COVID-19 Resources for Mental Health Coaches... Learn More

0836-2773878

ಕುರುಡು ಕಾಂಚಾಣ ಕೈ ಕೊಟ್ಟಾಗ ಬದುಕು ಹೈರಾಣ

ವಿದ್ಯಾರ್ಥಿ, ದಿಢೀರ್ ಶ್ರೀಮಂತನಾಗಬೇಕೆನ್ನುವುದು ಆತನ ಮಹಾತ್ವಾಕಾಂಕ್ಷೆ ಆ ನಿಟ್ಟಿನಲ್ಲಿ ಆತನ ಯತ್ನ ಸಾಗಿದ್ದು ಪ್ರೌಡಶಾಲೆ ಯಲ್ಲೇ ಹೌದು, ಷೇರು ಮಾರುಕಟ್ಟೆಯ ಇಂಚಿಂಚೂ ಇವನಿಗೆ ಕರಗತ ಯಾವ ಕಂಪನಿಯ ಷೇರು ಖರೀದಿಸಿದರೆ ಸೂಕ್ತ? ಎಷ್ಟು ಹೂಡಿಕೆ ಯಾವಾಗ ಮಾಡಬೇಕು ಎಂಬೆಲ್ಲ ಪಟ್ಟುಗಳು ರತ್ನಗತ. ಇದರ ಪರಿಣಾಮ ಅತ ಹೈಸ್ಕೂಲ್‌ನಲ್ಲಿ ಇರುವಾಗಲೇ ಲಕ್ಷಾಂತರ ರೂ. ಗಳಿಸಿದ. ಹೇಳಿ ಕೇಳಿ ಹಾರ್ಮೋನುಗಳು ಏರಿಳಿತವಾಗುವ ವಯಸ್ಸು. ಪ್ರೀತಿಸಿದ. ಆಕೆಯೂ ಈತನ ನೋಟ ಮತ್ತು ಕಾಂಚಾಣ ಮೋದಿಗೆ ಮರುಳಾದಳು. ಜನುಮದ ಜೋಡಿಯಂತೆ ವಿಹರಿಸಿದರು. ದಿನಗಳು ಉರುಳುತ್ತಾ ಸಾಗಿದವು. ಮುಂದೆ ಪಿಯುಸಿ ಮುಗಿಸಿದ ನಂತರ ಎಂಜನಿಯರಿಂಗ್ ಸೀಟ್ ಕೂಡ ಸಿಕ್ಕಿತು. ಆದರೆ ಷೇರುಪೇಟೆಯಲ್ಲಿ ಹೂಡಿಕೆ ಲೆಕ್ಕಾಚಾರ ಬುಡಮೇಲಾಗುತ್ತಿತ್ತು. ಕೈಯಲ್ಲಿದ್ದ ಹಣ ಕ್ರಮೇಣ ಕರಗತೊಡಗಿತು. ಇದ್ದುದೆಲ್ಲಾ ಕಳೆದುಕೊಂಡ. ಮುಂದೇನು? ಎಂಬ ಚಿಂತೆಯ ಚಿತೆ ಈತನನ್ನು ಸುಡಲಾರಂಭಿಸಿತು. ಇದೇ ವೇಳೆ ಇಷ್ಟು ದಿನ ‘ಜತೆ ಜತೆಯಲಿ ಇರುವೆನು ಎಂದೂ’ ಎಂದು ಹೆಜ್ಜೆ ಹಾಕಿದ್ದ ಪ್ರಾಣಸಬಿ ಕೂಡ ಈತನ ಈ ತರಹದ ಆಘಾತಗಳು ಆದಾಗ ಭಿನ್ನತೆ ಯಾರಿಗಾದರೂ ಸಹಜ. ಅದರಲ್ಲೂ ಹಣಕಾಸು ಮತ್ತು ಜೀವನಸಂಗಾತಿ ಎರಡೂ ಕೈ ಬಿಟ್ಟು ಹೋದಾಗ ಆಗುವ ನೋವು, ಪಡುವ ಯಾತನೆ ಅಷ್ಟಿಷ್ಟಲ್ಲ, ಈತನ ಅಪ್ಪ ಅಮ್ಮ ಮನೆ ಕಡೆ ಸ್ಥಿತಿವಂತರು. ಮಗನ ಪಾಲನೆ, ಅರಳುವ ಸಮಯದಲ್ಲಿ ಈ ತರಹ ಮುದುಡಿದರೆ ಭವಿಷ್ಯದ ಚಿಂತೆ ಇಡೀ ಕುಟುಂಬವನ್ನು ಕಾಡುವುದು ಖಚಿತ.

