COVID-19 Resources for Mental Health Coaches... Learn More

0836-2773878

“ಡಾ. ಎಂ.ಬಿ. ದಿಲ್‌ಶಾದ್ ರವರ 71 ನೇ ಹುಟ್ಟು ಹಬ್ಬದ ಪ್ರಯುಕ್ತ “ಶಿಕ್ಷಣ ಮತ್ತು ಶಿಕ್ಷಕ” ಉಪನ್ಯಾಸ, ಗುರುವಂದನಾ, ಸನ್ಮಾನ ಸಮಾರಂಭ”ಧಾರವಾಡ | ಅಂಗಿ-ಪ್ಯಾಂಟ್ ಹರಿದರು ಕೈಯಲ್ಲಿ ಪುಸ್ತಕ ಇರಬೇಕು: ಡಾ. ಆನಂದ್ ಪಾಂಡುರಂಗಿ

ಡಾ. ಎಂ. ಬಿ. ದಿಲ್‌ಶಾದ್ ಶಿಕ್ಷಣ ಮತ್ತು ಸೇವಾ ಸಮಿತಿ (ರಿ) ಧಾರವಾಡ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನ, ಧಾರವಾಡ DHARWAD ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಾ. ಎಂ.ಬಿ. ದಿಲ್‌ಶಾದ್ ರವರ 71 ನೇ ಹುಟ್ಟು ಹಬ್ಬದ ಪ್ರಯುಕ್ತ “ಶಿಕ್ಷಣ ಮತ್ತು ಶಿಕ್ಷಕ” ಉಪನ್ಯಾಸ, ಗುರುವಂದನಾ, ಸನ್ಮಾನ ಸಮಾರಂಭ go: 03-01-2024 39 : . 10.30 ಸ್ಥಳ: ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನ, ಧಾರವಾಡ ಅಧ್ಯಕ್ಷತೆ : ಅಲ್‌ಹಾಜ ರೆಹಮಾನಸಾಬ. ಮ. ದರಗದ ಮಾಲಕರು: ಇಂಡಸ್ಟ್ರೀಯಲ್ ಪೋಟಿಷನ್ ಪೋರ್ಸ / ಧಾರವಾಡ ಉದ್ಘಾಟನೆ : ಡಾ. ಆನಂದ ಪಾಂಡುರಂಗಿ ಖ್ಯಾತ ಮನೋರೋಗ ತಜ್ಞರು, ಧಾರವಾಡ ಗೌರವಾನ್ವಿತ ಡಾ. ಪ್ರೊ. ಎಂ. ಕೆ. ರಬಿನಾಳ ಸಂಶೋಧನಾ ಮಾರ್ಗದರ್ಶಕರು ಅತಿಥಿಗಳು : ಭೌತಶಾಸ್ತ್ರ ಅಧ್ಯಯನ ವಿಭಾಗ ಕ.ವಿ.ವಿ.ಧಾರವಾಡ ಶ್ರೀ ಎಂ. ಎಂ. ಖಾಜಿ ನಿವೃತ್ತ ಅಪರ ನಿರ್ದೇಶಕರು, ರೇಷ್ಮೆ ಇಲಾಖೆ, ಬೆಂಗಳೂರು. ಶ್ರೀ ಸದಾಶಿವ ಮಿರ್ಜಿ ನಿವೃತ್ತ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಧಾರವಾಡ ಉಪನ್ಯಾಸ : ಡಾ. ಪ್ರಕಾಶ ಎಸ್. ಸಿದ್ದಕ್ಕನವರ ಶ್ರೀ ಜಿ. ಡಿ. ಶಿಂಧೆ ನಿವೃತ್ತ ಕ್ರೀಡಾ ಅಧಿಕಾರಿ KPTCL ರಾಯಚೂರು ಪ್ರಾಚಾರ್ಯರು ವನಿತಾ ಡಿ. ಎಡ್. ಕಾಲೇಜ ಧಾರವಾಡ ಗೌರವ ಪುರಸ್ಕಾರ ಡಾ. ಜ್ಯೋತಿ ದೊಡ್ಡಮನಿ ಭೌತಶಾಸ್ತ್ರ ಸಹಪ್ರಾಧ್ಯಾಪಕರು ಕೆ.ಸಿ.ಡಿ.ಧಾರವಾಡ ಡಾ. ಅಪ್ರೋಜ ಕಾಠೇವಾಡ ನಿವೃತ್ತ ಇಂಗ್ಲೀಷ್ ಪ್ರ. ಶಿಕ್ಷಕರು, ಡಯಟ, ಧಾರವಾಡ ಡಾ. ಪ್ರಕಾಶ ಎಸ್. ಸಿದ್ದಕ್ಕನವರ ಪ್ರಾಚಾರ್ಯರು, ವನಿತಾ ಡಿ. ಎಡ್. ಕಾಲೇಜ ಧಾರವಾಡ ಡಾ. ಖಲೀಲ ಅಹ್ಮದ್.ಜೆ. ದಿಲ್ ಶಾದ್ ಭೌತಶಾಸ್ತ್ರ ಸಹಪ್ರಾಧ್ಯಾಪಕರು, ಸಿಕ್ಯಾಬ್ ಇಂ. ಕಾಲೇಜು, ವಿಜಯಪುರ ಡಾ. ಸ್ಮಿತಾ ನಾಯಕ ಭೌತಶಾಸ್ತ್ರ ಸಹಪ್ರಾಧ್ಯಾಪಕರು, ಬೆಂಗಳೂರು ಗುರುವಂದನೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಶ್ರೀ ಎ.ವಾಯ್. ದೇಸಾಯಿ ಶ್ರೀಮತಿ ಜೆ. ಕೆ. ಸಾಂಬ್ರಾಣಿ ಶ್ರೀ ಬಿ. ಜಿ. ಬಾರ್ಕಿ ಶ್ರೀ ಎಸ್. ಕೆ. ಗಂಗಣ್ಣವರ ಶ್ರೀ ಕೆ. ಎಚ್. ನಾಯಕ ಶ್ರೀಮತಿ ಬಿ. ಶಕುಂತಲಾ ಶ್ರೀಮತಿ ಬಿ. ಶೀತಮ್ಮ ಶ್ರೀಮತಿ ಎಸ್. ಎ. ಚನ್ನವೀರಗೌಡರ ತಮಗೆಲ್ಲ ಆದರದ ಸ್ವಾಗತ ಬಯಸುವವರು ಮಹ್ಮದ ರಫೀ ದಿಲ್‌ಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಾಲ್ವೇಕರ ಶ್ರೀಮತಿ ಎಸ್. ಡಿ. ರೊಟ್ಟಿ ಜೆ. ಬಿ. ದಿಲ್‌ ಷಾದ ಅಧ್ಯಕ್ಷರು.

