COVID-19 Resources for Mental Health Coaches... Learn More

0836-2773878

“ಆಸೆ ಅಪರಿಮಿತ ವರ್ಥವಾಗದಿರಲಿ ಬದುಕಿನ ಹಿತ”

ಆಸೆ ಅಪರಿಮಿತ ವರ್ಥವಾಗದಿರಲಿ ಬದುಕಿನ ಹಿತ.

ಎನ್ನ ಮನಸ್ಸು ಹೊನ್ನು ಹೆಣ್ಣು ಮಣ್ಣ ನೆನನೆನೆದು ನಿಮ್ಮ ನೆನೆಯಲೊಲ್ಲದು ನೋಡ ಎನ್ನ ಕಾಯ ನಿಮ್ಮ ಮುಟ್ಟದ ರಂಸಾರಕರ್ಮವನೆ ಮಾಡುತ್ತಿಪ್ಪುದು ನೋಡ…

ಸಂಸಾರದಲ್ಲಿ ಸವೆಸವೆದು ಅವಿವೇಕಿಯಾದೆನಯ್ಯ. ಎನ್ನ ಅವಿವೇಕವ ಕಳೆದು, ಶಿವತತ್ವವಿವೇಕವನಿತ್ತು ಕರುಣಿಸಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಎಂಬ ಶರಣರ ವಚನದಂತೆ ವಿವೇಕಯುಕ್ತ ಆಸೆ, ಕೋರಿಕೆ ನಮ್ಮದಾಗಬೇಕಿದೆ. ಭವ ಬಂಧನದ ಆಸೆ ಹೊತ್ತು ನಿಜ ಜೀವನ ಮರೆತವರು ನಾವು, ಮನುಷ್ಯ ಎಂದ ಮೇಲೆ ಆಸೆ, ಆಕಾಂಕ್ಷೆ, ಕಾಮನೆಗಳು ಸಹಜ. ಆಯಾ ವಯೋಮಾನಕ್ಕೆ ತಕ್ಕಂತೆ ಅದರ ಸ್ವರೂಪಗಳು ಬದಲಾಗುತ್ತವೆ. ಆಸೆ ಪಡುವುದು ತಪ್ಪಲ್ಲ. ಅದರ ಅವು ನಮ್ಮ ಯಲ್ಲಿರಬೇಕು. ಸಾಧ್ಯಾಸಾಧ್ಯತೆಗಳನ್ನು ನೋಡಿಕೊಂಡು ಆಸ ಪಡುವುದು ಮತ್ತು ಅವುಗಳನ್ನು ಈಡೇರಿಸಲು ಯತ್ನಿಸುವುದು ರೂಕ್ತ. ಆದರೆ ನಮ್ಮ ಮಧ್ಯೆ ಇಂದು ಇದಕ್ಕೆ ವ್ಯತಿರಿಕ್ತವಾದ ದಿವ್ಯಮಾನಗಳು ನಡೆಯುತ್ತಿವೆ.

ಮನುಷ್ಯ ಅಂದುಕೊಂಡಂತೆ ಆಗದಿದ್ದರೆ ವಿಚಲಿತನಾಗುತ್ತಾನೆ.ಕೆರಳುತ್ತಾನೆ. ಆಸೆ ಈಡೇರಿಕೆಗೆ ಇನ್ನಿಲ್ಲದ ವಾಮ ಮಾರ್ಗ ಅನುಸರಿಸುತ್ತಾನೆ. ಪರಿಣಾಮ ನೆಮ್ಮದಿ ಕಳೆದುಕೊಳ್ಳುತ್ತಾನೆ. ಇಲ್ಲಿ ಇರುವ ಸಮಸ್ಯೆ ಎಂದರೆ ಮನುಷ್ಯನಿಗೆ ಸುಖ ಎಂಬ ಪದದ ಪರಿಕಲ್ಪನೆ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು. ಮನಸು ಮೊದಲೇ ಚಂಚಲ, ಕ್ಷಣಕ್ಕೊಂದು ಬಯಕೆ. ಆದರ ತಾಳಕ್ಕೆ ತಕ್ಕಂತೆ ಕುಣಿಯುತ್ತ ಹೊರಟಲ್ಲಿ ಆಗುವ ಅವಾಂತರ ಆಷ್ಟಿಷ್ಟಲ್ಲ. ಇದಕ್ಕೊಂದು ನಿಜವಾದ ಉತ್ತಮ ಉದಾಹರಣೆ ಇಲ್ಲಿದೆ.

