COVID-19 Resources for Mental Health Coaches... Learn More

0836-2773878

“ಬದಲಾವಣೆ ತಂಗಾಳಿ ಬೀಸಲಿ ಸಮೃದ್ದಿ ನಳನಳಿಸಲಿ”

ಬದಲಾವಣೆ ತಂಗಾಳಿ ಬೀಸಲಿ ಸಮೃದ್ದಿ ನಳನಳಿಸಲಿ ಇಂಗ್ಲಿಷ್ ಕ್ಯಾಲೆಂಡರ ಪ್ರಕಾರ ಮತ್ತೊಂದು ವರ್ಷ ಕಳೆದಿದೆ. ಹೊಸ ವರ್ಷವನ್ನು ಬರಮಾಡಿಕೊಂಡಿದ್ದೇವೆ. ಈ ವೇಳೆ ನಮ್ಮ ಆಲೋಚನೆ, ಜೀವನಶೈಲಿ ಸೇರಿದಂತೆ ಎಲ್ಲವೂ ಹೊಸತಾಗಬೇಕು. ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಎಲ್ಲರೂ ಒಗ್ಗೂಡಲೇಬೇಕು. ಮನಸ್ಸು ಸದಾ ಒಳಿತನ್ನು ಬಯಸುವಂತಾಗಬೇಕು, ಸ್ವಸ್ಥವಾಗಿರಬೇಕು. ಇನ್ನೊಬ್ಬರು ಬದಲಾಗಬೇಕೆಂದು ಬಯಸುವ ನಾವು ಏಕೆ ಬದಲಾಗಬಾರದು ಎಂದು ಯೋಚಿಸಬೇಕು. ಅದುವೇ ನಿಜವಾದ ಬದಲಾವಣೆ. ನಮ್ಮ ಯೋಚನಾ ಲಹರಿ ಬದಲಾದರೆ ಎಲ್ಲವೂ ಬದಲಾವಣೆ ಹಂತಕ್ಕೆ ಬಂದಂತೆ. ಬದಲಾವಣೆ ಬಯಸಲು ಆರಂಭಿಸಿದಾಗ ನಮ್ಮ ನ್ಯೂನತೆಗಳು, ದೌರ್ಬಲ್ಯಗಳ ಅರಿವಾಗುತ್ತದೆ ಮತ್ತು ಅವುಗಳ ಸರಿಪಡಿಸಿಕೊಳ್ಳಲು ಮುಂದಾಗುವುದೇ ಒಂದು ರೀತಿಯ ಬದಲಾವಣೆಯನ್ನು ಒಪ್ಪಿಕೊಂಡಂತೆ. ವಿಶೇಷವಾಗಿ ಇಂದಿನ ಯುವ ಸಮೂಹ ಅಂದುಕೊಂಡ ಬದಲಾವಣೆಯೇ ಬೇರೆ. ನಾನು ಹೀಗೇ ಇರಬೇಕು. ನಾನು ಮಾಡಿದ ಕೆಲಸಕ್ಕೆ ಇದೇ ರೀತಿ ಫಲಿತಾಂಶ ಬರಬೇಕು ಎಂಬ ಸ್ವಾಭಿಮಾನ ಅವರಲ್ಲಿ ಮನೆ ಮಾಡಿದೆ. ಹೊಂದಾಣಿಕೆಯೇ ಮಾಯವಾಗಿದೆ. ಮೌಲ್ಯಾಧಾರಿತ ಬದುಕಿಗಿಂತ, ವಸ್ತು ಆಧಾರಿತ ಬದುಕಿನ ಬಗ್ಗೆ ವ್ಯಾಮೋಹ ಅವರನ್ನು ಅವರಿಸಿದೆ. ಸ್ವಾರ್ಥ ಮನೋಭಾವನೆ ಹೆಚ್ಚಿದೆ.

