COVID-19 Resources for Mental Health Coaches... Learn More

0836-2773878

ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ, ಬದುಕಲ್ಲಿ ಫಜೀತಿ.

ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ, ಬದುಕಲ್ಲಿ ಫಜೀತಿ.!

ಬಾಳಿ ಬದುಕಬೇಕಾಗಿದ್ದ ಅಪಾಪ್ತ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂಬ ಹುಚ್ಚಾಟಕ್ಕೆ ಬಿದ್ದು ಜೀವ ಕಳೆದುಕೊಂಡ ಪ್ರಕರಣಗಳ ಸಂಖ್ಯೆಗೇನೂ ಕೊರತೆಯಿಲ್ಲ, ಬದುಕು ಎಂದರೇನೇ ತಿಳಿಯದ ಆ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂದು ಕಾಣಿಯಾದವರ ಬಗ್ಗೆ ಆಗಾಗ್ಗೆ ಕೇಳುತ್ತಿರುತ್ತೇವೆ. ಈ ತರಹದ ಪಟನೆಗಳು ಸಾಮಾಜಿಕ ಪಿಡುಗಾಗಿ ಪರಿಣಮಿಸಿವೆ.ಇದಕ್ಕೆಲ್ಲಾ ಕಾರಣ ಹದಿಹರೆಯದ ವಯಸ್ಸಲ್ಲಿ ಮೂಡುವ ಪ್ರೀತಿ-ಪ್ರೇಮದ ಮಾಯೆ, ಈ ಪ್ರೀತಿಯನ್ನು ಪಡೆಯಲಾಗದೆ, ಬಿಡಲಾಗದೆ, ಇತ್ತ ಪೋಷಕರಿಗೂ ತಿಳಿಸಲಾಗದೆ ಮನೆ ಬಿಟ್ಟು ಹೋಗುವವರ ಸಂಖ್ಯೆಯೇ ಹೆಚ್ಚು ಎಂಬ ಅಂಶ ಕೆಲ ಸಮೀಕ್ಷೆಗಳಿಂದ ತಿಳಿದು ಬಂದಿದೆ.ಈ ಮಧ್ಯೆ ಇಂಟರ್‌ನೆಟ್‌ನ ಪ್ರಭಾವ ಮುಖ್ಯವಾಗಿ ಮೊಬೈಲ್ ಗೇಮಿಂಗ್, ಚಾಟಿಂಗ್ ಮೊದಲಾದವು ಅಪ್ರಾಪ್ತ ವಯಸ್ಸಿನ ಇಂಥ ಪ್ರೀತಿಗೆ ನೀರೆರೆಯುತ್ತವೆ.

ಹದಿಹರೆಯದವರು ತಮ್ಮ ಹೆಚ್ಚು ಸಮಯವನ್ನು ವರ್ಚುವಲ್ ಪ್ರಪಂಚದೊಂದಿಗೆ ಸಂಪರ್ಕಿಸಲು ಕಳೆಯುತ್ತಿದ್ದಾರೆ. ಮಕ್ಕಳಿಗೆ ಪ್ರಪಂಚವು ಬಹಳ ಚಿಕ್ಕದೆನಿಸಿದೆ. ಮತ್ತು ಅದರ ಬೆಂಬಲವಿಲ್ಲದೆ ಜೀವನವು ಅಪೂರ್ಣ ಎನ್ನುವ ಮಟ್ಟಕ್ಕೆ ಬಂದಿದೆ. ಇದರ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿ ಸರಿ ದಾರಿ ತೋರುವ ಕೆಲಸ ಆಗಬೇಕಿದೆ. ಮಕ್ಕಳು ದೊಡ್ಡವರಾಗಿದ್ದು ತಿಳಿಯುವುದೇ ಇಲ್ಲ. ವಯಸ್ಸು 15 ದಾಟಿದರೂ ನಾವು ಅವರನ್ನು ಮಕ್ಕಳಂತೆ ನೋಡುತ್ತೇವೆ. ಆದರೆ ಮಕ್ಕಳ ದೇಹದಲ್ಲಿ, ಮನಸ್ಸಿನಲ್ಲಿ ಸಾಕಷ್ಟು ಬದಲಾವಣೆ ನಡೆಯುತ್ತಿರುತ್ತದೆ. 15 ವರ್ಷದಿಂದ 17 ವರ್ಷ ವಯಸ್ಸಿನ ಮಕ್ಕಳನ್ನು ಹದಿಹರೆಯದ ಮಕ್ಕಳು ಎಂದುಕರೆಯಲಾಗುತ್ತದೆ. ಈ ವಯಸ್ಸಿನ ಮಕ್ಕಳನ್ನು ಸಂಭಾಳಿಸುವುದು ಸುಲಭವಲ್ಲ. ಬದಲಾದ ಕಾಲ: ಈಗ ಸಾಕಷ್ಟು ಬದಲಾವಣೆಯನ್ನು ನಾವು ನೋಡಬಹುದು. ಬದಲಾಗುತ್ತಿರುವ ಪರಿಸರಕ್ಕೆ ತಕ್ಕಂತೆ ಪೋಷಕರು ತಮ್ಮ ಸ್ವಭಾವದಲ್ಲಿ ಬದಲಾವಣೆ ತರುವುದು ಅನಿವಾರ್ಯ.