ಈಗಾಗಿದ್ದೂ ಅದೇ. ಮಗ ಎಂಜನಿಯರಿಂಗ್ ಏನೋ ಸೇರಿಕೊಂಡ. ಆದರೆ ಮೊದಲಿನ ಷೇರು ವ್ಯವಹಾರದ ಮೋಹ ಇನ್ನೂ ಕಳಚಿಲ್ಲ, ಆರಂಭದಲ್ಲಿ ಕೈ ತುಂಬಾ ಹಣ ಎಣಿಸುವಂತೆ ಮಾಡಿದ್ದ ಈ ವ್ಯವಹಾರ ಈಗ ಇದ್ದಕಿದ್ದಂತೆ ಕುಸಿದ ಪರಿಣಾಮ ಆತನಿಗೆ ಆಕಾಶವೇ ಕಳಚಿ ಬಿದ್ದ ಅನುಭವ ಬಹುಶಃ ಐಷಾರಾಮಿ ಜೀವನದ ದಾನನೂ ಆಗಿದ್ದ ಈತ ಇದೀಗ ಅದಕ್ಕೆಲ್ಲಾ ಹಣ ಹೊಂದಿಸಲಾರದೇ ಚಡಪಡಿಸುತ್ತಿದ್ದಾನೆ. ಓದಿ ನಂತರ ಉದ್ಯೋಗ ಸೇರಿ ಸಂಪಾದಿಸುವುದು ಇನ್ನೂ ದೂರ ಎಂಬ ಆಲೋಚನೆ ಆತನದ್ದು. ಈಗಿನ ಯುವಕರಲ್ಲಿ ಗಮನಿಸಬೇಕಾದ ಆಲೋಚನೆ ಎಂದರೆ ಶಿಕ್ಷಣದ ಉದ್ದೇಶ ಗಳಿಕೆ ಎಂದುಕೊಂಡಿರುವುದು, ಏನೇ ಕಲಿತರೂ ಒಳ್ಳೆಯ ಸಂಬಳ ಗಳಿಕೆಗೆ ಎಂದರ್ಥ. ಹಾಗಿದ್ದರೆ ದುಡ್ಡು ಗಳಿಸಲು ಇಷ್ಟೆಲ್ಲಾ ಶಿಕ್ಷಣ ಅವಶ್ಯವೇ? ಗಳಿಕೆಗೆ ನೂರೆಂಟು ಮಾರ್ಗಗಳಿವೆ ಎಂದುಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಷೇರು ಪೇಟೆಯ ಮಾಯಾಜಾಲಕ್ಕೆ ಬಿದ್ದವರ ಪೈಕಿ ಈ ಯುವಕನೂ ಒಬ್ಬ. ಆದರೆ ಈ ಮಾರ್ಗದ ಗಳಿಕೆ ಕೇವಲ ಕ್ಷಣಿಕ ಮತ್ತು ಅನಿಕೃತತೆಯಿಂದ ಕೂಡಿದ್ದು ಎನ್ನುವ ನಗ್ನಸತ್ಯ ಆತನಿಗೆ ಈಗೀಗ ಅರಿವಾಗತೊಡಗಿದೆ. ಅದೃಷ್ಟವೋ ಅಥವಾ ಈತನ ಚಾಕಚಕ್ಯತೆಯೋ ಹೈ ಸ್ಕೂಲ್ ನಲ್ಲೇ ಈತನ ತಾಳಕ್ಕೆ ತಕ್ಕಂತೆ ಷೇರುಗಳು ಹೆಜ್ಜೆ ಹಾಕಿದವು. ಕ್ರಮೇಣ ನಾಗಾಲೋಟಕ್ಕೆ ಬ್ರೇಕ್ ಬಿತ್ತು. ಅಲ್ಲಿಂದ ಈತನಿಗೆ ಆತಂಕಭರಿತ ಭಯ ಶುರುವಾಯಿತು. నాను మళ బయనువుడు ఇట్టి, యారే ఆగలి ಯಾವುದಕ್ಕೂ ಆತುರ ಪಡಬಾರದು ಎಲ್ಲದಕ್ಕೂ ಒಂದು ಕಾಲ ಇರುತ್ತದೆ. ಸಿರಿವಂತನಾಗುವ ಕನಸು ತಪ್ಪಲ್ಲ. ಆದರೆ ದಿಢೀರ್ ಶ್ರೀಮಂತನಾಗುವ ಭರದಲ್ಲಿ ಕೈಗೊಳ್ಳುವ ನಿರ್ಧಾರಗಳು, ಜೀವನಕ್ರಮಗಳು ಕೊನೆಗೊಮ್ಮೆ ನಿರಾಸೆಯ ಕೂಪಕ್ಕೆ ತಳ್ಳಿ ಬಿಡುತ್ತವೆ. ಈ ಯುವಕನನ್ನೇ ತೆಗೆದುಕೊಳ್ಳಿ, ವಯಸ್ಸಲ್ಲದ ವಯಸ್ಸಲ್ಲಿ ಊಹೆಗೂ ಮೀರಿ ಗಳಿಸಿದ ಹಣ ಇಂದು ಅವನಿಂದ ದೂರವಾಗಿದೆ. ಮನಮೆಚ್ಚಿದ ನಲ್ಲೆಯೂ ಇಲ್ಲವಾಗಿದ್ದಾಳೆ. ಇತ್ತ ಪಾಲಕರೂ ಆತಂಕಕ್ಕೆ ಒಳಗಾಗಿದ್ದಾರೆ. ನನ್ನ ಬಳಿ ಬಂದಾಗ ಅಸ್ಪ ಸಮಾಲೋಚನೆ ಮೂಲಕ ಸಮಸ್ಯೆಯ ಮೂಲ ಅರಿತು ಪರಿಹಾರ ಸೂಚಿಸಿರುವೆ. ಆದರೆ ಈ ತರಹದ ದುಡುಕಿನ ಕ್ರಮ ಯಾರೂ ಕೈಗೊಳ್ಳಬೇಡಿ. ಬದುಕು ಸುಂದರವಾಗಿದೆ. ಹಂತಹಂತವಾಗಿ ಎಂಜಾಯ್ ಮಾಡಿ ಅಷ್ಟೇ.

About Author:

Leave Your Comments

Your email address will not be published. Required fields are marked *