COVID-19 Resources for Mental Health Coaches... Learn More

0836-2773878

“ಜೀವನದುದ್ದಕ್ಕೂ ಸೇವೆ ನೀಡುವ ವೈದ್ಯರು”

ದೇವರು ಬಂದಂಗ ಬಂದ್ರ ನೋಡಿ ಆ ವ್ಯಕ್ತಿ ಅವರಿಂದಲೇ ಇಂದು ನಮ್ಮ ಮಗ ಬದುಕಿದ ನಮ್ಮ ಕುಟುಂಬದ ಬೆಳಕು ಮತ್ತೆ ಬೆಳಗಿತು. ನಮ್ಮ ಕಣ್ಣೆದುರಿನ ದೇವರು ಅಂದರೆ ಅವರೇ ನೋಡಿ ಸರ್..’ ಎಂದು ಕುಟುಂಬದ ಸದಸ್ಯರೊಬ್ಬರು ತಮ್ಮ ಪರಿಚಯಸ್ಥರ ಎದುರು ವಿವರಿಸುತ್ತಿದ್ದ ಪರಿ ಇದು.

ಹೌದು, ಅವರು ಹೇಳುತ್ತಿರುವ ಮಾತು ವೈದ್ಯರ ಬಗ್ಗೆ, ಕಷ್ಟದ ಸಮಯದಲ್ಲಿ ಕೈ ಹಿಡಿದವರಿಗೆ, ಆಸರೆಯಾದವರಿಗೆ ದೇವರು ಎಂದು ಅನ್ನೋದು, ನಂಬೋದು ಸಾಮಾನ್ಯ. ಆ ಸ್ಥಿತಿಯಲ್ಲಿ ನಮಗೆ ಅವರೇ ದೇವಸ್ವರೂಪಿಯಾಗಿರುತ್ತಾರೆ. ಇಂತಹ ದೈವಸ್ವರೂಪಿ ಎಂಬ ಖ್ಯಾತಿ ಸಿಗೋದು( ಡಾ.ಆನಂದ ತಾಂಡುರಂಗಿ ಹಿರಿಯ ಮನೋವೈದ್ಯರು) ಅಪರೂಪ, ಆದರೆ ವೈದ್ಯರಿಗೆ ಆ ಭಾಗ್ಯವಿದೆ. ವೈದ್ಯ ಹೆಣ್ಣಿರಿನ ದೇವರು. ಇದು ನಗ್ನ ಸತ್ಯ, ಅನಾರೋಗ್ಯದ ಆಪತ್ಕಾಲದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ನಡೆದುಕೊಳ್ಳುವ ರೀತಿಗೆ ಅವರು ನೀಡುವ ಅರೈಕೆಗೆ ನಾವೆಲ್ಲರೂ ತಲೆವಾಗಲೇಬೇಕು. ರೋಗಿಯೊಂದಿಗೆ ನಗು ಮುಖದಿಂದ ಮಾತನಾಡುತ್ತಾ, ಭರವಸೆಯ ಮಾತುಗಳಿಂದ ರೋಗಿಯಲ್ಲಿ ಆತ್ಮ ಕ್ರೌರ್ಯವನ್ನು ಹೆಚ್ಚಿಸುತ್ತಾರೆ. ಪ್ರೀತಿ ತುಂಬಿದ ಮಾತುಗಳಿಂದ ರೋಗಿಗಳಲ್ಲಿ ಬರುತ್ತಾರೆ. ಹೀಗಾಗಿ, ಇಡೀ ನಮ ಅನಾರೋಗ್ಯದ ಆಪ್ತಸಂಜೀವಿನಿಯಂತೆ, ಸ್ನೇಹಿತನಂತೆ ಕಂಡು ಆಪತ್ಕಾಲದಲ್ಲಿ ಕೈಹಿಡಿಯುವ ಪರಮಾತ್ಮ ವೈದ್ಯಲೋಕವನ್ನು ಗೌರವಿಸಿ ನಮಿಸುತ್ತದೆ. ಅವರ ನಿಸ್ವಾರ್ಥ ಸೇವೆಗೆ ತಲೆದೂಗುತ್ತದೆ..

ಒತ್ತಡ, ಜೀವ ಉಳಿಸುವ ಹೋರಾಟ, ಸೌಲಭ್ಯಗಳ ಕೊರತೆ, ವಿಶ್ರಾಂತಿ ಇಲ್ಲದ ದುಡಿಮೆ. ಹೀಗೆ ನೂರೆಂಟು ಸವಾಲುಗಳನ್ನು ಎದುರಿಸುತ್ತಾ ಚಿಕಿತ್ಸೆ ಅರಸಿ ಬರುವವರಿಗೆ ವೈದ್ಯರು ನಿಜಕ್ಕೂ ಕಣ್ಣಿಗೆ ಕಾಣುವ ದೇವರೇ ಸರಿ. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಪ್ರತಿಯೊಬ್ಬ ರೋಗಿಯನ್ನೂ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಹಾಗೂ ರೋಗಿಗೆ ಮರುಜನ್ಮ ನೀಡುವ ವೈದ್ಯ ದೇವರ ಪ್ರತಿರೂಪ ಎಂದರೆ ಅತಿಶಯೋಕ್ತಿಯಾಗದು, ವೈದ್ಯಕೀಯ ವೃತ್ತಿಯನ್ನು ಶ್ರೇಷ್ಠ ವೃತ್ತಿ ಎಂದು ಪರಿಗಣಿಸಲಾಗಿದೆ. ಮಾನವಕುಲದ ಯೋಗಕ್ಷೇಮಕ್ಕಾಗಿ ವೈದ್ಯರನ್ನು ಬ್ರಾಂಡ್ ಅಂಬಾಸಿಡರ್ ಎಂದು ಬ್ಯಾಗ್ ಮಾಡಲಾಗಿದೆ. ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ, ನಾವು ಸರ್ವಶಕ್ತನ ಕಡೆಗೆ ನೋಡುತ್ತೇವೆ ಮತ್ತು ನಂತರ ಜೀವನದ ಭರವಸೆಯಲ್ಲಿ ವೈದ್ಯರ ಕಡೆಗೆ ಹೋಗುತ್ತೇವೆ.

ವೈದ್ಯರಾಗಿರುವುದು ಒಂದು ಆಶೀರ್ವಾದ ಮತ್ತು ಇತರರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಮತ್ತು ಆರೋಗ್ಯವನ್ನು ಒದಗಿಸುವ ಮೂಲಕ ಅವರ ನೋವನ್ನು ಕಡಿಮೆ ಮಾಡುವುದು ಎಂದರ್ಥ ರೋಗಗಳು ಗುಣಮುಂದಾದಾಗ ನೆಮ್ಮದಿಯ ನಿಟ್ಟುಸಿರು ಬಿಡುವುದನ್ನು ನೋಡುವುದೇ ಅವಂದು ನೀವು ಪಡೆಯುವ ಅನುತ ಕರ್ವಾದಗಳು ಮತ್ತು ನಿಮ್ಮ ರೋಗಿಯು ಉತ್ತಮವಾದಾಗ ಅವರ ಮುಖದಲ್ಲಿ ನಗು ಬಿರುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದು ಯಾವುದು? ಈ ಕ್ಷಣವು ವೈದ್ಯರು ರೋಗಿಯು ಮತ್ತು ಅವರ ಕುಟುಂಬದ ನಡವಿನ ಬಂಧವನ್ನು ಮುಚ್ಚುತ್ತದೆ