ಮಕ್ಕಳು ಹಾಳಾಗುತ್ತಾರೆ ಎನ್ನುವ ಕಾರಣಕ್ಕೆ ಅವರ ಮೇಲೆ ಹೆಚ್ಚು ಓದಿನ ಹೊಣೆ ಹೇರುವುದು, ಮನೆಯಲ್ಲಿಯೇ ಕೂಡಿ ಹಾಕುವುದು, ಅತಿಯಾದ ಸ್ತಿನಿಂದ ಬೆಳೆಸುವುದು, ಮಾತು ಮಾತಿಗೆ ಬೈಯ್ಯುವುದು, ಹೊಡೆಯುವುದು ಮಕ್ಕಳನ್ನು ಮತ್ತಷ್ಟು ಹಾಳು ಮಾಡುತ್ತದೆ. ಕೆಟ್ಟ ದಾರಿ ತುಳಿಯುವಂತೆ ಮಾಡುತ್ತದೆ. ಹೆಣ್ಣು ಮಕ್ಕಳನ್ನು ಹೊಂದಿರುವ ಪಾಲಕರ ಜವಾಬ್ದಾರಿ ಹೆಚ್ಚಿರುತ್ತದೆ. ಹದಿಹರೆಯಕ್ಕೆ ಬಂದ ಮಕ್ಕಳಿಗೆ ಕೆಲ ವಿಷಯವನ್ನು ಪಾಲಕರು ತಿಳಿಸಬೇಕು. ಹಾಗೆಯೇ ಹದಿಹರೆಯಕ್ಕೆ ಬಂದ ಮಗಳು ಕೂಡ ಕೆಲ ವಿಷಯವನ್ನು ಅಗತ್ಯವಾಗಿ ತಿಳಿದಿರಬೇಕಾಗುತ್ತದೆ.ಹೀಗಿರಲಿ ಬದುಕು: ಈ ವಯಸ್ಸಿನಲ್ಲಿ ದಾರಿ ತಪ್ಪಲು ತಪ್ಪ ಸ್ನೇಹಿತರ ಆಯ್ಕೆಯೂ ಕಾರಣ. ಹಾಗಾಗಿ ಒಳ್ಳೆಯ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬೇಕು. ಸಹಚರರನ್ನು ಎಚ್ಚರಿಕೆಯಿಂದ ನಿರ್ಧರಿಸಬೇಕು.

