COVID-19 Resources for Mental Health Coaches... Learn More
“ಒತ್ತಡದ ನಡುವೆ ಸಜೀವತೆ”ಡಾ. ಆನಂದ ಪಾಂಡುರಂಗಿ ಅವರಿಂದ – KMF ತರಬೇತಿ ಕಾರ್ಯಕ್ರಮದಲ್ಲಿ ಮನೋವಿಜ್ಞಾನ ಸ್ಪರ್ಶ

ರೈತರ ಆರ್ಥಿಕ, ಸಾಮಾಜಿಕ ಅಭಿವೃದ್ದಿಗೆ ಬದ್ಧ: ಜಿ.ಪಿ. ಪಾಟೀಲ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.. ಬೆಂಗಳೂರು, ಕರ್ನಾಟಕ ರಾಜ್ಯ ಉಗ್ರಾಣ ನಿಗಮ. ಬೆಂಗಳೂರುಹಾಗೂಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್, ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿ.. (KMF) ತರಬೇತಿ ಕೇಂದ್ರ, ರಾಯಾಪುರ, ಧಾರವಾಡದಲ್ಲಿ “ಕರ್ನಾಟಕ ರಾಜ್ಯ ಉಗ್ರಾಣದ ಅಧಿಕಾರಿಗಳು/ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಜಿ.ಪಿ.ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಲಿಕೆಗೆ ಕೊನೆ ಎಂಬುವುದು ಇಲ್ಲಅದು ಹರಿಯುವ ನೀರಾಗಿದೆ. ಸಹಕಾರ ಮತ್ತು ಉಗ್ರಾಣ ನಿಗಮ ಬೇರೆ ಬೇರೆ ಎಂಬುದಿಲ್ಲ. ಇವು ಎರಡರ ಉದ್ದೇಶ ಒಂದೇ, ರೈತರ ಆರ್ಥಿಕ. ಸಾಮಾಜಿ-ಕ ಅಭಿವೃದ್ಧಿ ಮಾಡುವುದಾಗಿದೆ.
ನಾವೆಲ್ಲರೂ ಜವಾಬ್ಬಾ-ರಿಯಿಂದಕಾರ್ಯನಿರ್ವಹಿಸ ಬೇಕಾದರೆ ತರಬೇತಿ ಎನ್ನವುದು ಅವಶ್ಯಕವಾಗಿದೆ. ಹಾಗಾಗಿ ಎಲ್ಲಾ ಅಧಿಕಾರಿಗಳು ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ವೃತ್ತಿಪರತೆಯಿಂದ ಕಾರ್ಯನಿರ್ವಹಿಸಬೇಕು. ಇದರಿಂದ ರೈತರಿಗೆ ಉತ್ತಮಸೇವೆ ಕೊಡಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಬಸವರಾಜ ನೀ. ಅರಬಗೊಂಡ ಮಾತನಾಡಿ ಇಂದಿನ ಪೈಪೋಟಿ ಯುಗದಲ್ಲಿ ಸಹಕಾರ ಕ್ಷೇತ್ರವು ಎಲ್ಲಾ ಸಂಪನ್ಮೂಲಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಖಾಸಗಿ ಕ್ಷೇತ್ರದ ಜೊತೆ ಪೈಪೂಟಿ ಎದುರಿಸಬೇಕಾಗಿದೆ.
ಅದಕ್ಕಾಗಿ ತರಬೇತಿ ಎನ್ನುವುದು ಅವಶ್ಯಕವಾಗಿದೆ. ವೃತ್ತಿಕೌಶಲ್ಯವನ್ನು ತರಬೇತಿ ಮೂಲಕ ಪಡೆದುಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಅವರು ಮುಂದುವರೆದು ಮಾತನಾಡುತ್ತಾ ರೈತರು ಬೆಳೆದ ಬೆಳೆಯನ್ನು ಬೆಲೆ ಬರುವವರೆಗೆ ರೈತರು ಸಂಗ್ರಹಿಸಿ ಇಡಬೇಕಾದರೆ ವ್ಯವಸ್ಥೆಉಗ್ರಾಣಗಳುಬೇಕು. ಆವ್ಯವಸ್ಥೆಯನ್ನು ಉಗ್ರಾಣದ ಅಧಿಕಾರಿಗಳು ಬೆಳೆದ ಫಸಲನ್ನು ಇಡಬೇಕಾದರೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರಬೇಕು. ಅದಕ್ಕಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ದೂರ ದೃಷ್ಟಿ ಇಟ್ಟುಕೊಂಡು ಹೊಸ ಹೊಸ ತರಬೇತಿಯನ್ನು ಆಯೋಜಿಸಿ,ವೃತ್ತಿಕೌಶಲ್ಯವನ್ನು ನೀಡುತ್ತಬರುತ್ತಿದೆಎಂದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಬಾಪೂಗೌಡ ಡಿ. ಪಾಟೀಲ ಮಾತನಾಡಿ ಒಂದು ಸಹಕಾರ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಎಲ್ಲಾ ಸಿಬ್ಬಂದಿಗಳು ಗುಂಪಾಗಿ ಕೆಲಸ ನಿರ್ವಹಿಸುವುದು. ಪ್ರಾಮಾಣಿಕತೆಯಿಂದ ಯಾವುದೇ ಕಾರ್ಯವನ್ನು ಒಗ್ಗಟ್ಟಿನಿಂದ ಚರ್ಚೆ ಮಾಡಿ ಕಾರ್ಯನಿರ್ವಹಿಸಬೇಕು ಎಂದರು. ಅದಕ್ಕಾಗಿ ಹೆಚ್ಚು ಹೆಚ್ಚು ತರಬೇತಿ ಪಡೆದು ತಮ್ಮ ಕಾರ್ಯದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಹಾಯಕ ಯೋಜನಾಧಿಕಾರಿಯಾದ ಆನಂದ ತಳವಾರ ಹಾಗೂ ಉಪನ್ಯಾಸಕರಾದ ಮಾನಸಿಕರೋಗ ತಜ್ಞರಾದ ಡಾ.ಆನಂದ ಪಾಂಡುರಂಗಿ ರವರು ಒತ್ತಡ ನಿರ್ವಹಣೆ ಹಾಗೂ ನಾಗರತ್ನ ಬಿ ಹೂಗಾರ ಪ್ರಾಂಶುಪಾಲರು, ಜಿಲ್ಲಾ ತರಬೇತಿ ಸಂಸ್ಥೆ. ಧಾರವಾಡ ರವರು ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು-2021 ಮತ್ತು ರಜಾ ನಿಯಮಗಳು ಹಾಗೂ ಡಾ: ಕಿರಣ್ ದಾಸನಾಳ್ ಕೃಷಿ ವಿಶ್ವವಿದ್ಯಾಲಯ ಧಾರವಾಡ ರವರು ಉಗ್ರಾಣ ನಿರ್ವಹಣೆ ಮತ್ತು ತಾಂತಿಕ ಅಂಶಗಳ ಬಗ್ಗೆ ಅಂಶಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ.ಐ.ಸಿ.ಎಂ.ನ ಪ್ರಾಂಶುಪಾಲರಾದ ಡಿ.ಆರ್.ವೆಂಕಟರಾಮ ಸ್ವಾಗತ ಮಾಡಿದರು. ಪ್ರಾರ್ಥನೆಯನ್ನು ಆರತಿ ದೇವಶಿಕಾಮಣಿ, ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ರೂಪಾ.ಆರ್.ಪಾಟೀಲ ಹಾಗೂ ಗೀತಾ ಕೋಣನವರ ವಂದನಾರ್ಪಣೆ ಮಾಡಿದರು.



