COVID-19 Resources for Mental Health Coaches... Learn More
“ಜ್ಞಾನದ ದಾಹ ಇದ್ದರೆ ಯಶಸ್ಸು ಖಚಿತ”


ಮಕ್ಕಳು ಸಾಮರ್ಥ್ಯದ ಅರಿವು ಹೊಂದಿರಬೇಕು. ಜ್ಞಾನದ ದಾಹ ಇದ್ದಾಗ ಯಶಸ್ಸು ಕಾಣಲು ಸಾಧ್ಯ. ಹದಿ ಹರೆಯದ ವಯಸ್ಸಿನಲ್ಲಿ ಪ್ರತಿ ಹೆಜ್ಜೆ ಜೀವನ ರೂಪಿಸಿಕೊಳ್ಳಲು ಬಹಳ ಮುಖ್ಯ ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.
ಮಕ್ಕಳು ಸಾಮರ್ಥ್ಯದ ಅರಿವು ಹೊಂದಿರಬೇಕು. ಜ್ಞಾನದ ದಾಹ ಇದ್ದಾಗ ಯಶಸ್ಸು ಕಾಣಲು ಸಾಧ್ಯ. ಹದಿ ಹರೆಯದ ವಯಸ್ಸಿನಲ್ಲಿ ಪ್ರತಿ ಹೆಜ್ಜೆ ಜೀವನ ರೂಪಿಸಿಕೊಳ್ಳಲು ಬಹಳ ಮುಖ್ಯ ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಬಿ.ವಿ. ಸೋಮಾಪುರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕಲಿಸಿದ ಗುರು, ಸಂಸ್ಥೆ ಮತ್ತು ತಂದೆ- ತಾಯಿಗೆ ಗೌರವ ಕೊಡಬೇಕು ಎಂದರು.
ಸಂಸ್ಥೆಯ ಅಧ್ಯಕ್ಷೆ ಮಲ್ಲಮ್ಮ ಪಾಟೀಲ, ಕಾನೂನು ಕಾಲೇಜು ಪ್ರಾಚಾರ್ಯ ಸಂಜೀವ ಪಾಟೀಲ, ನಿರ್ದೇಶಕರಾದ ರಾಜೀವ ಪಾಟೀಲ, ನಂದಿನಿ ಸೋಮಾಟ್ಠರ, ಉಪನ್ಯಾಸಕರಾದ ವಿನಾಯಕ ರಗಟಿ, ಮಹೇಶ ಬಣಕಾರ, ಕಿರಣ ಮಾಂಡ್ರೆ, ಸುನಂದಾ ಮಾನೆ, ರೂಪಾ ಎಲಿಗಾರ, ಕಲ್ಪನಾ ಮದಕಟ್ಟಿ ಹಾಗೂ ವಿದ್ಯಾರ್ಥಿಗಳಿದ್ದರು.
ಎ.ಎಂ. ಶಲವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರುದ್ರಪ್ಪ ತಳವಾರ ಸ್ವಾಗತಿಸಿದರು. ನಂದಾ ಗೋಡೈ ವಂದಿಸಿದರು.