ಸಾಮಾನ್ಯವಾಗಿ ಜನರು ತುಂಬಾ ಬಿಜಿ ಸಮಯವೇ ಸಿಗುವುದಿಲ್ಲ ಅನ್ನುತ್ತಾರೆ. ಸಮಯವಿರುವುದು ಎಲ್ಲರಿಗೂ ಒಂದೇ. ಸಾಧಕರಿಗೆ ಹೆಚ್ಚು, ಸಾಮಾನ್ಯರಿಗೆ ಕಡಿಮೆ ಸಮಯವನ್ನು ಸೃಷ್ಟಿ ನೀಡಿಲ್ಲ. ಇದ್ದ ಸಮಯವನ್ನು ಸರಿಯಾಗಿ ಸದು ಉಪಯೋಗ ಪಡಿಸಿಕೊಳ್ಳುವ ಕ್ಷಮತೆ ಸಾಧಕರಲ್ಲಿ ಇರುತ್ತದೆ ಎಂದು ಡಾ. ಆನಂದ್ ಪಾಂಡುರಂಗಿ ಹೇಳಿದ್ದಾರೆ.

ಧಾರವಾಡದಲ್ಲಿ  ಡಾ. ಎಂ.ಬಿ ದಿಲ್ ಶಾದ್ ಶಿಕ್ಷಣ ಮತ್ತು ಸೇವಾ ಸಮಿತಿ ಆಯೋಜಿಸಿದ್ದ ಡಾ. ಎಂ.ಬಿ ದಿಲ್ ಶಾದ್ ಅವರ 71ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಡಾ. ಎಂ.ಬಿ ದಿಲ್ ಶಾದ್, ಅವರು ನಾಡಿನ ಖ್ಯಾತ ವಾಗ್ಮಿ ಹಾಗೂ ಶ್ರೇಷ್ಠ ಶಿಕ್ಷಕರಾಗಿದ್ದರು. ಸತತ ಅಧ್ಯಯನದ ಮೂಲಕ ಹೊಸತನ್ನು ನಾಡಿಗೆ ಸಮರ್ಪಿಸಬೇಕೆಂಬ ಸದಭಿರುಚಿ ಉಳ್ಳುವರಾಗಿದ್ದರು. ಸಮಯದ ಸದುಪಯೋಗ ಪಡಿಸಿಕೊಳ್ಳುವ ಕುರಿತು ಇತರರಿಗೆ ಮಾದರಿ ವ್ಯಕ್ತಿಯಾಗಿ ದುಡಿದಿದ್ದರು” ಎಂದು ತಿಳಿಸಿದರು.