ದೊಡ್ಡ ನೌಕರಿ ಬೇಕು, ಎಲ್ಲದರಲ್ಲೂ ನಾನೇ ಅಗ್ರಗಣ್ಯನಾಗಿರಬೇಕು, ಕಷ್ಟದಲ್ಲಿರುವವರಿಗೆ ನನ್ನಿಂದಾದ ಸಹಾಯ ಮಾಡಬೇಕು ಎಂಬ ಹಲವಾರು ಆಸೆಗಳನ್ನು ಮನಸ್ಸಲ್ಲಿಟ್ಟುಕೊಂಡು ಗುರಿಯ ಕಡೆ ಹೆಜ್ಜೆ ಹಾಕಿರುತ್ತಾರೆ. ಈ ನಿಟ್ಟಿನಲ್ಲಿ ಸಾಗುವಾಗ ಎದುರಾಗುವ ಸಮಸ್ಯೆಗಳಿಂದ ಪಾರಾಗಲು ಇಲ್ಲಸಲ್ಲದ ನೆಪ ಹೇಳುತ್ತಾ ಗುರಿಗೆ ತಿಲಾಂಜಲಿ ಇಡುತ್ತಾರೆ. ಇದರ ಬದಲಾಗಿ ಗುರಿ ಬದಲಿಸದೆ ನಾವು ಮಾಡುವ ಕಾರ್ಯ, ಕೈಗೊಳ್ಳುವ ಮಾರ್ಗಗಳನ್ನು ಬದಲಿಸಬೇಕು. ಉತ್ತಮ ಮಾರ್ಗದರ್ಶಕರನ್ನು ಹುಡುಕಿ ಅವರ ಸಲಹೆಯೊಂದಿಗೆ ಗುರಿಗಳನ್ನು ಈಡೇರಿಸುವತ್ತ ಗಮನಹರಿಸಬೇಕು. ಪ್ರತಿಯೊಂದು ವೈಫಲ್ಯಕ್ಕೆ ಮತ್ತೊಬ್ಬರತ್ತ ಬೊಟ್ಟು ಮಾಡುವುದನ್ನು ಬಿಡಿ. ಅನ್ಯರ ಸಾಧನೆ, ಪ್ರತಿಭೆ ಗೌರವಿಸಿ. ನಿಮಗೆ ಗೊತ್ತಿಲ್ಲದ ವಿಷಯವನ್ನು ಗೊತ್ತಿರುವವರಿಂದ ಕೇಳಿ ಕಲಿಯಿರಿ. ಅವರು ದೊಡ್ಡವರೇ ಇರಲಿ, ಸಣ್ಣವರೇ ಇರಲಿ. ಮಾಹಿತಿ, ಜ್ಞಾನ ಪಡೆಯುವುದು ನಮ್ಮ ಗುರಿಯಾಗಿರಲಿ, ಏನೇನು ಬದಲಾವಣೆ? ಜೀವನದಲ್ಲಿ ಸಮಯ ಅಥವಾ ಕಾಲ ಬಲು ಮುಖ್ಯ. ಇದು ಯಾರಿಗೂ ಕಾಯುವುದಿಲ್ಲ. ಅದರ ಪಾಡಿಗೆ ಅದು ಓಡುತ್ತಲೇ ಇರುತ್ತದೆ. ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ. ಇಂದು ಮಾಡುವ ಕೆಲಸವನ್ನು ನಾಳೆಗೆ ಮುಂದೂಡದೆ ಇಂದೇ ಮಾಡುವುದನ್ನು ರೂಢಿಸಿಕೊಳ್ಳಬೇಕು. ಬದಲಾವಣೆ ಆರಂಭದಲ್ಲಿ ಸ್ವಲ್ಪ ಕಷ್ಟಕರ ಎನಿಸಬಹುದು. ಆದರೆ ಕ್ರಮೇಣ ಅದು ರೂಢಿಯಾಗುತ್ತಾ ಸಾಗುತ್ತದೆ. ಅದಕ್ಕೆ ಒಗ್ಗಿಕೊಳ್ಳುತ್ತಾ ಹೋದಂತೆ ಎಲ್ಲವೂ ಸಲೀಸಾಗಿ ಬಿಡುತ್ತದೆ. ಆ ಬದಲಾವಣೆಗೆ ಬೇಕಿರುವುದು ಮತ್ತೆ ಮನಸ್ಸು, ಆ ಮನಸ್ಸು ಇರುವುದು ನಮ್ಮಲ್ಲೇ ಅದನ್ನು ಗಟ್ಟಿಗೊಳಿಸಬೇಕಿರುವುದು ನಾವೇ. ಅದನ್ನೇ ಹಿರಿಯರು ‘ಮನಸ್ಸಿದ್ದರೆ ಮಾರ್ಗ. ಒಳಿತಿಗೂ ಕೆಡಕಿಗೂ ಅದುವೇ ಮೂಲ’ ಎಂದರು. ಇನ್ನು ಸಿದ್ದೇಶ್ವರ ಸ್ವಾಮಿಗಳು ತಮ್ಮ ಪ್ರವಚನಗಳಲ್ಲಿ ‘ಪ್ರತಿ ಸಾಧನೆಗಾಗಿ ನಮ್ಮ ತನು, ಮನ, ಬುದ್ದಿ ಎಲ್ಲದರ ಸಹಭಾಗಿತ್ವ ಅಗತ್ಯ. ಸಾಧನೆಗೆ ಉತ್ಸಾಹವಿರಬೇಕು. ಬದುಕಿನಲ್ಲಿ ಸಂತಸದ ಹೂವು ಅರಳಲು ಮನ ಒಳಿತಿಗೆ ಮಿಡಿಯಬೇಕು. ಬಂಧನಕ್ಕೂ- ಮೋಕ್ಷಕ್ಕೂ, ದುಃಖಕ್ಕೂ ಸುಖಕ್ಕೂ ಕಾರಣ ಇದೇ ಮನಸ್ಸು. ನಿಸರ್ಗದ ವಿಶೇಷ ಕಾಣಿಕೆಯಾಗಿರುವ ಮನಸ್ಸನ್ನು ಬಳಸುವ ಹದ ಯಾರಿಗೆ ತಿಳಿದಿದೆಯೋ ಅವರು ನಿಜವಾದ ಸುಖಿಗಳು. ಈ ಮನದ ಬಳಕೆಯ ಜಾಣೆ ಇಲ್ಲದವರೇ ದುಃಖೆಗಳು’ ಎಂದು ಬಲು ಮಾರ್ಮಿಕವಾಗಿ ವಿವರಿಸಿದ್ದಾರೆ. ಕಂಡ ಕನಸು ನನಸಾಗಲಿಲ್ಲ ಎಂಬ ನೋವಿನಿಂದ, ಪ್ರೀತಿಸಿದ ಹುಡುಗಿ ಸಿಗಲಿಲ್ಲ ಮುಂತಾದ ಕ್ಷುಲ್ಲಕ ಕಾರಣಗಳನ್ನಿಟ್ಟುಕೊಂಡು ಶುರು ಮಾಡಿದ ಚಟಗಳು ಕ್ರಮೇಣ ಜೀವನದ ಅವಿಭಾಜ್ಯ ಅಂಗವಾಗುತ್ತವೆ. ದೈನಂದಿನ ಜೀವನಕ್ರಮವಾಗುತ್ತವೆ. ಇದಕ್ಕೆ ಗುಡ್ ಬೈ ಹೇಳಲೇಬೇಕು. ಎಲ್ಲಕ್ಕಿಂತ ಮಿಗಿಲಾಗಿ ಸಾಧನೆಗೆ ಸ್ವಯಂ ಶಿಸ್ತು ಹೆಚ್ಚು ಮುಖ್ಯ. ನಿಮ್ಮನ್ನು ನೀವು ಸ್ವಯಂ ಶಿಸ್ತಿನಿಂದ ತರಬೇತಿಗೊಳಿಸಿ. ಯಶಸ್ಸಿನೆಡೆಗೆ ಸಾಗಲು ಅಡ್ಡದಾರಿ ಒಳಿತಲ್ಲ. ಪರಿಶ್ರಮದ ಹಾದಿ ಯಶಸ್ಸಿಗೆ ರಹದಾರಿ. ಇದು ಎಲ್ಲರ ಜವಾಬ್ದಾರಿ. ಇಷ್ಟೆಲ್ಲಾ ಜವಾಬ್ದಾರಿ ಅರಿತ ಮೇಲೆ ಮತ್ತು ಹೊತ್ತ ಮೇಲೆ ಬದಲಾವಣೆ ತನ್ನಿಂದ ತಾನೇ ಶುರುವಾಗುತ್ತದೆ. ಅದನ್ನು ಇನ್ನೊಬ್ಬರು ಮಾಡಲಿ ಎಂದು ಕಾಯುತ್ತಾ ಕೂರುವುದು ತರವಲ್ಲ, ನಾವು ಬಯಸುವ ಬದಲಾವಣೆ ಮೊದಲು ನಮ್ಮಲ್ಲಿ ತಂದುಕೊಳ್ಳೋಣ. ಇಂದಿನಿಂದಲೇ

About Author:

Leave Your Comments

Your email address will not be published. Required fields are marked *