COVID-19 Resources for Mental Health Coaches... Learn More

0836-2773878

ಅಜಿತ ಮನೋಚೇತನದ ಪವಿತ್ರ ಕಾರ್ಯಕ್ಕೆ ಕೈಜೋಡಿಸುವುದು ಎಲ್ಲರ ಕರ್ತವ್ಯ: ಕಾಗೇರಿ

ಜನಮಾಧ್ಯಮ, ಶಿರಸಿ:

ಮನೋಚೇತನ ಟ್ರಸ್ಟ್ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಲ್ಲಿ ವಿಶ್ವಾಸ, ನಂಬಿಕೆ ,ತುಂಬುವ ಪವಿತ್ರವಾದ ಕೆಲಸ ಮಾಡುತ್ತಿದೆ. ಇಂತಹ ಸಂಸ್ಥೆಗೆ ಕೈಜೋಡಿಸಬೇಕಾಗಿದ್ದು ಇಡೀ ಸಮಾಜದ ಕರ್ತವ್ಯವಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅಜಿತ ಮನೋಚೇತನ ಶಾಲೆಯ ಆವರಣದಲ್ಲಿ ನಡೆದ ಅಜಿತ ಮನೋಚೇತನ ಟ್ರಸ್ಟಿನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ವೃತ್ತಿ ತರಬೇತಿ ಕೇಂದ್ರದ ಶಂಕುಸ್ಥಾಪನ ನೆರವೇರಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂಸ್ಥೆಯು ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಪಾಲಕರ ಪಾಲಿಗೆ ಮನೆಯಂತಾಗಿದ್ದು ಅವರ ಮಕ್ಕಳಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಂತಹ ಬಹುದೊಡ್ಡ ಕೆಲಸ ಮಾಡುತ್ತಿದೆ. ನಾವು ಮಾಡಿದ ಕೆಲಸಗಳು ಸಮಾಜದ ಮೇಲೆ ಪರಿಣಾಮವಾಗುವಂತಿರಬೇಕು ಎನ್ನುವುದಕ್ಕೆ ಆಜಿತ್ ಮನೋಚೇತನ ನಮಗೆ ಉತ್ತಮ ಉದಾಹರಣೆಯಾಗಿದ್ದು ಈ ಸಂಸ್ಥೆಯನ್ನು ಕಟ್ಟಿ 25 ವರ್ಷಗಳ ಕಾಲ ಮುನ್ನಡೆಸಿದ ಭೂಮಾ ವಕೀಲರು ಸೇರಿದಂತೆ ಎಲ್ಲ ಮಹನೀಯರನ್ನು ಮನೋಚೇತನ ಸಂಸ್ಥೆ ಇದುವರೆಗೂ ನಡೆದು ಬಂದ ಹಾದಿ ರಾಜ್ಯಕ್ಕೆ ಮಾದರಿಯಾಗಿದ್ದು ಮುಂದೆಯೂ ಕೂಡಾ ಇನ್ನೂ ಹೆಚ್ಚಿನ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗೆ ಬೆಳಕಾಗುವ ಮೂಲಕ ಶಮಾನೋತ್ಸವ ಪೂರೈಸಲೆಂದು ಹೇಳಿದರು.

