COVID-19 Resources for Mental Health Coaches... Learn More
“ಅಚಲ ಆತ್ಮವಿಶ್ವಾಸದಿಂದ ಸಾಧನೆ ಸಾಧ್ಯ”

ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲ. ಅಚಲ ಆತ್ಮವಿಶ್ವಾಸವಿದ್ದರೆ ಸಾಧನೆ ಸಾಧ್ಯ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಆಶ್ರಯದಲ್ಲಿ ನಗರ ಹೊರವಲಯದ ನೇಚರ್ ಫಸ್ಟ್ ಇಕೋ ವಿಲೇಜ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಬಾಲಮಂದಿರಗಳ ಮಕ್ಕಳ ರಾಜ್ಯ ಮಟ್ಟದ ಮಕ್ಕಳ ಕಥಾಕಮ್ಮಟ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಾಲಮಂದಿರದ ಮಕ್ಕಳು ಹೊಸ ಕನಸು ಮತ್ತು ಭರವಸೆಯಿಂದ ಮುಂದೆ ಸಾಗಬೇಕು. ಅವಮಾನ ಮಾಡಿದವರಿಂದ ಸನ್ಮಾನ ಮಾಡಿಸಿಕೊಳ್ಳುವಂಥ ಸಾಧನೆ ಮಾಡಬೇಕು ಎಂದರು. ಮೂರು ತಂಡಗಳ ಮಕ್ಕಳ ಕಥಾ ಕಮ್ಮಟದಲ್ಲಿ 28 ಜಿಲ್ಲೆಗಳ 136 ಮಕ್ಕಳು, 28 ಕೇರ್ ಟೇಕರ್‌ಗಳು ಭಾಗಿಯಾಗಿದ್ದರು. ಮಕ್ಕಳ ಕನಸು ಮತ್ತು ನೋವುಗಳನ್ನು ಒಳಗೊಂಡ ಮಕ್ಕಳೇ ಬರೆದಿರುವ 400 ಪುಟಗಳ ಕಥಾಕಮ್ಮಟ ಪುಸ್ತಕ ಬಿಡುಗಡೆ ಮಾಡಲಾಯಿತು. ಮನೋವೈದ್ಯ ಡಾ. ಆನಂದ ಪಾಂಡುರಂಗಿ, ಅಕಾಡೆಮಿಯ ಯೋಜನಾಧಿಕಾರಿ ಭಾರತಿ ಶೆಟ್ಟರ, ಕಮ್ಮಟ ನಿರ್ದೇಶಕ ನೀಲಕಾಂತಗೌಡ ಹಾಲಪ್ಪಗೌಡರ, ಕೇರ್‌ಟೇಕರ್ ಗಳು ಹಾಗೂ ಬಾಲಮಂದಿರದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಮೃತ ಸಾಣಿಕೊಪ್ಪ ನಿರೂಪಿಸಿದರು. ಸುವರ್ಣಲತಾ ಮಠದ ವಂದಿಸಿದರು.