ನೀವು ಹೇಗಿದ್ದರೂ ಚೆಂದ ಎಂಬುದು ನೆನಪಿರಲಿ. ಕಪ್ಪಗಿರಿ, ತೆಳ್ಳಗಿರಿ, ಯಾವುದೇ ಕಾರಣಕ್ಕೂ ನಿಮ್ಮ ನೋಟ ನಿಮ್ಮ ಉತ್ಸಾಹವನ್ನು ತಗ್ಗಿಸಲು ಬಿಡಬಾರದು. ನಿಮ್ಮ ನೋಟ, ಮೈಮಾಟದ ಬಗ್ಗೆ ಯಾರಾದರೂ ಪ್ರತಿಕ್ರಿಯಿಸಿದರೆ ಪ್ರತ್ಯುತ್ತರ ಕೊಡಬೇಕು. ಧೈರ್ಯ ಇರಬೇಕು. ಆತ್ಮವಿಶ್ವಾಸವೂ ಬೇಕು. ತನ್ನ ಬಗ್ಗೆ ಕೀಳರಿಮೆ ಇರಬಾರದು. ನಾನೂ ಕುಟುಂಬಕ್ಕೆ ಮುಖ್ಯ, ನನ್ನ ಅಭಿಪ್ರಾಯಗಳು ಕುಟುಂಬಕ್ಕೆ ಮುಖ್ಯವಾಗುತ್ತವೆ ಎಂಬುದನ್ನು ತಿಳಿದಿರಬೇಕು. ಹದಿಹರೆಯ ಎನ್ನುವುದು ಸಾಮಾನ್ಯವಾಗಿ ಪ್ರೌಢಾವಸ್ಥೆಯಿಂದ ಕಾನೂನುಬದ್ಧ ವಯಸ್ಕರಾಗುವ ಅವಧಿಯಲ್ಲಿ ಸಂಭವಿಸುವ ಭೌತಿಕ ಮತ್ತು ಮಾನಸಿಕ ಬೆಳವಣಿಗೆಯ ಪರಿವರ್ತನೆಯ ಹಂತ ಹದಿಹರೆಯದ ದೈಹಿಕ, ಮಾನಸಿಕ, ಸಾಂಸ್ಕೃತಿಕ ಅಭಿವ್ಯಕ್ತಿಗಳು ಮೊದಲೇ ಪ್ರಾರಂಭವಾಗುತ್ತವೆ. ಸಮಾಜದಲ್ಲಿ ಹದಿಹರೆಯದ ಬಗ್ಗೆ ತಿಳಿವಳಿಕೆ ಮನೋವಿಜ್ಞಾನ, ಜೀವಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ ಶಿಕ್ಷಣ ಮತ್ತು ಮಾನವಶಾಸ್ತ್ರ ಸೇರಿದಂತೆ ವಿವಿಧ ದೃಷ್ಟಿಕೋನಗಳ ಮಾಹಿತಿಯನ್ನು ಅವಲಂಬಿಸಿದೆ. ಈ ಎಲ್ಲ ದೃಷ್ಟಿಕೋನಗಳಲ್ಲಿ, ಹದಿಹರೆಯದವರನ್ನು ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಸಂಕ್ರಮಣ ಅವಧಿ ಎಂದು ಪರಿಗಣಿಸಲಾಗುತ್ತದೆ.

ಇದು ಶಿಕ್ಷಣ, ತರಬೇತಿ, ಉದ್ಯೋಗ ಮತ್ತು ನಿರುದ್ಯೋಗವನ್ನು ಒಳಗೊಂಡಿರುವ ಅನೇಕ ಪರಿವರ್ತನೆಗಳ ಒಂದು ಅವಧಿಯಾಗಿದೆ. ನೀತಿಯುಕ್ತ ಕಥೆಯನ್ನು ಹಿರಿಯರು ಕಿರಿಯರಿಗೆ ಹೇಳುವುದಲ್ಲದೆ, ಮೌಲ್ಯಯುತ ಸಂಬಂಧಗಳ ಅರಿವು ಮೂಡಿಸಬೇಕು, ಹುಡುಗ ಅಥವಾ ಹುಡುಗಿ ಅನ್ಯರೊಂದಿಗೆ ಗೆಳೆತನ ಬಯಸಿ ತನ್ನ ನೋವು ನಲಿವುಗಳನ್ನು ಹಂಚುತ್ತ ತನಗರಿವಿಲ್ಲದೆ ಮೋಸ ಹೋಗುತ್ತ ಆಪ್ತಾಪ್ತ ವಯಸ್ಸಿನಲ್ಲಿ ಹಾಳಾದ ಉದಾಹರಣೆಗಳು ಹಲವಿವೆ. ಇದಕ್ಕೆ ಕಡಿವಾಣ ಇಂದಿನ ತುರ್ತು ಅಗತ್ಯತೆಯಾಗಿದೆ. ಅಪ್ರಾಪ್ತ ವಯಸ್ಸಿನ ಪ್ರೀತಿಯು ಜೀವನವನ್ನೇ ಕಸಿದುಕೊಳ್ಳುವಂತಾಗಬಾರದು. ಪಾಲಕರು ಮಕ್ಕಳ ವರ್ತನೆಗಳ ಕಡೆಗೆ ಗಮನ ಹರಿಸಿದಾಗ ಮಾತ್ರ ಆಗುವ ಅನಾಹುತಗಳನ್ನು ತಪ್ಪಿಸಬಹುದು.

About Author:

Leave Your Comments

Your email address will not be published. Required fields are marked *