COVID-19 Resources for Mental Health Coaches... Learn More

0836-2773878

“ಉನ್ನತ ಮೌಲ್ಯ ರೂಢಿಸಿಕೊಳ್ಳಿ”

ಆಧುನಿಕ ಜಗತ್ತು ವೇಗವಾಗಿ ಮುನ್ನಡೆಯುತ್ತಿದ್ದು ಅದರೊಡನೆ ನಾವು ಮುನ್ನಡೆಯುತ್ತ ಉನ್ನತ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸ್ಪೂ ರ್ತಿಯಾಗಿರಬೇಕು ಎಂದು ಹು- ಧಾ ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ಹೇಳಿದರು. ನಗರದ ನಿಡವಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ 2024-25ನೇ ಸಾಲಿನ ಪ್ರಥಮ ಪಿಯುಸಿ ಹಾಗೂ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂದರು. ಮನೋವೈದ್ಯ ಡಾ.ಆನಂದ ಪಾಂಡುರಂಗಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಿಂದ ಮಾತ್ರ ಮಕ್ಕಳ ಕೌಶಲ್ಯ ಹೆಚ್ಚಿಸಲು ಸಾಧ್ಯ. ಇಂದಿನ ಪೀಳಿಗೆಯ ಮಕ್ಕಳ ಮಾನಸಿಕ ಸ್ಥಿತಿ ಮತ್ತು ಖಿನ್ನತೆ, ಪರೀಕ್ಷೆ ಒತ್ತಡ ನಿಭಾಯಿಸುವುದರ ಬಗ್ಗೆ ತಿಳಿಸಿದರು.

ಧಾರವಾಡ ಕೆಎಂಎಫ್ ಅಧ್ಯಕ್ಷ ಶಂಕರ ಮುಗದ ಮಾತನಾಡಿದರು. ಸಿಡಾಕ್ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಅಂಗಡಿ, ಉನ್ನತ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಿ. ಎಂ.ನಿಡವಣಿ, ಸಂಸ್ಥೆಯ ಅಧ್ಯಕ್ಷೆ ಪ್ರಭಾ ನಿಡವಣಿ, ಪ್ರೊ.ಕಲ್ಪನಾ ಮಡಕಟ್ಟಿ, ಪ್ರೊ.ನಾಗವೇಣಿ ಮಲ್ಲಾಪೂರ, ಪ್ರೊ. ಅನುಪಮಾ, ಪ್ರೊ.ಸೌಮ್ಯ ಕೋಳೂರ, ಪ್ರೊ.ಇಂದಿರಾ ಕಲಭಾವಿ, ಪ್ರೊ. ಮಹಾಂತೇಶ ಸೊಗಲದ, ಮಹಾಂತೇಶ ಬಡ್ಡಿ ಪ್ರೊ.ನಾಗರಾಜ ಗರಸಂಗಿ ಇತರರು ಉಪಸ್ಥಿತರಿದ್ದರು.

About Author:

Leave Your Comments

Your email address will not be published. Required fields are marked *