ಆಕೆ ಒಬ್ಬ ಸುಂದರ ಯುವತಿ. ಭಗವಂತ ಆಕೆಗೆ ಅತೀ ಸುಂದರ ರೂಪ ಕೊಟ್ಟಿದ್ದ. ಇದು ಆಕೆಯ ಪಾಲಿಗೆ ಹೆಮ್ಮೆಯ ವಿಷಯವೂ ಆಗಿತ್ತು, ಸಹಜವಾಗಿ ಶಾಲೆ, ಕಾಲೇಜುಗಳಲ್ಲಿ ಕೆಲವರು ಆಕೆಗೆ ಮನಸೋತಿದ್ದರು. ಇನ್ನು ಹಲವರು ದುಂಬಾಲು ಕೂಡ ಬಿದ್ದಿದ್ದರು. ಅಕೆಯ ಪ್ರೇಮಪಾಶಕ್ಕೆ ಸಿಲುಕಿ ಏನೇನೋ ಕನಸು ಕಂಡವರು ಅನೇಕರು. ಆದರೆ ಆಕೆಗೆ ತನ್ನ ವೈವಾಹಿಕ ಜೀವನದ ಬಗ್ಗೆಯಾಗಲೀ – ಸಂಗಾತಿ ಬಗ್ಗೆಯಾಗಲೀ ತುಂಬಾ ಬೇರೆಯೇ ಯೋಚನೆಯಿತ್ತು. ಅಂದರೆ ತನ್ನನ್ನು ವರಿಸುವ ಗಂಡು ಹಾಗಿರಬೇಕು, ಹೀಗಿರಬೇಕು ಎಂಬೆಲ್ಲಾ ಕನಸು ಕಂಡಿದ್ದಳು. ಹಣವಂತ, ಗುಣವಂತ ಜತೆಗೆ ತಾನು ಹೇಳಿದ ಹಾಗೆ ಕೇಳಿಕೊಂಡು ತನ್ನೆಲ್ಲ ಆಸೆ, ಆಕಾಂಕ್ಷೆಗಳನ್ನು ಪೂರೈಸುತ್ತ ಸುಖದ ಸುಪ್ಪತ್ತಿಗೆಯಲ್ಲಿ ಮೆರೆಸಬೇಕು ಎನ್ನುವ ಉತ್ಕಟ ಇಚ್ಛೆ ಆಕೆಯದಾಗಿತ್ತು.ಈ ತರಹದ ಇಚ್ಛೆಗೆ ಕಾರಣ ಆಕೆಯ ಸೌಂದರ್ಯ, ಅದಕ್ಕೆ ತಕ್ಕಂತೆ ವರಾನ್ವೇಷಣೆಯೂ ನಡೆಯಿತು. ಆದರೆ ವಿಪರ್ಯಾಸ ಎಂದರೆ ಈಕೆಯ ಎಲ್ಲ ಆಕಾಂಕ್ಷೆಗಳನ್ನು ಈಡೇರಿಸಬಲ್ಲ ಒಬ್ಬನೇ ಒಬ್ಬ ವ್ಯಕ್ತಿ ಇದ್ದ. ಆದರೆ ಅವಳ ಅಪೇಕ್ಷೆಗೆ ತುಸು ಕಡಿಮೆ, ಅವನ ರೂಪವಾಗಿತ್ತು. ಅವನು ಸಹ ಬಂದ ಹುಡುಗಿಯರನ್ನೆಲ್ಲಾ ಆಕೆಯ ರೂಪಕ್ಕೆ ಹೋಲಿಸುತ್ತಾ ವಯಸ್ಸಾಗಿ ಮದುವೆಯಾಗದೆ ಉಳಿದುಬಿಟ್ಟ. ಅವಳಿಗೂ ತನ್ನಾಸೆಯ ವರ ಸಿಗದೇ ವಯಸ್ಸಾಗುತ್ತಾ ಹೋಗಿ ಕೊನೆಗೊಂದು ದಿನ ದೈವಸಂಕಲವೆ ಎಂಬಂತೆ ಆ ವರನಿಗೆ 55 ವಯಸ್ಸಾದಾಗ ಅವಳಿಗೆ 50 ವಯಸ್ಸು. ಅಂತೂ ಇಬ್ಬರೂ ಜೀವನಸಂಗಾತಿ ಹುಡುಕುವಲ್ಲಿ ಯಶಸ್ವಿಯಾದರೇನೋ ನಿಜ, ಇಬ್ಬರಿಗೂ ಅನಿಸಿದ್ದು ಒಂದೇ. ಅಕಸ್ಮಾತ್ ನಮಗೆ ಆಗ ಯಾರಾದರೂ ಅಪ್ತಸಲಹೆ ನೀಡಿದ್ದರೆ ನಾವೂ ಎಲ್ಲರಂತೆ ಸಂಸಾರ ಸುಖ ಅನುಭವಿಸುತ್ತಿದ್ದೆವಲ್ಲಾ? ಆದರೆ ಹುಚ್ಚುಖೋಡಿ ಮನಸ್ಸಿಗೆ ಜೀವನ ಸತ್ಯ ಅರ್ಥವಾಗದೇ ಉಳಿದಿದ್ದಕ್ಕೇ ಬರೀ ಒಬ್ಬರನ್ನೊಬ್ಬರು ನೋಡುತ್ತಾ ಕೂಡು ವಂತಾಯಿತು. ತಾತ್ಪರ್ಯವಿಷ್ಟೇ. ಆಸೆಗಳು ಕೈಗೆಟಕುವಂತಿರಬೇಕು. ಪ್ರಾಕ್ಟಿಕಲ್ ಆಗಿ ಯೋಚಿಸಬೇಕು. ಈ ಮೊದಲೇ ಹೇಳಿದಂತೆ ಮನಸ್ಸು ನೂರೆಂಟು ಆಸೆ ಪಡುತ್ತದೆ, ಆದರೆ ಎಲ್ಲ ಆಸೆಗಳು ಈಡೇರುತ್ತವೆ ಮತ್ತು ಈಡೇರಲೇಬೇಕಂತಲ್ಲ. ಈ ಕಟುವಾಸ್ತವದ ಅರಿವು ಎಲ್ಲರಲ್ಲಿದ್ದರೆ ಸಾಕು, ಆಯಾ ವಯಸ್ಸಿಗೆ ಏನು ಆಗಬೇಕೋ ಅದು ಆಗುತ್ತಾ ಸಾಗಿದರೆ ಎಲ್ಲವೂ ಸುಲಲಿತ, ಇಲ್ಲದಿದ್ದರೆ, ಬರೀ ತಪಿಸುವುದೇ ಜೀವನ ಆಗುತ್ತದೆ. ಇದನ್ನೇ ಹಿರಿಯರಾದ ಡಿವಿಜಿಯವರು ಇರುವ ಭಾಗ್ಯವ ನೆನೆದು /ಬಾರನೆಂಬುದನು ಬಿಡು ಬಾರದು ಬಪ್ಪದು ಬಪ್ಪದು ತಪ್ಪದು… ಎಂದಿದ್ದಾರೆ.

About Author:

Leave Your Comments

Your email address will not be published. Required fields are marked *