COVID-19 Resources for Mental Health Coaches... Learn More

0836-2773878

“ಎಲ್ಲ ದಾನಕ್ಕಿಂತಲೂ ರಕ್ತದಾನ ಶ್ರೇಷ್ಠ”


ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಡಾ. ಬಿ.ಡಿ. ಜತ್ತಿ ಹೋಮಿಯೋಪಥಿ ಮೆಡಿಕಲ ಕಾಲೇಜು ವತಿಯಿಂದ ರಾಷ್ಟೋತ್ಥಾನ ರಕ್ತ ಭಂಡಾರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಖ್ಯಾತ ವೈದ್ಯರು ಡಾ.ಆನಂದ ಪಾಂಡುರಂಗಿ ಹಾಗೂ ಮಾಜಿ ಮೇಯರ್ ಈರೇಶ ಅಂಚಟಗೇರಿ ರಕ್ತದಾನ ಶಿಬಿರ ಉದ್ಘಾಟಿಸಿದರು. ಅನ್ನದಾನಕ್ಕಿಂತ ಶ್ರೇಷ್ಠ ರಕ್ತದಾನ. ಅಪಘಾತ, ಅನಾರೋಗ್ಯ, ಹೆರಿಗೆಯಂತಹ ತುರ್ತು ಪರಿಸ್ಥಿತಿಗಳಲ್ಲಿ ಅಮೂಲ್ಯ ಜೀವ ಉಳಿಸುವ ಸಂಜೀವಿನಿಯೇ ಆಗಿದೆ ರಕ್ತದಾನ.ಪ್ರತಿಯೊಬ್ಬರೂ ಈ ಮಹತ್ವದ ದಿನದಂದು ರಕ್ತದಾ ನದ ಸೇವೆಗೈದು ಅಗತ್ಯ ವಿರುವವರಿಗೆ ರಕ್ತ ನೀಡೋಣ ಎಂದು ಆಶಿಸುತ್ತ ಸರ್ವ ರಕ್ತದಾನಿಗಳಿಗೂ ಕೋಟಿ ಕೋಟಿ ಧನ್ಯವಾದ ಅರ್ಪಿಸುತ್ತೇನೆ ಎಂದರು. ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ರಕ್ತದಾನ ಮನುಷ್ಯತ್ವದ ಶ್ರೇಷ್ಠತೆ ಯಾಗಿದೆ. ಇಂದಿಗೂ ವಿಜ್ಞಾನ ಹಾಗೂ ತಂತ್ರಜ್ಞಾನ ಎಷ್ಟು ಮುನ್ನಡೆದರೂ ಮಾನವ ದೇಹಕ್ಕೆ ಅಗತ್ಯ ವಿರುವದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಡಾ.ಬಿ.ಡಿ. ಜತ್ತಿ ಹೋಮಿಯೋಪಥಿ ಮೆಡಿಕಲ ಕಾಲೇಜು ವತಿಯಿಂದ ರಾಷ್ಟೋತ್ಥಾನ ರಕ್ತಭಂಡಾರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ರಕ್ತವನ್ನು ಯಂತ್ರ ಅಥವಾ ಲ್ಯಾಬ್ ನಲ್ಲಿ ತಯಾರಿ ಸುವುದು ಸಾಧ್ಯವಾಗಿಲ್ಲ. ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ಮನುಷ್ಯನಿಂದಲೇ ದೊರೆಯುವ ರಕ್ತವೇ ಅತ್ಯಗತ್ಯ ಎಂದರು. ವಿಶ್ವ ರಕ್ತದಾನಿಗಳ ದಿನದಂದು, ನೆನೆಸುವುದು ಮಾತ್ರವಲ್ಲದೆ, ನಮ್ಮಿಂದಸಾಧ್ಯವಾದಸೇವೆಯೊಂದಿಗೆ ಬೆಂಬಲ ನೀಡೋಣ. ರಕ್ತದಾನ ಮಾಡೋಣ. ನಾವು ನೀಡುವ ರಕ್ತ, ಯಾರಿಗೋ ಬದುಕು ಕೊಡಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ರಕ್ತದಾನ ಮಾಡುವದರಿಂದ ಆರೋಗ್ಯ ಕಾಪಾಡಬ ಹುದು ಹಾಗು ಜೀವ ಉಳಿಸುವ ಕಾರ್ಯವಿರುವ ಕಾರಣ ಎಲ್ಲರು ರಕ್ತದಾನ ಮಾಡಲು ಆಗ್ರಹಿಸಿದ ಅಂಚಟಗೇರಿ ಸ್ವತಃ ರಕ್ತದಾನ ಮಾಡಿ ಮಾದರಿ ಯಾ ದರು. ಎಸ್.ರಾಧಾಕೃಷ್ಣನ್, ಡಾ.ವೈಷ್ಣವಿ, ಡಾ. ಹೊಸೂರ, ಬಸವರಾಜ ತಾಳಿಕೋಟಿ, ಡಾ. ವಿಜಯ ಕುಲಕರ್ಣಿ, ಡಾ. ವಿನಯ ಕುಲಕರ್ಣಿ ಇದ್ದರು.

About Author:

Leave Your Comments

Your email address will not be published. Required fields are marked *