COVID-19 Resources for Mental Health Coaches... Learn More
“ಕಾನೂನು ಅರಿವು ಕಾರ್ಯಕ್ರಮ”
ಒಳ್ಳೆಯ ಕಾರ್ಯದ ಕುರಿತು ಹಿರಿಯರಾ ದವರು ತಿಳಿವಳಿಕೆ ನೀಡಬೇಕು. ತಿಳಿವಳಿಕೆ ಯ ಕೊರತೆಯಿಂದ ಮಕ್ಕಳು ಅಡ್ಡದಾರಿ ಹಿಡಿಯುತ್ತಿವೆ ಎಂದಿ ರಾಮದುರ್ಗದ ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ತಾಲೂಕು ಕಾನೂನು ಸೇವಾಸಮಿತಿಯ ಅಧ್ಯಕ್ಷಮಲ್ಲಿಕಾರ್ಜುನ ಅಂಬಲಿ ಹೇಳಿದರು. ರಾಮದುರ್ಗ ತಾಲೂಕಿನ ಚಂದರಗಿ ಕ್ರೀಡಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿ ಗೆ ಆಯೋಜಿಸಿದ ಕಾನೂನು ಅರಿವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಿಳಿವಳಿಕೆಯ ಕಡಿಮೆ ಇರುವ ಮಕ್ಕಳು ಅಡ್ಡದಾರಿ ಹಿಡಿದು ಅನಾಹುತ ತಂದುಕೊಳ್ಳುತ್ತಾರೆ. ಅಪ್ರಾಪ್ತ ವಯಸ್ಸಿನ ಹುಡುಗ-ಹುಡುಗಿಯರು ತಪ್ಪು ದಾರಿ ಹಿಡಿದು ನ್ಯಾಯಾಲಯಕ್ಕೆ ಬಂದ ಪ್ರಕರಣಗಳನ್ನು ತಾವು ದಿನಾಲು ನೋ ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶ ಡುತ್ತೇವೆ ಎಂದು ಹೇಳಿದ ಅವರು ಈ ತರಹದ ಪ್ರಕರಣಗಳು ಸಮಾಜದ ಸ್ವಾಸ್ಥ ಕೆಡಿಸುತ್ತಿವೆ. ಈ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು. ವೈದ್ಯ ಡಾ. ಪಾಂಡುರಂಗಿ ಮಾತ ನಾಡಿ, ಮೊಬೈಲ್ ಗೀಳು ಬೆಳೆಸಿಕೊಂಡು ಹಾದಿ ತಪ್ಪುವುದು ಹೆಚ್ಚು ಕಾರಣ ಎಂದರು. ದಿವಾಣಿ ನ್ಯಾಯಾಧೀಶರು ಮತ್ತು ಜೆಎಂ.ಎಫ್.ಸಿ ರಾಮದುರ್ಗ ಮಲ್ಲಿಕಾರ್ಜುನ ಅಂಬಲಿ ಉದ್ಘಾಟಿಸಿದರು. ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸಹ ಸದಸ್ಯ ಕಾರ್ಯದರ್ಶಿ ಶಿವಕುಮಾರ ದೇಶಮುಖ ಮಾತನಾಡಿ, ವಿದ್ಯಾರ್ಥಿ ಜೀವನ ತಪಸ್ಸು ಎಂದು ಭಾವಿಸಬೇಕು ಹೊರತು ಮಜಾ ಮಾಡಲಿಕ್ಕಲ್ಲ ಎಂದು ಸಲಹೆ ನೀಡಿದರು. ವಕೀಲ ಎಸ್.ಎ. ಜಾಮದಾರ ಮಾತ ನಾಡಿ, ಮೊಬೈಲ್ ಬಳಕೆಯಿಂದ ದೌರ್ಜ ನ್ಯ ಹೆಚ್ಚಾಗಿವೆ. ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು. Belagavi Rural Edition 23 Nov, 2018 Page No. 1 Powered by eReleGo.com ತಹಸೀಲ್ದಾರ್ ಆರ್.ವಿ.ಕಟ್ಟಿ, ವಕೀಲರ ಸಂಘದ ಅಧ್ಯಕ್ಷ ಆರ್ .ಜಿ.ವಜ್ಜರಮಟ್ಟಿ ಸಹಾಯಕ ಸರ್ಕಾರಿ ಅಭಿಯೋಜಕ ಅಮೀನಸಾಬ ಆರ್. ಕಲಾದಗಿ, ವಕೀಲ ಆರ್.ಎಚ್.ತೋ ಳಗಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಅಲಾಸೆ, ಸಿಡಿಪಿಒ ಖಾದರಾಬಿ ಲಕ್ಕೆ ಶ್ವರ, ಡಿವೈಎಸ್ಪಿ ಬಿ.ಎಸ್.ಪಾಟೀಲ, ಕಟಕೋಳದ ಪಿಎಸೈ ಸುನೀಲಕುಮಾರ ನಾಯಕ, ಸ್ಪೋಕೋ ಸಂಸ್ಥೆಯ ಅಧ್ಯಕ್ಷ ಆರ್.ಎ.ಪಾಟೀಲ, ನಿರ್ದೇಶಕರಾದ ಎಸ್.ಆರ್.ನವರಕ್ಕಿ, ಸರ್ಕಾರಿ ಪ್ರೌಢಶಾ ಲೆ ಮುಖ್ಯೋಪಾಧ್ಯಯ ಎಚ್.ಎಲ್. ಅಲ್ಲಿಖಾನ, ಪ್ರಾಚಾರ್ಯಎಸ್.ಜಿ.ಕಡೇ ಮನಿ, ವ್ಯವಸ್ಥಾಪಕ ಬಿ.ಎಸ್.ಪಾಟೀಲ ಉಪಸ್ಥಿತರಿದ್ದರು. ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳು, ಚಂದರಗಿ ಸರ್ಕಾರಿ ಪ್ರೌಢಶಾಲೆ, ಗೊಡಚಿ ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.