COVID-19 Resources for Mental Health Coaches... Learn More
“ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ.”
ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ/ಮನನೊಂದಿದ್ದರೆ ಮಾರ್ಗವೂ ಉಂಟು ಕೆಚ್ಚೆದೆ ಇರಬೇಕು ಎಂದೆಂದೂ….
ಈ ಸಾಲುಗಳು ನಿಜಕ್ಕೂ ಅರ್ಥಗರ್ಭಿತ. ಅದಕ್ಕೆಂದ ನಮ್ಮ ಹಿರಿಯರು ಮರಳಿ ಯತ್ನವ ಮಾಡು ಪ್ರಯತ್ನಕ್ಕೆ ಫಲ ಖಚಿತ ಎನ್ನುತ್ತಿದ್ದರು. ಇದನ್ನೇ ಬದಲಾದ ಸನ್ನಿವೇಶದಲ್ಲಿ, ಅಪಡೇಟ್ ಆಗಿ, ಮಲ್ಟಿಟಾರ್, ಮಲ್ಟಿಸ್ಟಿಲ್ ಅಳವಡಿಸಿಕೊಳ್ಳ ಇಲ್ಲದಿದ್ದರೆ ಕೆಲಸಕ್ಕೆ ಕುತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದು ನೂರಕ್ಕೆ ನೂರರಷ್ಟು ಸತ್ಯ,
ಯಾವುದೇ ವ್ಯಕ್ತಿ ಇರಲಿ ಯಾವುದೇ ಕೆಲಸವಿರಲಿ ಕಾಲಕಾಲಕ್ಕೆ ಅಪಡೇಟ್ ಆಗುತ್ತಿರಬೇಕು. ಕ್ಷಣಕ್ಷಣಕ್ಕೂ ಹೊಸತನ ಹರಿಯುತ್ತಿರುವ ಇಂದಿನ ಕಾಲದಲ್ಲಿ ಅದಕ್ಕೆ ತಕ್ಕಂತೆ ಒಗ್ಗಿಕೊಳ್ಳದಿದ್ದರೆ ಕೆಲಸ ಕಷ್ಟ ಎನಿಸಲಾರಂಭಿಸುತ್ತದೆ, ಕೆಲಸಕ್ಕೆ ಹೋಗಬೇಕು ಎಂದರೆ ಒಂದು ತರಹದ ಬೇಸರ, ಜುಗುಪ್ಪೆ, ಮೂಡಲಾರಂಭಿಸುತ್ತದೆ. ದಿನಗಳು ಉರುಳಿದಂತೆ ಇದು ಮಾನಸಿಕ ಖಿನ್ನತೆಗೆ ಎಡೆ ಮಾಡಿಕೊಡುತ್ತದೆ. ಅದರಿಂದ ಆ ವ್ಯಕ್ತಿಯ ವೈಯಕ್ತಿಕ ಜೀವನದ ಜತೆ ಜತೆಗೆ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಖಿನ್ನತೆಗೊಳಗಾದ ಆ ವೃಕ್ತಿ ಸದಾ ಒತ್ತಡದಲ್ಲಿರುತ್ತಾನೆ.
