COVID-19 Resources for Mental Health Coaches... Learn More

0836-2773878

ದುಶ್ಚಟ ಅಪರಾಧ ಕೃತ್ಯಕ್ಕೆ ಕಾರಣ.

ದುಶ್ಚಟ ಅಪರಾಧ ಕೃತ್ಯಕ್ಕೆ ಕಾರಣ.

ಧಾರವಾಡ: ವ್ಯಸನಮುಕ್ತ ಸಮಾಜದಿಂದ ಅಪರಾಧರಹಿತ ವಾತಾವರಣ ನಿರ್ಮಾಣ ಸಾಧ್ಯ ಎಂದು ಮನೋರೋಗ ತಜ್ಞ ಡಾ.ಆದಿತ್ಯ ಪಾಂಡುರಂಗಿ ಅಭಿಪ್ರಾಯಪಟ್ಟರು. ಗುರುವಾರ ರೋಟರಿ ಕ್ಲಬ್ ಧಾರವಾಡ ಮಿಡ್‌ಟೌನ್ ವತಿ ಯಿಂದ ನಗರದ ಕೇಂದ್ರಕಾರಾಗೃಹ ದಲ್ಲಿ ಕೈದಿಗಳ ಮನೋಪರಿ ವರ್ತನೆಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಅವರು ಭಾರತದಲ್ಲಿ ಇತ್ತೀಚೆಗೆ ನಡೆದ ಮಾನಸಿಕ ಆರೋಗ್ಯ ಕುರಿತ ಸಮೀಕ್ಷೆಯಲ್ಲಿ ದುಶ್ಚಟಗಳಿಂದ ಅಪರಾಧಗಳು ಜರುಗುತ್ತವೆ ಎಂಬುದು ಕಂಡುಬಂದಿದೆ. ಯುವಕರಲ್ಲಿನ ದುಶ್ಚಟಗಳು ಅಪರಾಧ ಕೃತ್ಯಕ್ಕೆ ಕಾರಣಗಳು. ಇನ್ನೊಬ್ಬರ ತಪ್ಪುಗಳಿಂದ ನಾವು ಪಾಠ ಕಲಿಯಬೇಕು. ಈ ಮೂಲಕ ಮುಂಜಾಗ್ರತೆಯಿಂದ ಕಾನೂನು ಉಲ್ಲಂಘಿಸಿ ಬಂಧನಕ್ಕೊಳಗಾ ಗುವ ಪರಿಸ್ಥಿತಿಯಿಂದ ಪಾರಾ ಗಬಹುದು. ಆಕಸ್ಮಿಕವಾಗಿ ಕಾರಾ ಗೃಹದಲ್ಲಿ ಬಂಧಿಯಾಗಿದ್ದರೆ, ಮಾನಸಿಕವಾಗಿ ಪರಿವರ್ತನೆ ಹೊಂದಿ ಉತ್ತಮ ಬದುಕು ರೂಪಿಸಿಕೊಳ್ಳಲು ಆಸಕ್ತಿ ತೋರಿಸಿ ಎಂದರು.

ಹಿರಿಯ ಹೃದಯರೋಗ ತಜ್ಞ ಡಾ.ಪ್ರಕಾಶ ರಾಮನಗೌಡ್ರ ಮಾತ ಈ ನಾಡಿ, ಮಾನಸಿಕ ಸ್ವಾಸ್ಥ್ಯದ ಜೊತೆ ಶಾರೀರಿಕ ಸ್ವಾಸ್ಥ್ಯದ ಕಡೆಗೂ ದ ಗಮನಹರಿಸಬೇಕು. ಆರೋಗ್ಯ ದೆ ವಂತ ಸದೃಢತೆಯಿಂದ ಮಾನಸಿಕ *. ನೆಮ್ಮದಿ ಲಭಿಸಲಿದೆ. ಈ ನಿಟ್ಟಿನಲ್ಲಿ ಗೆ – ದೈಹಿಕವಾಗಿಯೂ ಆರೋಗ್ಯ ಪ ವಂತರಾಗಲು ಅಗತ್ಯ ಕಾಳಜಿ ವಹಿಸಿ ಎಂದು ಕೈದಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆವಹಿಸಿದ್ದ ಕಾರಾಗೃಹದ ಅಧೀಕ್ಷಕ ಎಂ.ಎ.ಮರಿಗೌಡ ಮಾತನಾಡಿ, ಕಾರಾಗೃಹದಲ್ಲಿ – ಕೈದಿಗಳ ಮನಪರಿವರ್ತನೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೈದಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಪ್ರಯತ್ನ ಎ ಮಾಡಲಾಗುತ್ತಿದೆ. ಜೊತೆಗೆ * ಸಂಘ-ಸಂಸ್ಥೆಗಳ ನೆರವು ಕೂಡ ಪಡೆಯಲಾಗುತ್ತಿದೆ. ಕೈದಿಗಳ ಮನಪರಿವರ್ತನೆಗೆ ಕಾರ್ಯಕ್ರಮ ಆಯೋಜಿಸಿರುವ ರೋಟರಿ ಕ್ಲಬ್ ಧಾರವಾಡ ಮಿಡ್‌ಟೌನ್ ಪದಾಧಿಕಾರಿಗಳಿಗೆ ಮರಿಗೌಡ ಕೃತಜ್ಞತೆ ಸಲ್ಲಿಸಿದರು.

ಸಹಾಯಕ ಅಧೀಕ್ಷಕ ಎಸ್‌.ಡಿ. ಗಲ್ಲೆ, ರೋಟರಿ ಕ್ಲಬ್ ಧಾರವಾಡ ಮಿಡ್‌ಟೌನ್‌ನ ಕಾರ್ಯದರ್ಶಿ ಆಕಳವಾಡಿ ವೇದಿಕೆಯಲ್ಲಿದ್ದರು.ದೀಪಕ ಜ್ಯೋತಿ ರಾವ್ ಪ್ರಾರ್ಥಿಸಿದರು. ರೋಟರಿ ಕ್ಲಬ್ ಧಾರವಾಡ ಮಿಡ್‌ಟೌನ್‌ ಅಧ್ಯಕ್ಷ ಶಿವಯೋಗಿ ಅಮಿನಗಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಬಿ.ಕುರಬೆಟ್ಟ ನಿರೂಪಿಸಿ, ವಂದಿಸಿದರು.ರೋಟರಿ ಕ್ಲಬ್ ಧಾರವಾಡ ಮಿಡ್‌ಟೌನ್‌ ಸದಸ್ಯರು, ಕಾರಾಗೃಹ ಸಿಬ್ಬಂದಿ ಮತ್ತು ಕೈದಿಗಳು ಇದ್ದರು.

About Author:

Leave Your Comments

Your email address will not be published. Required fields are marked *