COVID-19 Resources for Mental Health Coaches... Learn More
ಆಯ್ಕೆ, ಅನಿವಾರ್ಯ, ಅದೃಷ್ಟ ಎಲ್ಲದಕ್ಕೂ ಅಗತ್ಯ ಶ್ರದ್ದೆ
ಆತನಿಗೆ ಇನ್ನೂ 19 ವರ್ಷ. ಚಿಗುರು ಮೀಸೆ, ಸಣ್ಣ ವಯಸ್ಸಿನಲ್ಲೇ ತಂದೆಯ ಅಕಾಲಿಕ ಅನಾರೋಗ್ಯದ ನಂತರ ಕುಟುಂಬದ ನೊಗ ಹೊರಬೇಕಾಯಿತು. ಆತ ಅಂದುಕೊಂಡಿದ್ದೇ ಬೇರೆ, ಆದದ್ದೇ ಬೇರೆ, ಓದಿದ್ದೇ ಬೇರೆ. ಆದರೆ ಕೌಟುಂಬಿಕ ಕಾರಣಗಳಿಂದಾಗಿ ಬೇರೆ ಊರಿಗೆ ಉದ್ಯೋಗ ಅರಸಿ ಹೋಗಲಾಗದೆ ಏನೂ ಅರಿವಿಲ್ಲದ ಒಂದು ಹೊಸ ಬಿಸಿನೆಸ್‌ಗೆ ಕೈ ಹಾಕಿದ. ಆತನಿಗೆ ಆಯ್ಕೆಯ ಸ್ವಾತಂತ್ರ್ಯವಿರಲಿಲ್ಲ. ಅನಿವಾರ್ಯತೆ ಇತ್ತು. ಹೇಗೋ ಹೊಸ ವ್ಯವಹಾರ, ವ್ಯಾಪಾರಕ್ಕೆ ಧುಮುಕಿದ, ದಿನಕಳೆದಂತೆ ಊಹೆಗೂ ಮೀರಿ ವ್ಯಾಪಾರ ವೃದ್ಧಿಸಿತು. ಎಲ್ಲರೂ ಬೆರಗಾಗುವಂತೆ ಯಶಸ್ಸಿನ ಶಿಖರ ಏರಿದ. ಆತನ ತಾಯಿಗೂ ಮಹದಾಶ್ಚರ್ಯ, ವ್ಯಾಪಾರದ ಎಬಿಸಿಡಿ ಗೊತ್ತಿರದ ಮಗ ಗಣನೀಯ ಸಾಧನೆ ಮಾಡಿದ್ದನ್ನು ಕಂಡು ಸಂತಸಪಟ್ಟರು. ಆತನೂ ಹೌದು, ಯಾವುದೇ ಕೆಲಸವಾಗಲಿ ಯಶಸ್ಸು ನೀಡಬೇಕೆಂದರೆ ಶ್ರದ್ಧೆ ಮುಖ್ಯ. ಜೀವನದಲ್ಲಿ ಎದುರಾಗುವ ಸಂದರ್ಭಗಳೇ ಹಾಗೆ, ಆಯ್ಕೆಯೋ, ಅನಿವಾರ್ಯತೆಯೋ, ಅದೃಷ್ಟದಾಟವೋ ಗೊತ್ತಿಲ್ಲ. ಒಟ್ಟು ಮುನ್ನುಗ್ಗಬೇಕು, ಸೋಲು-ಗೆಲುವು ನಂತರ, ಶ್ರದೆ, ಸ್ಪಷ್ಟ ಗುರಿ ಮತ್ತು ಜವಾಬ್ದಾರಿಯ ಭಾರ ಇದ್ದಲ್ಲಿ ಅದು ತನಗರಿವಿಲ್ಲದಂತೆ ಎಲ್ಲವನ್ನೂ ಕಲಿಸುತ್ತದೆ. ಹೊಸ ದಾರಿ ಸಿಗುತ್ತದೆ. ಆತ ಓದಿದ್ದು ಇಂಜಿನಿಯರಿಂಗ್, ಬೆಂಗಳೂರಿನಂತಹ ಮೆಟ್ರೊ ಸಿಟಿಗೆ ಹೋಗಿ ಸಾಪ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುವ ಮಹದಾಸೆ ಹೊಂದಿದ್ದ, ಆದರೆ ಅನಾರೋಗ್ಯಕ್ಕೀಡಾಗಿದ್ದ ತಂದೆ ಇಹಲೋಕ ತ್ಯಜಿಸಿದರು. ಮನೆಯಲ್ಲಿ ತಾಯಿಯೊಬ್ಬಳೇ. ಮನೆಗೆ ಈತನೇ ಆಸರೆ, ಇದ್ದ ಊರು ಬಿಟ್ಟು ಹೋಗಲಾಗದ ಅನಿವಾರ್ಯತೆಯೂ ಆತನಿಗಿತ್ತು. ಈ ವೇಳೆ ಆತ ತಾಯಿಯ ಅಪೇಕ್ಷೆ ಮೇರೆಗೆ ಸ್ಥಳೀಯವಾಗಿ ಒಂದು ಹಾರ್ಡವೇರ್ ಶಾಪ್ ತೆರೆದ. ಹಂತ ಹಂತವಾಗಿ ಎಲ್ಲ ಪಟ್ಟುಗಳನ್ನು ರೂಢಿಸಿಕೊಳ್ಳುತ್ತಾ ಹೋದ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಶ್ರಮ ಹಾಕಿದ.
ವ್ಯಾಪಾರ `ಚಿಗುರಿತು, ದೂರದ ಊರಿಗೆ ಹೋಗಿ ಸಂಪಾದಿಸುವ ಹಣಕ್ಕಿಂತ ಹೆಚ್ಚು ಹಣ ಇದ್ದ ಬೂರಲ್ಲೇ ಸಂತಸದಿಂದಿದ್ದ. ಇದಕ್ಕೆಲ್ಲ ಕಾರಣ ಶ್ರದ್ಧೆ ಮತ್ತು ಇನ್‌ವಾಲ್‌ಮೆಂಟ್, ಬರಲಾರಂಭಿಸಿತು, ಮೇಲಾಗಿ ತಾಯಿಗೆ ಆಸರೆಯಾದ ಈ ಪ್ರಕರಣ ಒಂದು ಉದಾಹರಣೆಯಷ್ಟೇ ಇಂದಿಗೂ ನಮ್ಮ ಮಧ್ಯೆ ಇಂತಹ ಅಪರಿಚಿತ ವ್ಯಾಪಾರ ಮಾಡಿ ಯಶಸ್ಸು ಕಂಡವರು ಅನೇಕರಿದ್ದಾರೆ. ಅವರ ಕೈ ಹಿಡಿದಿದ್ದು ಕಾಯಕಶ್ರದ್ದೆ ಮತ್ತು ಪ್ರಾಮಾಣಿಕ ಪ್ರಯತ್ನ, ಅನಿರೀಕ್ಷಿತ ಜವಾಬ್ದಾರಿ ಹೆಗಲೇರುತ್ತದೆ. ಆಗ ಧೃತಿಗೆಡದೇ ಎದುರಿಸುವ ಸಾಮರ್ಥ್ಯ, ಚಾಕಚಕ್ಯತೆ ಮತ್ತು ಮನೋಬಲ ನಮ್ಮಲ್ಲಿರಬೇಕು. ದೃಢ ಸಂಕಲ್ಪವೂ ಬೇಕು, ಆರಂಭದಲ್ಲಿ ಸೋಲಾಗಬಹುದು, ಆದರೆ ಅದುವೇ ಅಂತಿಮವಲ್ಲ. ಸತತ ಯತ್ನ, ಪಾಮಾಣಿಕ ಶ್ರಮ ಹಾಕಿದಲ್ಲಿ ಗೆಲುವು ನಮ್ಮದು, ನಮ್ಮ ನಾಡಿನ ಅನೇಕ ಸಾಧಕರ ಯಶೋಗಾಥೆಯನ್ನು ಒಮ್ಮೆ ಅವಲೋಕನ ಮಾಡಿ, ಯಾರೂ ದಿಢೀರನೆ ಯಶಸಿನ ಮೆಟ್ಟಿಲು ಏರಿದವರಲ್ಲ. ಹಂತ ಹಂತವಾಗಿ ಪ್ರಾಮಾಣಿಕವಾಗಿ ಸವೆಸಿದ ದಾರಿ ಅವರನ್ನು ಸಾಧಕರನ್ನಾಗಿಸಿದೆ. ಬದುಕಲು ಕಲಿಯುವ ಜೀವನದ ಸಾರ! ಇದು ಮಾದರಿಯಾಗಬೇಕು. ಗುರಿಯನ್ನು ನೀವು ವಿಚಲಿತಗೊಳಿಸಿದರೆ ಸಾಧಿಸಲು ಸಾಧ್ಯವಿಲ್ಲ. ಯಶಸ್ಸಿಗೆ, ಜೀವನದ ಪ್ರತಿಯೊಂದು ನಿಮಿಷವೂ ಬಹಳ ಮುಖ್ಯ. ಶಿಸ್ತುಬದ್ಧ ಯೋಜನೆ, ಕಾರ್ಯತಂತ್ರ, ನಿರ್ಣಯ, ಸ್ಥಿರತೆ, ಸ್ವಯಂ ಮೌಲ್ಯಮಾಪನ ಮತ್ತು ಸಹಜವಾಗಿ ತಯಾರಿ ಸಾಧನೆಗೆ ಅಗತ್ಯವಿರುತ್ತದೆ. ಸಾಧನೆಯ ಕ್ಷೇತ್ರ ಹೊಸದಿರುವಾಗ ಒಂದಿಷ್ಟು ಹಿರಿಯರ ಅನುಭವ, ಮಾರ್ಗದರ್ಶನ ಮತ್ತು ಸ್ವಲ್ಪ ಅಧ್ಯಯನದ ಅಗತ್ಯವೂ ಇರುತ್ತದೆ. ನಮ್ಮ ಕಣ್ಣ ಮುಂದೆಯೇ ಎಷ್ಟೋ ಮಕ್ಕಳನ್ನ ನೋಡುತ್ತೇವೆ, ತಾವು ಇಚ್ಛೆಪಟ್ಟ ಶೈಕ್ಷಣಿಕ ಆಯ್ಕೆ ಸಿಗದೇ ಇದ್ದರೆ, ಒಂದೆರಡು ವರ್ಷ ಕಾಲೇಜಿಗೆ ಹಾಜರಾದರೂ ಒಮ್ಮಿಂದೊಮ್ಮೆಲೇ ಕಾಲೇಜಿಗೂ ಹೊಗದೇ, ಗುರಿ ಮುಟ್ಟದೆ, ಜೀವನದ ದಿಕ್ಕಿಗೆ ತಿಲಾಂಜಲಿ ಎಸೆಯುವವರನ್ನು ಕಾಣುತ್ತೇವೆ. ಬೇಡಿದ್ದು ಎಲ್ಲರಿಗೂ ಸಿಕ್ಕೇ ಸಿಗುತ್ತದೆ ಎಂಬ ಭ್ರಮೆ ಬಿಡುವವರೆಗೂ ಮನುಷ್ಯನ ಪ್ರಯತ್ನ `ಸಾಧನೆ ಶೂನ್ಯ. ಒಳ್ಳೆಯ ಮಾರ್ಗ ಮತ್ತು ಮಾರ್ಗದರ್ಶನ ಇದ್ದಾಗ ಮಾತ್ರ ಪಾಲಿಗೆ ಬಂದದ್ದು ಪಂಚಾಮೃತ ಆಗುತ್ತದೆ. ರುಚಿ ಮೊದಲೇ ಗೊತ್ತಿರದಿದ್ದರೆ, ರುಚಿಬೆಳೆಸಿಕೊಳ್ಳುವುದೇ ಜಾಣತನ. ಅದುವೇ ಜೀವನದಲ್ಲಿ ಎಲ್ಲವೂ ನಾವಂದುಕೊಂಡಂತೆ ಆಗುವುದಿಲ್ಲ.