ ಎಂಬದರ ಅರಿವಾಗುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ. ಆಗ ಪರಿತಪಿಸಿ ಏನೂ ಪ್ರಯೋಜನವಿಲ್ಲ. ನನ್ನ ಕಡೆ ಅನೇಕ ಯುವಕರು, ಮಧ್ಯವಯಸ್ಕರು ಬರುತ್ತಾರೆ. ‘ಮನಸ್ಸಿಗೆ ನೆಮ್ಮದಿ ಇಲ್ಲ ಸಾರ್. ಜೀವನದಲ್ಲಿ ನಾನು ಅಂದುಕೊಂಡಿದ್ದು ಒಂದು ಆಗಿದ್ದು ಇನ್ನೊಂದು. ಖಿನ್ನತೆ ಆವರಿಸಿದೆ. ಜೀವನವೇ ಬೇಡವೆನಿಸತೊಡಗಿದೆ. ತುಂಬಾ ರಿಸ್ಕ್ ತಗೊಂಡು ಅನೇಕ ದಾರಿ ಹುಡುಕಿದೆ. ಎಲ್ಲವೂ ಕೈ ಕೊಟ್ಟವು. ಮುಂದೇನು ಎನ್ನುವ ಚಿಂತೆಯ ಚಿತೆ ಕಾಡಲಾರಂಭಿಸಿದೆ’ ಎಂದೆಲ್ಲಾ ಗೋಳು. ತೋಡಿಕೊಳ್ಳುತ್ತಾರೆ. ನೀವೇನು ಮಾಡುತ್ತಿದ್ದೀರಿ? ಏನು ಓದಿರುವಿರಿ? ಎಂದೆಲ್ಲಾ ಕೇಳಿದಾಗ ಬರುವ ಉತ್ತರ ಓದಿಗೂ ಮಾಡುವ ಉದ್ಯೋಗ ಅಥವಾ ವ್ಯವಹಾರಕ್ಕೂ ಸಂಬಂಧವೇ ಇಲ್ಲ ಎನ್ನುವುದೇ ಆಗಿರುತ್ತದೆ. ಆದರೆ ಅವರು ಯಾವುದೇ ವೃತ್ತಿ ಮಾಡಿದರೂ ಅದಕ್ಕೆ ಅವರು ಹಾಕಿದ ಶ್ರಮ, ಅನುಸರಿಸಿದ ಕ್ರಮಗಳ ಬಗ್ಗೆ ಕೇಳಿದರೆ ಗೊಂದಲಮಯ ಉತ್ತರ ಸಿಗುತ್ತದೆ. ತಮಗೆ Hubli Edition Jun 26, 2024 Page No. 8 Powered by: erelego.com ಒಂದು ನಿರ್ದಿಷ್ಟ ಗುರಿ ಇರುವುದಿಲ್ಲ. ಬಂದದ್ದು ಬಂದಂತೆ ಎದುರಿಸುತ್ತಾ ಸಾಗಬೇಕು ಅಷ್ಟೇ. ಹೀಗಾದರೆ ಅದು ಜೀವನ ಎಂದೇ ಕರೆಸಿಕೊಳ್ಳುವುದಿಲ್ಲ. ದಿನಕಳೆಯುವುದು ಎಂದು ಕರೆಯಲಾಗುತ್ತದೆ. ಬದುಕು ಹೀಗಾದಾಗ ಬೇಸರ, ಖಿನ್ನತೆ ಮೂಡುವುದು ಸಹಜ. ವಿದ್ಯಾರ್ಥಿ ಹಂತದಲ್ಲಿ ಮನಸ್ಸಿಟ್ಟು ಓದಬೇಕು. ಹೆತ್ತವರ ಆಶಯ ಈಡೇರಿಸಬೇಕು. ಒಳ್ಳೆಯ ಗುರಿಯೊಂದಿಗೆ ದುಡಿಮೆ ಆರಂಭಿಸಿ ಸಮಚಿತ್ತ ಮತ್ತು ಸಮಭಾವದ ಜೀವನ ಸಾಗಿಸಬೇಕು. ಇದು ಬದುಕಿನ ಯಶಸ್ಸಿನ ಪ್ರಮುಖ ಸೂತ್ರಗಳಲ್ಲಿ ಒಂದು. ಅದು ಬಿಟ್ಟು ಇಲ್ಲಸಲ್ಲದ ಆಕರ್ಷಣೆಗೆ ಒಳಗಾಗಿ ನಿಗದಿತ ಗುರಿಯನ್ನೂ ಸಾಧಿಸಲಾಗದೆ ಕೈ ಸುಟ್ಟುಕೊಂಡು ಎಲ್ಲರಿಗೂಭಾರವಾಗಿ ಸಮಾಜದ ದೃಷ್ಟಿಯಲ್ಲಿ ಕೀಳಾಗಿ ಕಾಣಿಸಿಕೊಳ್ಳುವುದು ನೂರಕ್ಕೆ ನೂರರಷ್ಟು ಸತ್ಯ. ನಮಗೆ ನಮ್ಮದೇ ಆದ ಗುರಿ ಇರಬೇಕು ಮತ್ತು ಅದಕ್ಕೆ ಪೂರಕವಾದ ಯಶಸ್ಸಿನ ಮೆಟ್ಟಿಲುಗಳನ್ನು ಕಟ್ಟಿಕೊಳ್ಳಬೇಕು. ನಮ್ಮ ಕೌಟುಂಬಿಕ ಹಿನ್ನೆಲೆ, ಬೆಳೆದು ಬಂದ ಪರಿಸರ, ನಮ್ಮ ಅಭಿರುಚಿ ಎಲ್ಲವನ್ನೂ ಪರಿಗಣಿಸಿ ಒಂದಿಷ್ಟು ಮಾನದಂಡ ನಿಗದಿಪಡಿಸಿಕೊಳ್ಳಬೇಕು. ಈ ಮಾನದಂಡಗಳು ಸರಳ ಹಾಗೂ ಸಮರ್ಪಕವಾಗಿರಬೇಕು. ಶ್ರಮವಿಲ್ಲದ ವಾಮಮಾರ್ಗಗಳ ಅನುಕರಣೆ ಸಲ್ಲದು. ಸತತ ಪರಿಶ್ರಮ ಹಾಗೂ ದೂರದೃಷ್ಟಿ, ಪ್ರಾಮಾಣಿಕತೆ ಎಂಬ ಅಂಶಗಳನ್ನೊಳಗೊಂಡ ಮಾನದಂಡಗಳು ಖಂಡಿತವಾಗಿಯೂ ಯಶಸ್ಸು ಮತ್ತು ಗೆಲುವಿನ ದಡ ಸೇರಿಸಬಲ್ಲವು. ಅದು ಬಿಟ್ಟು ಯಾರನ್ನೋ ರೋಲ್ ಮಾಡೆಲ್‌ ಅಥವಾ ಆದರ್ಶಪ್ರಾಯರನ್ನಾಗಿಸಿಕೊಂಡು ಗುರಿ ಸಾಧಿಸಲಾಗದೇ ಗಂಡಾಂತರ ಮೈ ಮೇಲೆ ಎಳೆದುಕೊಳ್ಳಬಾರದು. ಇದನ್ನರಿತು ಬಾಳುವುದು ವೈಯಕ್ತಿಕವಾಗಿ ಎಲ್ಲ ವ್ಯಕ್ತಿಗೂ ಒಳಿತು ಹೆತ್ತವರಿಗೂ ಹೆಮ್ಮೆಯ ವಿಚಾರ.

About Author:

Leave Your Comments

Your email address will not be published. Required fields are marked *