ಆದ್ದರಿಂದ, ವೈದ್ಯರಾಗಿರುವುದು ಎಂದರೆ ಅನೇಕರಿಗೆ ಶಾಶ್ವತವಾದ ಸಂತೋಷದ ಮೂಲವಾಗಿದೆ ಮತ್ತು ಜನರನ್ನು ಗುಣಪಡಿಸುವುದರಿಂದ ಬರುವ ಸಂತೃಪ್ತಿ ವರ್ಣನಾತೀತವಾಗಿದೆ. ತಮ್ಮ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ತೊರೆದು ರೋಗಿಯ ಸೇವೆಗೆ ಮುಂದಾಗುವ ಇವರ ವೃತ್ತಿ ಮಾನವೀಯ ಧರ್ಮದ ಪ್ರತೀಕ, ರಾತ್ರಿ- ಹಗಲು ಎನ್ನದೇ ತಮ್ಮ ಆರೋಗ್ಯದ ಕಡೆಗೆ ಒಂದಿಷ್ಟು ಗಮನ ನೀಡದೇ ತಮ್ಮ ಬಂಧು, ಬಳಗದ ಪ್ರೀತಿಯ ಪರಿಸರವನ್ನು ಮರೆತುಮ ಸೇವೆಗೈಯ್ಯುವ ಇವರ ಕ್ರಿಯಾಶೀಲತೆಯ ಕಾಯಕ ಅನುಕರಣೀಯ. ತಮ್ಮ ಕಷ್ಟಗಳನ್ನೆಲ್ಲ ಬದಿಗಿಟ್ಟು, ರೋಗಿಯೊಂದಿಗೆ ನಗು ಮುಖದಿಂದ ಮಾತನಾಡುತ್ತಾ, ಧರವಸೆಯ ಮಾತುಗಳೆಂದ ರೋಗಿಯಲ್ಲಿ ಆತ್ಮಸ್ಥೆರ್ಯವನ್ನು ಹೆಚ್ಚಿಸುತ್ತಾರೆ. ಪ್ರೀತಿಯ ಮಾತುಗಳಿಂದ ರೋಗಿಗಳ ಮನ ಗೆಲ್ಲುತ್ತಾರೆ. ಹೀಗಾಗಿ, ಇಡೀ ಸಮಾಜ ವೈದ್ಯಲೋಕವನ್ನು ಗೌರವಿಸುವುದರ ಜತೆಗೆ ಅವರ ನಿಸ್ವಾರ್ಥ ಸೇವೆಗೆ ಸಲಾಂ ಎನ್ನುತ್ತದೆ.

ವೈದ್ಯರ ಮಹತ್ವ ಅರಿತೇ ನಮ್ಮ ಹಿರಿಯರು ವೈದೋ ನಾರಾಯಣೋ ಹರಿಃ ಎಂದು ಸಂಬೋಧಿಸಿದ್ದುಂಟು, ಜೀವಕುಲದ ಸರ್ವಾಂಗೀಣ ಆರೈಕೆಯ ಶಪಥ ಮಾಡಿದ ಶ್ರೇಷ್ಠ ವ್ಯಕ್ತಿ ಎಂದರೆ ವೈದ್ಯ, ವೈದ್ಯರ ಉಪಕಾರ ಸ್ಮರಣಿ ಎಷ್ಟು ಮಾಡಿದರೂ ಸಾಲದು, ಬದುಕು -ಸಾವು ನಡುವಿನ ಒಂದು ಜೀವಂಶಕೊಂಡಿ ಈ ವೈದ್ಯ, ಜನರ ಜೀವಕ್ಕೆ ಭಾವಕ್ಕೆ ದೈಹಿಕ ನ್ಯೂನತೆಗೆ ಸ್ಪಂದಿಸುತ್ತ ಬಂದಿರುವ ಅಪದ್ಭಾಂಧವ

