COVID-19 Resources for Mental Health Coaches... Learn More
“ಕಾಕ್ಲಿಯರ್ ಇಂಪ್ಲಾಂಟ್ ವರದಾನ”

ಕ್ಲಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯು ಶ್ರವಣ ದೋಷ ಸಮಸ್ಯೆ ಎದುರಿಸುತ್ತಿರುವವರಿಗೆ ವರದಾನವಾಗಿದೆ. ಈ ಶಸ್ತ್ರಚಿಕಿತ್ಸೆಯ ಮಹತ್ವ ಮತ್ತು ಅದರ ಉಪಯೋಗಗಳ ಬಗ್ಗೆ ಹೆಚ್ಚು ಜನರು ತಿಳಿವಳಿಕೆ ಹೊಂದಬೇಕು ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು. – ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಅಭಿಪ್ರಾಯ ನಗರದ ಮೈಸೂರು ಮಹಾವಿದ್ಯಾಪೀಠ, ವಾಕ್ ಮತ್ತು ಶ್ರವಣ ವಿದ್ಯಾಸಂಸ್ಥೆ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿವಿ-ಮೂಗು-ಗಂಟಲು ತಜ್ಞರು, ಆಡಿಯಾಲಾಜಿಸ್ಟ್, ಸ್ಪೀಚ್ ಥೆರಪಿಸ್ಟ್ ತಂಡವಾಗಿ ಸೇರಿ ಮಾಡಿದರೆ ಫಲಿತಾಂಶ ಉತ್ತಮವಾಗಿರುತ್ತದೆ ಎಂದರು. ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವಿ.ಡಿ. ಬೋಳಿಶೆಟ್ಟಿ ಮಾತನಾಡಿ, ವಿಜ್ಞಾನಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಕೇಂದ್ರದಿಂದ ಸಂಪೂರ್ಣ ಬೆಂಬಲವಿರುತ್ತದೆ ಎಂದರು. ಕ್ಲಾಕ್ಲಿಯರ್ ಇಂಪ್ಲಾಂಟ್ ತಜ್ಞ ಡಾ. ಶಂಕರ ಮೆದಿಕೇರಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಆಡಳಿತಾಧಿಕಾರಿ ಎಸ್.ಜಿ. ಬಿರಾದಾರ, ಪ್ರಾಚಾರ್ಯ ಡಾ. ಜಿಜೋ ಪಿ.ಎಂ., ಇಎನ್‌ಟಿ ತಜ್ಞ ಅನಿಕೇತ ಪಾಂಡುರಂಗಿ, ಇತರರಿದ್ದರು. ಡಾ. ಆಶಾ ಎಥಿರಾಜ್, ಡಾ. ಮಂಜುಳಾ, ಡಾ. ರವೀಂದ್ರ ಗದಗ, ಡಾ. ರಶ್ಮಿ ದೇಶಪಾಂಡೆ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ರೋಶಿನಿ ಕೆ.ಕೆ. ನಿರೂಪಿಸಿದರು. ಪವನ ಕಟ್ಟಿ ವಂದಿಸಿದರು.


