COVID-19 Resources for Mental Health Coaches... Learn More
“ಡಾ. ಆನಂದ ಪಾಂಡುರಂಗಿ ಸಲಹೆ | ಗುರುದೇವ ಪಪೂ ಕಾಲೇಜ್ ವಾರ್ಷಿಕೋತ್ಸವ ಮೊಬೈಲ್ ಗೀಳಿಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳದಿರಿ.”
ಡಾ. ಆನಂದ ಪಾಂಡುರಂಗಿ ಸಲಹೆ | ಗುರುದೇವ ಪಪೂ ಕಾಲೇಜ್ ವಾರ್ಷಿಕೋತ್ಸವ ಮೊಬೈಲ್ ಗೀಳಿಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳದಿರಿ.
ಹುಬ್ಬಳ್ಳಿ ಧಾರವಾಡದ ಭಾರತಿ ನಗರದಲ್ಲಿರುವ ಗುರುದೇವ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 2022- 23ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ವಾರ್ಷಿಕೋತ್ಸವ ‘ಸ್ಪೂರ್ತಿ 2023’ ಸಮಾರಂಭ ಬುಧವಾರ ಜರುಗಿತು.
ಖ್ಯಾತ – ಮನೋಶಾಸ್ತ್ರಜ್ಞ ಡಾ. ಆನಂದ ಪಾಂಡುರಂಗಿ ಮಾತನಾಡಿ, ತಾರುಣ್ಯಾವ್ಯಸ್ಥೆಯಲ್ಲಿ ಮಕ್ಕಳಲ್ಲಿ ಬದಲಾವಣೆಗಳಾಗುತ್ತವೆ. ಮಕ್ಕಳು ಮೊಬೈಲ್ ಗೀಳಿಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳಬಾರದು. ಚಟದ ದಾಸರಾಗದ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ಕಾಲೇಜ್ ಅಧ್ಯಕ್ಷ ಅಖಿಲಕುಮಾರ ಹಲಗತ್ತಿ ಮಾತನಾಡಿ, ಜೀವನಮೌಲ್ಯಗಳ ಜತೆಗೆ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕಮತಗಿ, ಕಾಲೇಜಿನ ಆಡಳಿತಾಧಿಕಾರಿ ಎಂದು ವಿದ್ಯಾರ್ಥಿಗಳಿಗೆ ತಿಳಿವಳಿಕೆ ಸಾಜಿದ್ ಮಾತನಾಡಿದರು. ಎಸ್‌ಎಸ್ ನೀಡಿದರು. ಪ್ರಾಚಾರ್ಯ ಮದನ ಇ.ಜಿ. ಎಲ್‌ಸಿ (ಸಿಬಿಎಸ್‌ಇ) ವಿದ್ಯಾರ್ಥಿಗಳಿಗೆ ಕಾಲೇಜಿನ ವಾರ್ಷಿಕ ವರದಿ ಓದಿದರು. ನಡೆಸಿದ ಗುರುದೇವ ಪ್ರತಿಭಾನ್ವೇಷ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೊದಲ ಹತ್ತು ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ. ಬಹುಮಾನ ಮತ್ತು ಶಿಷ್ಯವೇತನ ವಿತರಿಸಲಾಯಿತು.
ವಾರ್ಷಿಕ ಕ್ರೀಡೆ, ಸಾಂಸ್ಕೃತಿಕ ಹಾಗೂ ಪತ್ಯೇತರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಬಿ.ಆರ್. ಕೀರ್ತನಕುಮಾರ, ಸೌಮ್ಯ ಯರಗಟ್ಟಿ ಅವರು ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದರು. ಪಾಲಕರು ಅನಿಸಿಕೆ ಹಂಚಿಕೊಂಡರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕರಾದ ಆಶಾರಾಣಿ ಕುಲಕರ್ಣಿ ಹಾಗೂ ಅರುಣ ಎಸ್. ನಿರೂಪಿಸಿದರು. ಉತ್ತಮಕುಮಾರ ಉಮರ್ಜಿ, ಪ್ರಿಯಾಂಕ ಸ್ವಾಗತಿಸಿದರು. ನಾಗರಾಜ ವಂದಿಸಿದರು.