ವೈದ್ಯರೂ ನಮ್ಮ ಹಾಗೆ ಮನುಷ್ಯರೇ, ರಾಹೋರಾತ್ರಿ ಪವಾಡ ಮಾಡಲು ಅವರಿಗೆ ಗೊತ್ತಿಲ್ಲ. ವೈಜ್ಞಾನಿಕವಾಗಿ ಅದೇನು ಮಾಡಬೇಕೋ ಅದನ್ನೆಲ್ಲ ಮಾಡಿರುತ್ತಾರೆ. ಇಂತಹ ಸಮಯದಲ್ಲಿ ರೋಗಿಗಳ ಸಂಬಂಧಿಕರಲ್ಲಿ ಸಂಯಮ, ತಾಳ್ಮೆ ಅಗತ್ಯ. ಒಂದು ಕ್ಷಣದ ಆವೇಶ ತಂದೊಡ್ಡುವ ಅಪಾಯ ಮತ್ತು ಪರಿಣಾಮ ತುಂಬಾನೇ ಕೆಟ್ಟದಾಗಿರುತ್ತದೆ. ಅದರ ಬದಲು ಕೂಲಕುಂಶವಾಗಿ ಯೋಚಿಸಿ, ಹೆಜ್ಜೆ ಇಟ್ಟರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅದು ಕೆಲವೆಡೆ ಆಗುತ್ತಿಲ್ಲ, ಹೆದರಿದ ನೊಂದ ಜೀವಿಗಳಿಗೆ ಆಸರೆ ಈ ವೈದ್ಯರು, ಅವರಿಗೂ ಅವರದೇ ಆದ ಅನಿವಾರ್ಯತೆಗಳಿರುತ್ತವೆ, ಸಮಸ್ಯೆಗಳಿರುತ್ತವೆ. ಅದನ್ನು ಅರ್ಥೈಸಿಕೊಳ್ಳುವ ಅಗತ್ಯತೆ ಇಂದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಮೇಲಿದೆ. ಎಷ್ಟೇ ನುರಿತ ವೈದ್ಯನಾದರೂ ಮಾನವಸಹಜ ದೌರ್ಬಲ್ಯಗಳು ಆತನಲ್ಲಿ ಇದ್ದೇ ಇರುತ್ತವೆ. ಇದನ್ನು ಅರಿಯುವಲ್ಲಿ ಸಮಾಜ ಇಂದು ವಿಫಲವಾಗುತ್ತಿದೆ. ತನ್ನಿಂದ ಶಿಕ್ಷಣ ಪಡೆದ ಮಗು ಪರೀಕ್ಷೆಯಲ್ಲಿ ಉತ್ತೀರ್ಣನಾಗಿಯೇ ತೀರುತ್ತಾನೆ ಎಂಬ ಭರವಸೆಯನ್ನು ಹೇಗೆ ಒಬ್ಬ ಶಿಕ್ಷಕ ಕೊಡಲಾರನೋ ಹಾಗೆ ತನ್ನಿಂದ ಚಿಕಿತ್ಸೆ ಪಡೆದ ರೋಗಿ ಬದುಕುವ ಭರವಸೆ ಕೆಲವೊಮ್ಮೆ ಇರುವುದಿಲ್ಲ. ಆದರೆ ವೈದ್ಯ ಸಾಧ್ಯವಾದಷ್ಟು ರೋಗಿಯ ಹಿತವನ್ನೇ ಬಯಸಿರುತ್ತಾನೆ ವೈದ್ಯ ವಿಜ್ಞಾನದ ಇತಿಮಿತಿಗಳನ್ನು ನಾವಿಂದು ಅರಿಯಬೇಕಿದೆ. ವೈದ್ಯರು ಇಂದು ವೈಯಕ್ತಿಕ ಬದುಕನ್ನು ಸಮಾಜಕ್ಕೆ ಮುಡುಪಾಗಿಟ್ಟು ಕೆಲಸ ಮಾಡುತ್ತಿದ್ದಾರೆ. ಯಾಕೆ ಅವರು ನಮ್ಮ ಹಾಗೆ ಮನುಷ್ಯರಲ್ಲವೇ? ಅವರಿಗೂ ಹೆಂಡತಿ, ಮಕ್ಕಳು ಅಥವಾ ಗಂಡ ಇಲ್ಲವೇ? ಆಸರಿಕೆ, ಬೇಸರಿಕೆ ಇಲ್ಲವೇ? ಇದೆ, ಆದರೆ, ಅವೆಲ್ಲವನ್ನು ಬದಿಗಿಟ್ಟು ರೋಗಿಗಳ ನೆರವಿಗೆ ಟೊಂಕಕಟ್ಟಿ ನಿಂತಿದ್ದಾರೆ.

ವೈದ್ಯರಿಗೂ ಖಾಸಗಿ ಬದುಕಿದೆ. ಸೇವಾ ಕ್ಷೇತ್ರದಲ್ಲಿರುವ ವೈದ್ಯರಿಗೆ ಗುರುತರ ಜವಾಬ್ದಾರಿ ಇದೆ. ಸಾಂತ್ವನ ಹಾಗೂ ಅನುಕಂಪದ ಮಾತುಗಳನ್ನು ಅವರು ಕೆಲಮೊಮ್ಮೆ ಅಡದಿರಬಹುದು. ಹಾಗಂತ ಅವರನ್ನು ದ್ವೇಷಿಸುವ ಅಗತ್ಯತೆಯಿಲ್ಲ. ನಿಷ್ಠೆಯಿಂದ ಕರ್ಮ ಮಾಡುವುದು ಅವರ ಕರ್ತವ್ಯ ಫಲಾಫಲ ಅವರ ಕೈಯಲ್ಲಿ ಇಲ್ಲ. ಹಾಗೆ ವೈದ್ಯರು ಕೂಡ ಇಂದು ಹಿಂದೆಂದಿಗಿಂತಲೂ ಸಾಕಷ್ಟು ವೃತ್ತಿ ಗುಣ್ಯತೆ ಹೊಂದಿದ್ದಾರೆ.

About Author:

Leave Your Comments

Your email address will not be published. Required fields are marked *