ಅದಮ್ಯ ಚೇತನ (ಬೆಂಗಳೂರು) ದ ಅಧ್ಯಕ್ಷ ಮಾತನಾಡಿ ಈ ಅಜಿತ ಮನೋಚಿತನ ಸಂಸ್ಥೆಯು ಸಮಾಜಕ್ಕೆ ಅನುಕರಣೀಯವಾದ ಸೇವೆ ನೀಡುತ್ತಿದೆ ಎಂದು ವಿಶೇಷವಾಗಿ ಪರಿಸರದ ಕಾಳಜಿಯ ಬಗ್ಗೆ ಮಾತನಾಡಿದ ಅವರು ನಾವು ಜಿ ಪರಿಸರವನ್ನು ಇಂದು ಕಾಪಾಡಿಕೊಳದಿದ್ದರ ಮುಂದೆ ಗಂಭೀರವಾದ ಸಮಸ್ಯೆ ಅನವಿಸಬೇಕಾಗುತ್ತದೆ.ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಅಪಾಯವಾಗಿದ್ದು, ಅದರ ಬಳಕೆಗೆ ಕಡಿವಾಣ ಹಾಕಬೇಕಿದೆ.ಕಸದಿಂದ – ಎನ್ನುವಂತೆ ಮನೆಯಲ್ಲಿ ಉತ್ಪತ್ತಿಯಾಗುವ ಷ ಕಸದ ಮರುಬಳಕೆಯಾಗುವಂತೆ ಮಾಡುವ ಕ ಕಲೆಯನ್ನು ಮಹಿಳೆಯರು ಕಲಿಯಬೇಕು. ಉತ್ತಮವಾದ ಆಕ್ಸಿಜನ್‌ ಗಾಗಿ ನಾವೆಲ್ಲರೂ ರಸ್ತೆ ಗಿಡ ಬೆಳೆಸುವದಕ್ಕೆ ಕೈಜೋಡಿಸಬೇಕಾಗಿದೆ. ಒಂದು ಮರ [03 ಕೆ.ಜಿ ಆಕ್ಸಿಜನ್ ನೀಡುತ್ತದೆ. ಜಕ್ಕೆ ಆದರೆ ಒಂದು ಮನುಷ್ಯನಿಗೆ 700 ಕೆ.ಜಿ ಬೇಕಾಗಿರುವುದರಿಂದ ಏಳು ಮರ ಬೆಳೆಸಬೇಕಾದ ಅನಿವಾರ್ಯತ ಒಬ್ಬರು – ಯ ಇದೆ.ಈ ಹಿನ್ನೆಲೆಯಲ್ಲಿ ಸಚಿವರಾಗಿದ್ದ ಭ ನಾವು ಅನಂತಕುಮಾರವರು ಅದಮ್ಯ ಚೇತನ’ದ ಎದ್ದರೆ ಮೂಲಕ ಗಿಡ ನೆಡುವ ಕಾರ್ಯಕ್ರಮವನ್ನು ಮಸ್ಯೆ ಆರಂಭಿಸಿದರು.

ನಮ್ಮ ಸಂಸ್ಥೆಯಿಂದ ಗಿಡ ನೆಡುವ ಕಾರ್ಯಕ್ರಮ ಆರಂಭವಾಗಿ 344 ವಾರವಾಗಿದೆ ಎಂದರು. ಅತಿಯಾದ ರಸಾಯನಿಕ ಬಳಕೆ, ಇಂದನ ಬಳಕೆಯಿ೦ದಲೂ ಪರಿಸರದ ಮೇಲೆ ಪರಿಣಾಮ ಬಿರುತ್ತಿದೆ.ಆದ್ದರಿಂದ ಸರಕಾರ ಸಾವಯವ ಗೊಬ್ಬರ ಹಾಗೂ ಪೆಟ್ರೋಲಿಯಮ್ ಇಂಧನಕ್ಕೆ ಹೊರತಾಗಿ ಪರ್ಯಾಯ ಇಂಧನಕ್ಕೆ ಚಿಂತನೆ ನಡೆಸಬೇಕಿದೆ ಎಂದರು.

ಅಜಿತ ಮನೋಚೇತನ ಸರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಒಂದು ಸೇವಾ ಪ್ರತಿಷ್ಠಾನದ ಸಂಚಾಲಕ ಸುಧಾಕರ ಅವರು ಅಜಿತ ಮನೋಚೇತನ ಶಾಲೆಯಲ್ಲಿ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಕಲಿತಿದ್ದಾರೆಂದರೆ ಅದಕ್ಕೆ ಮುಖ್ಯ ಕಾರಣ ಅವರಿಗೆ ಕಲಿಸಿದ ಶಿಕ್ಷರು.ಅವರು ಪ್ರೀತಿಯಿಂದ ಈ ಮಕ್ಕಳಿಗೆ ಶಿಕ್ಷಣ ನೀಡಿದ್ದರಿಂದ ಆ ಮಕ್ಕಳು ಕೂಡಾ ಅಷ್ಟೇ ಪ್ರೀತಿಯಿಂದ ಕಲಿತಿದ್ದಾರೆ.ಆದ್ದರಿಂದ ನಿಜವಾದ ಶ್ರೇಯಸ್ಸು ಶಿಕ್ಷಕರಿಗೆ ಸಲ್ಲಬೇಕೆಂದರು.ಎಲ್ಲಿ ಪ್ರೀತಿ ಇರುವುದೋ ಅಲ್ಲಿ ಮಾತ್ರ ಮಾತೃತ್ವದ ಭಾವನೆ ಮಕ್ಕಳಲ್ಲಿ ತುಂಬುತ್ತದೆ.ಈ ಶಿಕ್ಷಕರು ಮಕ್ಕಳಿಗೆ ಅಂತಹ ಭಾವ ತುಂಬಿದ್ದಾರೆ.ದೇವರು ಎಲ್ಲರಲ್ಲಿಯೂ ಇದ್ದಾನೆ.ಆ ದೇವರನ್ನು ಕಾಣುವ ದೇವತ್ತಬೇಕು.

About Author:

Leave Your Comments

Your email address will not be published. Required fields are marked *