COVID-19 Resources for Mental Health Coaches... Learn More

0836-2773878

“ಜಾನಪದ ಸಾಹಿತ್ಯಕ್ಕಿದೆ ಸಂಸ್ಕಾರ ನೀಡುವ ಶಕ್ತಿ”

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿದೆ.ಜಯ ಶ್ರೀ ಗುತ್ತಲ ದತ್ತಿ ಅಂಗವಾಗಿ ಉಪನ್ಯಾಸ ಹಾಗೂ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-2024ರ ಕಾರ್ಯಕ್ರಮ ಶನಿವಾರ ನಡೆಯಿತು. ಉದ್ಘಾಟಿಸಿದ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಮಾತನಾ ಡಿ, ನಮ್ಮ ಜನಪದರ ಜೀವನದ ಸಮಸ್ತ ನೆಲೆಗಳು ಜನಪದ ಸಾಹಿತ್ಯದಲ್ಲಿದೆ. ನಮ್ಮ ಬದುಕು ತಿದ್ದುವ ಮತ್ತು ಸಂಸಾ ರಗೊಳಿಸುವ ಅನನ್ಯತೆ ಜನಪದದಲ್ಲಿದೆ ಎಂದು ತಿಳಿಸಿದರು.

ಹಳ್ಳಿಯ ಜನರು ನಿರಕ್ಷರಿಗಳಾದರೂ ಕೂಡ ಎಲ್ಲರಿಗೂ ತಿಳಿಯುವಂತೆ ಆಡು ಭಾಷೆಯಲ್ಲಿ ಹಾಡುಕಟ್ಟಿ ಹಾಡುವ ಕಲೆ ಕರಗತ ಮಾಡಿಕೊಂಡಿದ್ದರು. ಜನಪದ ಹಾಡುಗಳು ಮತ್ತು ಸಂಗೀತ ಎರಡೂ ಮನಸ್ಸಿನ ಬೇಸರ ಕಳೆಯಲಿವೆ ಎಂದು ಹೇಳಿದರು. ಪುರಸ್ಕಾರ ಪ್ರದಾನಿಸಿದ ಪದ್ಮಶ್ರೀ ಪಂ.ಎಂ.ವೆಂಕಟೇಶಕುಮಾರ, ಧುನಿಕತೆ ಭರಾಟೆಯಲ್ಲಿ ಮೂಲ ಜಾನಪದ ಹಾಡುಗಳನ್ನು ಸಿನೇಮಾ ದಾಟಿಯಲ್ಲಿಯೇ ಹಾಡುವುದು ಸಲ್ಲ. ಹೀಗೆ ಹಾಡುವುದು ನಮ್ಮ ಜನಪದ ಬದುಕಿಗೆ ಧಕ್ಕೆ ತರಲಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿಸಂ ಉಪಾ ಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ದಿ.ಜಯಶ್ರೀ ಓರ್ವ ಶ್ರೇಷ್ಠ ಸಂಗೀತಗಾರ್ತಿ. ಯುವ ಸಂಗೀತಗಾರರು ಅವರ ಆದರ್ಶಗಳು ಮೈಗೂಡಿಸಿಕೊಂಡು, ಸಾಹಿತ್ಯ ಉಳುವಿಗೆ ಜನಪದ ಶ್ರಮಿಸಲು ಹೇಳಿದರು. ಪ್ರಥಮ ಸ್ಥಾನ ಪಡೆದ ಬೈಲ ಹೊಂಗಲದ ವೇಣು ಮಾಧವ ಭಜನಾ ಮಂಡ�೯ ‘ದಿ.ಜಯಶ್ರೀ ಗುತ್ತಲ ಜಾನ ಪದ ಪುರಸ್ಕಾರ’ಕ್ಕೆ ಭಾಜನ ವಾಯಿತು. ಹುಬ್ಬಳ್ಳಿ ಗೌರಿ ಮಹಿಳಾ ಮಂಡಳ-ದ್ವಿತೀಯ, ನಂದಿಕೋಲು ಮಹಿಳಾ ಮಂಡಳ-ತೃತೀಯ ಸ್ಥಾನ ಪಡೆದವು.ಕವಿಸಂ ಪಾಧಿಕಾರಿಗಳಾದ ಸತೀಶ ತುರಮರಿ, ವೀರಣ್ಣ ಒಡ್ಡಿನ್, ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ, ಆರ್.ಬಿ.ವಾಡಪ್ಪಿ, ಡಿ.ಎಂ. ಸಿಂದಗಿ, ಶ್ರೀಕಾಂತ ಮಾಳಾಪೂರ, ಶ್ರೀಧರ ಗಾಂವಕರ ಇದ್ದರು.

About Author:

Leave Your Comments

Your email address will not be published. Required fields are marked *