ಸಮಸ್ಯೆಯನ್ನು ಹೇಳಲಾಗದೆ ಬಿಡಲಾರದೆ ತೊಳಲಾಡುತ್ತಿರುತ್ತಾನೆ. ಈ ವ್ಯಕ್ತಿಯ ಚಿಂತೆ ಕ್ರಮೇಣ ಎಲ್ಲರಿಗೂ ಅವರಿಸುತ್ತದೆ. ಹೀಗೆ ಮಾನಸಿಕ ತೊಳಲಾಟದ ಸರಣಿ ಶುರುವಾಗುತ್ತದೆ. ನೆಮ್ಮದಿ ಮರೀಚಿಕೆಯಾಗುತ್ತದೆ. ಈ ತರಹದ್ದೇ ಸಮಸ್ಯೆ ಹೊತ್ತು ಮೊನ್ನೆಯಷ್ಟೇ ಒಬ್ಬರು ಬಂದಿದ್ದರು. ಅವರು ಉನ್ನತ ಹುದ್ದೆಯಲ್ಲಿದ್ದವರು. ಇನ್ನೂ 3ರಿಂದ 4 ವರ್ಷ ಸೇವೆಯೂ ಇದೆ. ಆದರೆ ಅವರ ಕಾರ್ಯಕ್ಷೇತ್ರದಲ್ಲಿ ಆದ ಬದಲಾವಣೆಗಳು ಅಂದರೆ ಹೊಸ ಕಾರ್ಯವೈಖರಿ ಇವರಿಗೆ ಹೊಂದುತ್ತಿಲ್ಲ ಅಥವಾ ಅದನ್ನು ಅನುಸರಿಸಲು ಇವರಿಂದ ಆಗುತ್ತಿಲ್ಲ. ಹೀಗಾಗಿ ಒಂದು ತರಹದ ಕೀಳರಿಮೆ ಅವರಲ್ಲಿ ಮನೆ ಮಾಡಿತ್ತು. ಕಚೇರಿಗೆ ಹೋಗುವುದೆಂದರೆ ಅಲರ್ಜಿ ಎನ್ನುವಷ್ಟರ ಮಟ್ಟಿಗೆ ಅದು ಬಂದು ತಲುಪಿತ್ತು. ಕಚೇರಿಯಲ್ಲಿ ತನ್ನ ಕಿರಿಯ ಸಹೋದ್ಯೋಗಿಗಳನ್ನು ಕೆಲಸದ ಹೊಸ ವಿಧಾನಗಳ ಬಗ್ಗೆ ಕೇಳಿ ತಿಳಿದುಕೊಳ್ಳಬೇಕೆಂದರೆ ಅವರಿಗೆ ಏನೋ ಒಂದು ತರಹದ ಕೀಳರಿಮೆ, ಮುಜುಗರ ಎದುರಾಗತೊಡಗಿತ್ತು. ಇದು ಅವರ ಕಚೇರಿಯ ಕೆಲಸದ ಮೇಲೆ ಪುಣಾಮಬೀರತೊಡಗಿತು. ಈ ವ್ಯಕ್ತಿ ಕಚೇರಿಯಲ್ಲಿ ಎದುರಿಸುತ್ತಿರುವ ಈ ಸಮಸ್ಯೆ ಮನೆ ಮಂದಿ ಎದುರು ವಿವರಿಸಲಾಗದೆ ಖಿನ್ನತೆಗೆ ವ ಒಳಗಾಗಿದ್ದರು. ಮುಖದ ಮೇಲೆ ಚಿಂತೆಯ ಕಾರ್ಮೋಡ ಆವರಿಸಿತ್ತು.ಅದರೂ ಈ ವ್ಯಕ್ತಿಯ ಸಂಕಟ, ತೊಳಲಾಟ ನೋಡಲಾಗದೆ ಕುಟುಂಬ ಸದಸ್ಯರು ಇವರನ್ನು ಬಲವಾಗಿ ವಿಚಾರಿಸಿದಾಗ ನೈಜ ವಿಷಯ ಬಹಿರಂಗವಾಯಿತು. ಒಂದು ದಿನ ಎಲ್ಲ ಸದಸ್ಯರು ಕುಳಿತು ಪರಸ್ಪರ ಚರ್ಚಿಸಿದರು. ಮುಂದೆ ಸ್ನೇಹಿತರೊಬ್ಬರ ಸಲಹೆ ಮೇರೆಗೆ ನನ್ನ (ಮನೋವೈದ್ಯರ ಬಳಿ ಬಂದರು).ಧೈರ್ಯ, ಇಚ್ಛಾಶಕ್ತಿ ಬೇಕು:
ಇದು ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ. – ಇಂದು ಅನೇಕರು ಈ ತರಹದ ಸಮಸ್ಯೆಗೆ ಒಳಗಾಗಿದ್ದಾರೆ. ಈ * ಮಾದರಿಯ ಸಮಸ್ಯೆಗಳಿಗೆ ಪರಿಹಾರ ಎಂದರೆ ಮನಸ್ಸಿದ್ದರೆ ಮಾರ್ಗ ಎಂಬ ಉಕ್ತಿಯ ಪಾಲನೆ, ಹೌದು,
ಮನುಷ್ಯ ಮನಸ್ಸು ಮಾಡಿದರೆ ಆಗದ ಕೆಲಸ ಯಾವುದೂ ಇಲ್ಲ. ಆರಂಭದಲ್ಲಿ ಹೊಸ ಕೆಲಸ ಅಥವಾ ಹೊಸ ರೀತಿ, ನೀತಿ ಕಷ್ಟವಾಗಬಹುದು ಹಾಗಂತ ಅದಕ್ಕೆ ಬೆನ್ನು ತೋರಿಸಿ ಪಲಾಯನ ಮಾಡುವುದಲ್ಲ. ಅದನ್ನೇ ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡುವುದಿದೆಯಲ್ಲ, ಅದು ನಿಜವಾದ ಸಾಧನೆ ಇದನ್ನು ಮಾಡಿದಲ್ಲಿ ಎಳ್ಳಷ್ಟೂ ಅಗದು ವೇದನೆ, ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ಅದನ್ನು ಹಾಡುಕುವ ವ್ಯವಧಾನ, ವಿಧಾನ ಗೊತ್ತಿರಬೇಕಷ್ಟೇ, ಹೊಸ ತಂತ್ರಜ್ಞಾನ, ಮಾದರಿ ಅರಿಯಬೇಕು. ದಿಢೀರ್ ಆಗಿ ಒಗ್ಗಿಕೊಳ್ಳಲು ಅಥವಾ ಕಲಿಯಲು ಆಗದಿದ್ದರೂ ಯತ್ನ ಬಿಡಬಾರದು, ಕಲಿಕೆ ನಿರಂತರ ಪ್ರಕ್ರಿಯೆ, ಸದಾ ಹೊಸದನ್ನು ಕಲಿಯುತ್ತಿರಲೇಬೇಕು. ಜಾನದಾಹ ನೈಜ ನಿರಂತರವಾಗಿರಬೇಕು.ಉಸಿರಿರುವರೆಗೂ ಜ್ಞಾನದ ಹಸಿವು ಇತು ನಮ್ಮಲ್ಲಿ ಇರಬೇಡಿ ಎಂದು ಜಗತ್ತಿನ ಖ್ಯಾತ ತತ್ವಜ್ಞಾನಿ ಸಾಕ್ರೆಟಿಸ್ ಕೂಡ ಹೇಳಿದ್ದು, ಗೊತ್ತಿಲ್ಲದನ್ನು ಗೊತ್ತಿರುವವರ ಬಳಿ ಕೇಳಿ ತಿಳಿಯುವುದರಿಂದ ನಾವೇನು ದಡ್ಡರಾಗುವುದಿಲ್ಲ. ಮೇಲಾಗಿ ಯಲ್ಲ. ಹಾಗೇನಾದರೂ ಕೇಳದೆ ಸುಮ್ಮನೆ ಕುಳಿತರೆ ಅದರಿಂದ ನಮಗೆ ನಷ್ಟ 5. ಈ ಹೆಚ್ಚು ಹುದ್ದೆಯ ಹಮ್ಮು ಬಿಮ್ಮು ಬಿಟ್ಟು ಸಾಗಿದರೆ ಎಲ್ಲವೂ ಸುಲಲಿತ. ಅದು ಇಂದಿನ ತುರ್ತು ಅಗತ್ಯವೂ ಹೌದು.