“ವಿದ್ಯಾರ್ಥಿಗಳು ಅವರ ಆದರ್ಶವನ್ನು ಪಾಲಿಸಬೇಕು. ಉಡುವ ರಂಗಿನ ಪ್ಯಾಂಟು ಹರಿದಿದ್ದರೂ ಸರಿ, ಕೈಯಲ್ಲಿ ಒಂದು ಪುಸ್ತಕವಿರಬೇಕು. ಆದರೆ, ಇಂದಿನ ಯುವ ಪೀಳಿಗೆ ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಅಂಗಿ ಪ್ಯಾಂಟು ಹರಿದಿದ್ದರು ಸರಿ ಎನ್ನುತ್ತಾರೆ. ವಿದ್ಯಾರ್ಥಿಗಳ ಜೀವನ ಬಹಳ ಅಮೂಲ್ಯವಾದದ್ದು. ಸಮಯವನ್ನು ಹಾಳು ಮಾಡಿಕೊಳ್ಳಬಾರದು” ಎಂದರು.

“ಅವರು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನೆಟ್ಟ ಲಕ್ಷಾಂತರ ಗಿಡ ಮರಗಳಲ್ಲಿ ಅವರ ನೆನಪುಗಳು ಇವೆ. ಸಾವಿರಾರು ಶಿಷ್ಯರನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ. ನಾಡಿನ ಸೇವೆಗಾಗಿ ಮನೆ ಮಠವನ್ನು ಮರೆತು ದುಡಿದ ಕಾಯಕ ಯೋಗಿಯಾಗಿದ್ದರು. ಅವರ ನೆನಪಿನಲ್ಲಿ ಸಂಸ್ಥೆಯನ್ನು ಕಟ್ಟಿಕೊಂಡು ಸಮಾಜಮುಖ ಕಾರ್ಯವನ್ನು ನಡೆಸಿಕೊಂಡು ಹೋಗುತ್ತಿರುವ ಅವರ ಸಹೋದರರು ಹಾಗೂ ಅವರ ಕುಟುಂಬದವರ ಕಾರ್ಯ ಪ್ರಶಂಸನೀಯ” ಎಂದರು.

ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಎನ್ ಸಿದ್ದಕ್ಕಲವರ, ಎಂ ಎಂ ಕಾಜಿ, ಜೆ ಡಿ ಶಿಂದೆ, ಡಾ ಎನ್ ಎಂ ಮಕಾಂದರ್, ಮೌಲಾನಾ ಮುಜೀಬ್, ವನಿತಾ, ಆರಿಫಾ ಎ ಶೇಕ್, ಕೆ.ಎಸ್ ಬಂಗಾರಿ, ಬರಮಗೌಡ, ಮುತ್ತಗಿ, ನಾಯಕ್, ಸೀತಮ್ಮ, ಜೆ ಕೆ ಸಾಮ್ರಾಣಿ, ಎಸ್ ಕೆ ಗಂಗಣ್ಣವರ್, ಬೀ ಶಕುಂತಲಾ, ಎಸ್ ಎ ಚನ್ನವೀರಗೌಡರ್, ಎಸ್‌ಡಿ ರೊಟ್ಟಿ, ಡಾ. ಮಹರ ಅಪ್ರೋಜ್ ಕಾಠೇವಾಡಿ, ಡಾ. ಪ್ರಕಾಶ್ ಸಿದ್ದಕ್ಕನವರ, ಡಾ. ಜ್ಯೋತಿ ದೊಡ್ಡಮನಿ ಹಾಗೂ ಡಾ. ಖಲೀಲ್ ಅಹಮದ್ ಜೆ ದಿಲ್ ಶಾದ್, ರಜಿಯಾ ಶೌಕತ ಅಲಿ ದರೂರು, ಮೊಹಮ್ಮದ್ ರಫೀಕ್ ಬಿ ದಿಲ್ ಶಾದ್, ಜರೀನಾ ಬೇಗಮ್ ಹುಂಡೆಕಾರ್, ಉಜ್ಮಾ ಆಫ್ರಿನ್ ಹಾಗೂ ಡಾ. ಏನ್ ಬಿ ನಾಲತವಾಡ ಇದ್ದರು.

About Author:

Leave Your Comments

Your email address will not be published. Required fields are marked *